ಶ್ರೀನಿವಾಸಪುರ ತಾಲ್ಲೂಕಿನ ಮಲ್ಲಗಾನಹಳ್ಳಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಧಮ್ಮ ಜಾಗೃತಿ ಅಭಿಯಾನದ ದೀಕ್ಷಾ ಸಮಾರಂಭವನ್ನು ಬೌದ್ಧ ಭಿಕ್ಕುಗಳು ಉದ್ಘಾಟಿಸಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ ತಾಲ್ಲೂಕಿನ ಮಲ್ಲಗಾನಹಳ್ಳಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಧಮ್ಮ ಜಾಗೃತಿ ಅಭಿಯಾನದ ದೀಕ್ಷಾ ಸಮಾರಂಭವನ್ನು ಬೌದ್ಧ ಭಿಕ್ಕುಗಳು ಉದ್ಘಾಟಿಸಿದರು.
ಶ್ರೀನಿವಾಸಪುರ: ಜನರು ಬುದ್ಧ ಮಾರ್ಗದಲ್ಲಿ ನಡೆಯಬೇಕು. ಹಿಂಸೆ ಬಿಟ್ಟು ಶಾಂತಿಯುತ ಜೀವನ ಮಾಡಬೇಕು  ಎಂದು ಬೌದ್ಧ ಭಿಕ್ಕು ಸುಗತಲೋಕಪಾಲೋ ಹೇಳಿದರು.
  ತಾಲ್ಲೂಕಿನ ಮಲ್ಲಗಾನಹಳ್ಳಿ ಗ್ರಾಮದಲ್ಲಿ ವಿಶ್ವ ಬುದ್ಧ ಧಮ್ಮ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಧಮ್ಮ ಜಾಗೃತಿ ಅಭಿಯಾನದ ದೀಕ್ಷಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬುದ್ಧನ ಪಂಚಶೀಲ ತತ್ವಗಳು ಹಾಗೂ ತ್ರಿರತ್ನಗಳಿಗೆ ಶರಣಾದಾಗ ಮಾತ್ರ ಸತ್ಯದ ದರ್ಶನವಾಗುತ್ತದೆ. ಧಮ್ಮ ದೀಕ್ಷೆ ಸ್ವೀಕರಿಸಿದ ಮೇಲೆ ಕವಲು ದಾರಿಯಲ್ಲಿ ನಡೆಯುವುದನ್ನು ಬಿಡಬೇಕು. ದೀಕ್ಷೆಗೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಆರ್‌ಪಿಐ ಅಧ್ಯಕ್ಷ ಡಾ. ಎಂ.ವೆಂಕಟಸ್ವಾಮಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿ, ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಸಮ ಸಮಾಜದ ಪ್ರತೀಕ. ಅವರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
    ಡಾ. ಎಚ್‌.ಆರ್‌.ಸುರೇಂದ್ರ ಅಂಬೇಡ್ಕರ್‌ ಅವರ 22 ಸತ್ಯ ವಾಕ್ಯಗಳನ್ನು ಬೋಧಿಸಿದರು. ಸಾಹಿತಿ ಮೂಡ್ಕಾಕು ಚಿನ್ನಸ್ವಾಮಿ ಜ್ಞಾನ ಜ್ಯೋತಿ ಪ್ರತಿಮೆ ಅನಾವಣ ಮಾಡಿದರು. ಧಮ್ಮ ಭಿಕ್ಕುಗಳು ಧಮ್ಮ ಜಾಗೃತಿ ಅಭಿಯಾನ ದೀಕ್ಷೆ ಬೋಧಿಸಿದರು.
  ನಿವೃತ್ತ ಐಜಿಪಿ ಡಾ. ಸುಭಾಷ್ ಭರಣಿ, ನಿವೃತ್ತ ಮುಖ್ಯ ಶಿಕ್ಷಕ ಎಂ.ಪಾಪಣ್ಣ, ಮುಖಂಡರಾದ ಹೂವಳ್ಳಿ ಪ್ರಕಾಶ್‌, ನರಸಿಂಹಪ್ಪ, ರಾಮಾಂಜಮ್ಮ, ನಾರಾಯಣಸ್ವಾಮಿ, ಎಂ.ಲೋಕೇಶ್‌, ಎನ್‌.ಮೂರ್ತಿ, ಆರ್‌.ಎಂ.ಎನ್‌.ರಮೇಶ್‌, ಮುನಿಯಪ್ಪ, ಡಾ. ಜಿ.ಗೋವಿಂದಯ್ಯ, ರಾಜಣ್ಣ, ದೇವಕೃಷ್ಣ, ಎಂ.ಲಗುಮಯ್ಯ ಮತ್ತಿತರರು ಇದ್ದರು.