ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ಪರಿಸರ ಉಳಿಸಿ ನಾಡನ್ನು ಬೆಳಸಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ ಟ್ರಸ್ಟ್(ರಿ)ಕೋಲಾರಜಿಲ್ಲೆಯ ಶ್ರೀನಿವಾಸಪುರತಾಲ್ಲೂಕಿನಪುರಸಭೆವಲಯದರಂಗಾರಸ್ತೆಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯಆವರಣದಲ್ಲಿ ಪರಿಸರಕಾರ್ಯಕ್ರಮ ಹಮ್ಮಿಕೊಂಡಿದ್ದು,ಈ ಕಾರ್ಯಕ್ರಮವನ್ನುದಾಸ ಸಾಹಿತ್ಯ ಪರಿಷತ್ಅದ್ಯಕ್ಷರಾದ ಶ್ರೀಮತಿ ಮಾಯಾಬಾಲಚಂದ್ರ, ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ, ಕೃಷಿ ಮೇಲ್ವಿಚಾರಕರಾದಅರುಣ್ಕುಮಾರ್ರವರು ಹಾಗೂ ತಾಲೂಕು ಪಂಚಾಯಿತಿ ಸದಸ್ಯೆ ಹಾಗೂ ಒಕ್ಕೂಟದಅದ್ಯಕ್ಷರಾದÀ ಶ್ರೀಮತಿ ನಾಗವೇಣಿರೆಡ್ಡಿರವರಿಂದಉದ್ಘಾಟಿಸಲಾಯಿತು.
ದಾಸ ಸಾಹಿತ್ಯ ಪರಿಷತ್ಅದ್ಯಕ್ಷರಾದ ಶ್ರೀಮತಿ ಮಾಯಾಬಾಲಚಂದ್ರರವರು ಮಾತನಾಡಿ ನಮ್ಮ ಶ್ರೀನಿವಾಸಪುರತಾಲೂಕಿನಲ್ಲಿಪ್ರತಿಯೊಂದುಮನಿಯಿಂದ ಹೊರಹೋಗುವಅನುಪಯುಕ್ತ ವಸ್ತುಗಳಾದ ಕಸವನ್ನುಉಪಯೋಗವಾಗುವರೀತಿಯಲ್ಲಿಹಸಿಕಸ ಹಾಗೂ ಒಣಕಸಎಂದು ವಿಂಗಡನೆ ಮಾಡಿ ಕಳುಹಿಸುವುದುರಿಂದ ಅದು ಪುನಃ ಬಳಕೆಗೆ ಬರುವಂತಾಗಿರುತ್ತದೆ. ಇದನ್ನು ಪ್ರತಿಯೊಬ್ಬ ಮಹಿಳೆಯರು ತಮ್ಮ ಮನೆಗಳಲ್ಲಿ ಅನುಸರಿಸಬೇಕೆಂದು ಪುರಸಭೆಯ ಸ್ವಚ್ಚತೆಯ ಬಗ್ಗೆ ಸುಲಲಿತವಾಗಿ ತಿಳಿಸಿದರು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಿಂದರಂಗಾರಸ್ತೆ ಶಾಲೆಯಲ್ಲಿ ಪರಿಸರಮತ್ತುಸ್ವಚ್ಚತೆ ನಿರ್ವಹಣೆಹಾಗೂ ಬೀಜದಂಡೆತಯಾರಿಕೆಯ ಬಗ್ಗೆ ಅರಿವುಕಾರ್ಯಕ್ರಮದಲ್ಲಿಗೊಬ್ಬರ ತಯಾರಿಸಿಕೊಳ್ಳುವ ವಿಧಾನವನ್ನು ತಿಳಿಸಿದರು. ತಾಲೂಕು ಪಂಚಾಯಿತಿ ಸದಸ್ಯೆ ನಾಗವೇಣಿರೆಡ್ಡಿ ಮಾತನಾಡಿ ಪರಿಸರಮತ್ತುಸ್ವಚ್ಚತೆಯ ಬಗ್ಗೆ ಹಾಗೂ ಅದರ ಮಹತ್ವವನ್ನು ತಿಳಿಸಿದರು. ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ದೇವರೆಡ್ಡಿರವರು ಮಾತನಾಡಿ ಒಳ್ಳೆಯ ಗಾಳಿ ಬೆಳಕಿನ ಜೊತೆಗೆ ಸ್ವಚ್ಚತೆಯುತಂಬಾ ಮಹತ್ತರವಾದದು ಹಾಗೂ ಅದರಿಂದಎಲ್ಲಾ ಮಕ್ಕಳು ಆರೋಗ್ಯದಿಂದಇರಲು ಸಹಾಯವಾಗಿರುತ್ತದೆಎಂದು ತಿಳಿಸಿರುತ್ತಾರೆ. ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಮಾತನಾಡಿ ಪರಿಸರಎಂಬುದುಒಂದು ಪ್ರಾಕೃತಿಕಕೊಡುಗೆಅದನ್ನು ನಾವೆಲ್ಲಾರೂ ಸೇರಿ ಉಳಿಸಿ ಬೆಳಸಿದರೆ ಅದು ನಮ್ಮನ್ನು ಮತ್ತು ನಮ್ಮನಾಡನ್ನು ಉಳಿಸುತ್ತದೆ ಎಂದು ತಿಳಿಸಿದರು.