ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ ಪುರಸಭೆ ವತಿಯಿಂದ ಗುರುವಾರ ಜಲ ಶಕ್ತಿ ಅಭಿಯಾನ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶ್ರೀನಿವಾಸಪುರ: ನಾಗರಿಕರು ಮಳೆ ನೀರು ಕೊಯಿಲು ಮಾಡಲು ಮುಂದಾಗಬೇಕು. ಜಲಮೂಲಗಳು ಮಾಲೀನ್ಯಗೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಹೇಳಿದರು.
ಪಟ್ಟಣದಲ್ಲಿ ಪುರಸಭೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಜಲ ಶಕ್ತಿ ಅಭಿಯಾನ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂತರ್ಜಲ ವಿಷವಾಗಿ ಮಾರ್ಪಟ್ಟಿದೆ. ನೀರನ್ನು ಶುದ್ಧೀಕರಿಸಿ ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಮಳೆ ನೀರು ಶುದ್ಧ ನೀರಾಗಿದ್ದು, ವೈಜ್ಞಾನಿಕವಾಗಿ ಸಂಗ್ರಹಿಸಿದಲ್ಲಿ ಕುಡಿಯಲು ಯೋಗ್ಯವಾಗಿರುತ್ತದೆ ಎಂದು ಹೇಳಿದರು.
ಅಮೂಲ್ಯವಾದ ನೀರನ್ನು ಪೋಲು ಮಾಡಬಾರದು. ಮಳೆಗಾಲದಲ್ಲಿ ಮನೆ ಪರಿಸರದಲ್ಲಿ ನಿಲ್ಲುವ ನೀರು ಕೆಟ್ಟು ರೋಗ ರುಚಿನ ಹರಡದಂತೆ ನೊಡಿಕೊಳ್ಳಬೇಕು. ಪಟ್ಟಣದ ಸ್ವಚ್ಛತೆ ವಿಷಯದಲ್ಲಿ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.
ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್, ಪೃಥ್ವಿರಾಜ್, ಸಿಎಒ ಕೆ.ಎನ್.ರಾಜೇಶ್ವರಿ, ಇ ಇ ಶೇಖರ್ ರೆಡ್ಡಿ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.