ಶ್ರೀನಿವಾಸಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ.

 

 

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

ಶ್ರೀನಿವಾಸಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ.

 

 

ಶ್ರೀನಿವಾಸಪುರ ಪತ್ರಕರ್ತರು ಭಿನಾಭಿಪ್ರಾಯಗಳನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂಧಿಸುವಂತಹ ಸುದ್ಧಿಗಳನ್ನು ಮಾಡುವುದು ಮೂಲಕ ಮಾದರಿ ಪತ್ರಕರ್ತರಾಗಬೇಕು ಹಾಗೂ ಸುದ್ಧಿಯಲ್ಲಿ ಒಬ್ಬರಗಿಂತ ಒಬ್ಬರು ಲೇಖನಗಳನ್ನು ಮಾಡುವುದರ ಮೂಲಕ ಸಮಾಜದ ಕಣ್ಣು ತೆರೆಸಬೇಕೆಂದು ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ ಬಿ.ವಿ. ಗೋಪಿನಾಥ್ ತಿಳಿಸಿದರು.
ಶ್ರೀನಿವಾಸಪುರ ಕಾರ್ಯನಿರತ ಪತ್ರಕರ್ತರ ಸಂಘ ನೂತನ ಪದಾಧಿಕಾರಿಗಳನ್ನು ಅಭಿನಂಧಿಸಿಮಾತನಾಡಿ ಪತ್ರಕರ್ತರ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣಕ್ಕೆ ನೂತನ ಪದಾಧಿಕಾರಿಗಳು ಶ್ರಮಿಸಬೇಕು. ನಿಮ್ಮ ನಿಮ್ಮಲ್ಲಿಯೇ ಭಿನ್ನಾಭಿಪ್ರಾಯಗಳನ್ನು ತರುವಂತಹ ಕೆಲಸ ಮಾಡುವವರು ಇದ್ದಾರೆ. ಈ ಬಗ್ಗೆ ಆಗಾಗ ಸಭೆಗಳನ್ನು ನಡೆಸುವ ಮೂಲಕ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ತಿಳಿಯಗೊಳ್ಳಿಸಕೊಳ್ಳಬೇಕು. ವೈಯಕ್ತಿ ವಿಚಾರಗಳನ್ನು ಸಂಘದಲ್ಲಿ ತರಬಾರದು. ಸಂಘ ಎಲ್ಲಕ್ಕಿಂತಲು ದೊಡ್ಡದು ಎಂಬುವುದನ್ನು ಮರೆಯದೆ ಕೇವಲ ವಿಜಿಟಿಂಗ್ ಕಾರ್ಡ್, ಲೆಟ್ರೆಡ್‍ಗಳಿಗೆ ಸಂಘವನ್ನು ಸೀಮಿತಗೊಳಸಬಾರದು ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಸಂಘದ ಅಧ್ಯಕ್ಷ ವಿ. ಮುನಿರಾಜು ನೂತನ ಪದಾಧಿಕಾರಿಗಳನ್ನು ಅನುಮೋದಿಸಿ ಶ್ರೀನಿವಾಸಪುರದಲ್ಲಿ 8ವರ್ಷಗಳಿಂದ ಸಂಘದ ಚಟುವಟಿಕೆಗಳು ನಿಷ್ಕ್ರಿಯಗೊಂಡಿದ್ದವು. ಇನ್ನು ಮುಂದೆ ಸಂಘ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಚಂದ್ರಶೇಖರ್ ಮಾತನಾಡಿದರು.
ನೂತನ ಸಂಘದ ಪದಾಧಿಕಾರಿಗಳು:- ಅಧ್ಯಕ್ಷರಾಗಿ ಜಿ.ಎಸ್. ಚಂದ್ರಶೇಖರ್, ಗೌರವಾಧ್ಯಕ್ಷರಾಗಿ ಎಸ್.ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿಯಾಗಿ ಯಮನೂರು ನಾಗರಾಜ್, ಉಪಾಧ್ಯಕ್ಷರಾಗಿ ಹೆಚ್. ರಮೇಶ್, ಸಿ.ಕೃಷ್ಣಮೂರ್ತಿ, ಕಾರ್ಯದರ್ಶಿಗಳಾಗಿ ಲಕ್ಷ್ಮಣಬಾಬು, ಯಲ್ದೂರು ಮುರಳಿಮೋಹನ್, ಅವಿರೋಧವಾಗಿ ಆಯ್ಕೆಯಾದರು.

ಕಾರ್ಯಕಾರಿ ಸದಸ್ಯರಾಗಿ ರವಿಕುಮಾರ್ , ಅರಿಕೆರೆ ರಮೇಶ್ ಕುಮಾರ್ , ಕೆ . ಎಂ . ಸೋಮು ಶೇಖರ್‌ , ಚುಂಬಕಾವಣಿ ಲಕ್ಷಣ್ , ಗೌನಿಪಲ್ಲಿ ಇಸ್ಮಾಹಿಲ್ , ಲಕ್ಷ್ಮೀಪುರ ನಾಗೇಂದ್ರ , ಅವಿರೋಧವಾಗಿ ಆಯ್ಕೆಯಾದರು . 
ಈ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮೀಣ ಕಾರ್ಯದರ್ಶಿ ಶಬ್ಬೀರ್ ಅಹಮ್ಮದ್, ಸದಸ್ಯರಾದ ಎಂ.ವಿ ಗೌಡ, ಕೆ.ವಿ ನಾಗರಾಜ್ ,
 ಉಪೇಂದ್ರ , ಗಡಿನಾಡ ಕೂಗು ಲಕ್ಷ್ಮಣ್ , ಪತ್ರಕರ್ತರಾದ ಎಂ . ನಾರಾಯಣಸ್ವಾಮಿ , ಚೌಡಪ್ಪ , ಚೌಡರೆಡ್ಡಿ , ವಿಶ್ವನಾಥ ಶಾಸ್ತಿ , ಎನ್ . ಎಸ್ . ಮೂರ್ತಿ , ಸುರೇಶ್ , ಶ್ರೀನಿವಾಸ್ , ಮುಂತಾದವರು ಇದ್ದರು .