ಶ್ರೀನಿವಾಸಪುರ: ಪಟ್ಟಣದ ಇಂದಿರಾ ನಗರ ಬಡಾವಣೆ ನಿವಾಸಿಗಳು ಗುರುವವಾರ ಕುಡಿಯುವ ನೀರು ಪೂರೈಸುವಂತೆ ಪುರಸಭೆ ಅಧಿಕಾರಿಗಳನ್ನು ಆಗ್ರಹಿಸಿ ಪಂಪ್‌ ಹೌಸ್‌ ಎದುರು ಪ್ರತಿಭಟನೆ ನಡೆ

ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದ ಇಂದಿರಾ ನಗರ ಬಡಾವಣೆ ನಿವಾಸಿಗಳು ಗುರುವವಾರ ಕುಡಿಯುವ ನೀರು ಪೂರೈಸುವಂತೆ ಪುರಸಭೆ ಅಧಿಕಾರಿಗಳನ್ನು ಆಗ್ರಹಿಸಿ ಪಂಪ್‌ ಹೌಸ್‌ ಎದುರು ಪ್ರತಿಭಟನೆ ನಡೆ

 

  ಬಡವಾಣೆಗೆ 8 ತಿಂಗಳಿಂದ ಅಗತ್ಯ ಪ್ರಮಾಣದ ನೀರು ಸರಬರಾಜಾಗುತ್ತಿಲ್ಲ. ಕೂಲಿ ಮಾಡುವ ಜನರು ದುಡಿದ ಅರ್ಧಷ್ಟು ಹಣವನ್ನು ನೀರು ಖರಿದಿಸಲು ಬಳಸಬೇಕಾಗಿದೆ. ನೀರು ಪೂರೈಸುವಂತೆ ಪುರಸಭೆ ಅಧಿಕಾರಿಗಳಲ್ಲಿ ಪದೇ ಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಡವಣೆಯ ಮಹಿಳೆಯರು ದೂರಿದರು.

  ‘ಬಡಾವಣೆಯಲ್ಲಿ ಕುಡಿಯುವ ನೀರಿಗಾಗಿ 8 ಕೊಳವೆ ಬಾವಿಗಳನ್ನು ನಿರ್ಮಿಸಲಾಗಿದೆ. ಎಲ್ಲ ಕೊಳವೆ ಬಾವಿಗಳಲ್ಲೂ ನೀರಿದೆ. ಆ ಪೈಕಿ 2 ಕೊಳವೆ ಬಾವಿಗಳಿಗೆ ಸ್ಟಾಟ್ಟರ್ ಅಳವಡಿಸಿಲ್ಲ. 1 ಕೊಳವೆ ಬಾವಿಗೆ ಕೇಬಲ್‌ ಇಲ್ಲ. 4 ಕೊಳವೆ ಬಾವಿಗಳ ಪಂಪ್‌ ಸೆಟ್‌ ಕೆಟ್ಟಿದೆ. ಸಧ್ಯಕ್ಕೆ 1 ಕೊಳವೆ ಬಾವಿಯಲ್ಲಿನ ನೀರೂ ಪೂರೈಕೆಯಾಗುತ್ತಿದೆ. ಇದು ಏನೇನೂ ಸಾಕಾಗುತ್ತಿಲ್ಲ. ಸಾವಿರ ಸಲ ದೂರು ನೀಡಿದರೂ ಪುರಸಭೆ ಅಧಿಕಾರಿಗಳಿ ಈ ಕಡೆ ತಲೆ ಹಾಕುತ್ತಿಲ್ಲ’ ಎಂದು ಪುರಸಭೆ ಸದಸ್ಯೆ ಫಿರ್‌ದೊಸ್‌ ಉನ್ನೀಸಾ ಗೆ ತಿಳಿಸಿದರು.

  ‘ಕೊಳವೆ ಬಾವಿ ದುರಸ್ತಿ ಮಾಡುವ ಗುತ್ತಿಗೆದಾರರಿಗೆ ಪುರಸಭೆ ಹಣ ಬಾಕಿ ಇರುವುದರಿಂದ ಪಂಪ್‌ ಮೋಟಾರ್‌ ರಿಪೇರಿ ನೆನೆಗುದಿಗೆ ಬಿದ್ದಿದೆ. ಸದಸ್ಯರು ಹಾಗೂ ನಾಗರಿಕರ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬಡಾವಣೆ ನಿವಾಸಿಗಳೊಂದಿಗೆ ಪುರಸಭೆ ಕಚೇರಿ ಎದುರು ಧರಣಿ ನಡೆಸಲು ಉದ್ದೇಶಿಸಲಾಗಿದೆ’ ಎಂದು ಪುರಸಭೆ ಸದಸ್ಯ ಷಬ್ಬೀರ್‌ ಹೇಳಿದರು.