ಶ್ರೀನಿವಾಸಪುರ: ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ದಿಂಬಾಲ ಅಶೋಕ್‌, ಉಪಾಧ್ಯಕ್ಷರಾಗಿ ಸುಬ್ಬರೆಡ್ಡಿ ಅವಿರೋಧ ಆಯ್ಕೆ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ: ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ದಿಂಬಾಲ ಅಶೋಕ್‌, ಉಪಾಧ್ಯಕ್ಷರಾಗಿ ಸುಬ್ಬರೆಡ್ಡಿ ಅವಿರೋಧ ಆಯ್ಕೆ 
  ಪಿಎಲ್‌ಡಿ ಬ್ಯಾಂಕ್‌ ನೂತನ ಅಧ್ಯಕ್ಷ ದಿಂಬಾಲ ಅಶೋಕ್‌ ಆಯ್ಕೆಯಾದ ಬಳಿಕ ಬ್ಯಾಂಕ್‌ ಆವರಣದಲ್ಲಿ ಸೇರಿದ್ದ ಬ್ಯಾಂಕ್‌ ನಿರ್ದೇಶಕರು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿ, ಬ್ಯಾಂಕ್‌ ಉಳಿಯಬೇಕಾದರೆ ಸಾಲ ಪಡೆದುಕೊಂಡಿರುವ ಫಲಾನುಭವಿಗಳು, ಕಾಲ ಕಾಲಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಬೇಕು. ರೈತರು ಪಡೆದಿರುವ ಸಾಲ ಮನ್ನಾ ಆಗುವುದಿಲ್ಲ. ಈ ವಿಷಯದಲ್ಲಿ ಕೆಲವರು ಫಲಾನುಭವಿಗಳಿಗೆ ತಪ್ಪು ಸಂದೇಶ ನೀಡಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು. 
  ಕೆ ೇಂದ್ರ ಬ್ಯಾಂಕ್‌ನಿಂದ ವಾಹನ ಖರೀದಿ ಸಾಲ ನೀಡಲು ರೂ.1 ಕೋಟಿ ಮಂಜೂರಾಗಿದೆ. ಈ ಹಣದಲ್ಲಿ ರೈತರಿಗೆ ಸಾಲ ನೀಡಲು ಬರುವುದಿಲ್ಲ. ಕಾರಣ ಸಾಲ ಪಡೆದಿರುವ ರೈತರು ಸಾಲ ಮರುಪಾವತಿ ಮಾಡುತ್ತಿಲ್ಲ. ಮರುಪಾವತಿ ಆಗದೆ ಕೃಷಿ ಕ್ಷೇತ್ರಕ್ಕೆ ಮತ್ತೆ ಸಾಲ ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಾಲ ಪಡೆದಿರುವ ರೈತರು ತಮ್ಮ ಹಾಗೂ ಬ್ಯಾಂಕ್‌ನ ಹಿತದೃಷ್ಟಿಯಿಂದ ತಪ್ಪದೆ ಮರುಪಾವತಿ ಮಾಡಬೇಕು ಎಂದು ಹೇಳಿದರು.
  ಉಪಾಧ್ಯಕ್ಷ ಸುಬ್ಬರೆಡ್ಡಿ ಮಾತನಾಡಿ, ಅರ್ಹ ಫಲಾನುಭವಿಗಳಿಗೆ ಸಾಲ ನೀಡಲು ಬ್ಯಾಂಕ್‌ ಬದ್ಧವಾಗಿದೆ. ಆದರೆ ಈಗಾಗಲೆ ಪಡೆದಿರುವ ಸಾಲ ಮರುಪಾವತಿ ಆಗಬೇಕು. ಇದನ್ನು ಅರಿತು ನಡೆದುಕೊಳ್ಳಬೇಕು ಎಂದು ಹೇಳಿದರು.
  ರಾಯಲ್ಪಾಡು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ ರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಅದ್ಯಕ್ಷ ಎಂ.ಶ್ರೀನಿವಾಸನ್‌, ನಿರ್ದೇಶಕ ಎಲ್‌.ಗೋಪಾಲಕೃಷ್ಣ, ಮುಖಂಡರಾದ ಬಿ.ಎಂ.ಪ್ರಕಾಶ್‌, ಕೆ.ಕೆ.ಮಂಜು, ಹರ್ಷ, ವೆಂಕಟರೆಡ್ಡಿ, ಸತ್ಯನಾರಾಯಣ, ಕೃಷ್ಣಾರೆಡ್ಡಿ ಇದ್ದರು.