ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ ತಾಲ್ಲೂಕಿಗೆ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 8ನೇ ಸ್ಥಾನ, ಜಿಲ್ಲೆಯಲ್ಲಿ ಮೊದಲ ಸ್ಥಾನ:ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಶ್ರೀನಿವಾಸಪುರ:ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಶ್ರೀನಿವಾಸಪುರ 8ನೇ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದು ತಾಲ್ಲೂಕಿಗೆ ಶೇಕಡಾ 95 ರಷ್ಟು ಫಲಿತಾಂಶ ದೊರೆತಿರುವುದು ಸಂತೋಷದ ವಿಷಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಗಳಾದ ಉಮಾದೇವಿ ತಿಳಿಸಿದರು.
ಪಟ್ಟಣದ ಬಿ.ಆರ್.ಸಿ. ಕಚೇರಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲ್ಲೂಕಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರುಗಳಿಗೆ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಉಮಾದೇವಿ, 2019ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕೋಲಾರ ಜಿಲ್ಲೆಯಲ್ಲಿ 2ನೆ ಸ್ಥಾನವನ್ನು ಶ್ರೀನಿವಾಸಪುರ ತಾಲ್ಲೂಕು ಪಡೆದ್ದು ಈ ಬಾರಿ ಮೊದಲ ಸ್ಥಾನ ಪಡೆದಿದೆ, ಈ ಮೊದಲ ಸ್ಥಾನ ಪಡೆಯಲು ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ನಡೆದ ಮಾರ್ಗದರ್ಶನದಂತೆ ಎಲ್ಲಾ ಹಂತಗಳಲ್ಲಿ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮಗಳನ್ನು ಆಯೋಜಿನೆ ಮಾಡಿ ಪರೀಕ್ಷಾ ಪದ್ದತಿಯನ್ನು ಏನು ಬದಲಾವಣೆ ಮಾಡಲಾಯಿತೋ, ಮಕ್ಕಳಿಗೆ ಯಾವುದೆ ಗೊಂದಲವಿಲ್ಲದೆ ಮಾರ್ಗದರ್ಶನ ನೀಡಲಾಯಿತು.
ಜಿಲ್ಲೆಯಲ್ಲಿ 2ನೆ ಸ್ಥಾನದಿಂದ ಮೊದಲ ಸ್ಥಾನಕ್ಕೆ ಪಡೆದುಕೊಂಡಿದ್ದು ರಾಜ್ಯ ಮಟ್ಟದಲ್ಲಿ ಎರಡನೆ ಸ್ಥಾನದಿಂದ 8ನೇ ಸ್ಥಾನಕ್ಕೆ ಹೋಗಿರುವುದು ನಮಗೆ ನಿರಾಸೆ ತಂದಿದೆ ಎನ್ನುತ್ತಾ, ಮುಂದಿನ ವರ್ಷದಲ್ಲಿ ಇದನ್ನು ಸವಾಲಾಗಿ ಸ್ವೀಕರಿಸಿ 8ನೇ ಸ್ಥಾನದಿಂದ ಪ್ರಥಮ ಸ್ಥಾನಕ್ಕೆ ಬರಲು ಪ್ರಯತ್ನ ಮಾಡೋಣ ಎಂದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಅಧ್ಯಕ್ಷ ಎಸ್. ಶಿವಮೂರ್ತಿ ಮಾತನಾಡುತ್ತಾ, ಗೋಲ್ಡನ್ ಲೈಫಂದರೆ ಅದಕ್ಕೆ ಒಂದು ಅರ್ಥ ಇದೆ, 25 ವರ್ಷಗಳ ವರೆಗೆ ನಿಮಗೆ ಗೋಲ್ಡನ್ ಲೈಫ್, ಅಲ್ಲಿ ಚೆನ್ನಾಗಿ ಓದಿದರೆ ಇನ್ನು ಉಳಿದ 75 ವರ್ಷಗಳ ಕಾಲ ನಿಮ್ಮ ಜೀವನ ಡೈಮಂಡ್ ಲೈಫ್ ಆಗುತ್ತದೆ ಎಂದರು.
ಮೊದಲ 25 ವರ್ಷಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿ.ವಿ, ನೋಡದಿರುವುದು, ಉಪಾಧ್ಯಾಯರ ಮಾತು ಕೇಳದಿರುವುದು, ತಂದೆ ತಾಯಿಗಳ ಮಾತು ಕೇಳದಿರುವುದು, ಓದಿನ ಕಡೆ ಗಮನ ಕೊಡದಿರುವುದು ಮಾಡಿದರೆ ಮುಂದಿನ ಜೀವನ ಕ್ಲಿಷ್ಟಕರವಾಗಿರುತ್ತದೆ. ಇವುಗಳೆಲ್ಲವನ್ನೂ ಮೀರಿ ಸಾಧನೆ ಮಾಡಿರುವ ನೀವು ಮುಂದಿನ ಶೈಕ್ಷಣಿಕ ವಿಧ್ಯಾಬ್ಯಾಸಕ್ಕೂ ಹೆಚ್ಚಿನ ಗಮನ ಕೊಟ್ಟು ಇದಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಪಡೆಯಬೇಕೆಂದರು. ನೀವು ಈಗ ಏನು ಪ್ಲಾನ್ ಮಾಡಿದ್ದೀರಾ, ಮುಂದಿನ ಪ್ಲಾನ್ ಇದಕ್ಕಿಂತಲೂ ಚೀನ್ನಾಗಿರಲಿ, ನೀವು ಮುಂದಿನ ವಿದ್ಯಾಭ್ಯಾಸದ ಕಡೆ ಒಳ್ಳೆಯ ಕನಸನ್ನು ಕಾಣಿ, ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಪಡೆಯಲು ಕಾರಣರಾದ ನಿಮ್ಮ ಶಾಲೆಗಳ ಶಿಕ್ಷಕರಿಗೂ, ಪೋಷಕರಿಗೂ ಅನಂತಾನಂತ ಧನ್ಯವಾದಗಳನ್ನು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ, ತಾಲ್ಲೂಕಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಾದ ದೀಕ್ಷ (621) ಜಿ.ಜಿ. ವೇಣು ಗುರುಕುಲ, ಹೆಬ್ಬಟ, ಸಹನ ಎ. (619) ಸಪ್ತಗಿರಿ ವಿದ್ಯಾಲಯ, ಗೌನಿಪಲ್ಲಿ, ಜಯತೇಜ್, ಎಂ.ಗೌಡ (618) ಬೈರವೇಶ್ವರ ಶಾಲೆ, ಬೈರಪಲ್ಲಿ, ಸಿ. ಶ್ರಾವಣಿ (595) ಸರ್ಕಾರಿ ಪ್ರೌಢ ಶಾಲೆ, ದಳಸನೂರು, ವರ್ಷ (595) ಸರ್ಕಾರಿ ಪ್ರೌಢ ಶಾಲೆ, ಮುದಿಮೊಡುಗು, ಪದ್ಮನಾಭಾಚಾರಿ (595) ಕೆ.ಪಿ.ಎಸ್. ಸೋಮಯಾಜಲಹಳ್ಳಿ, ಎಲ್.ಎಂ. ಸಿರೀಷ (591) ನ್ಯಾಷನಲ್ ಹೈಸ್ಕೂಲ್, ಯಲ್ದೂರು, ಜೆ.ಎನ್. ಭಾವನ (585) ಸರ್ಕಾರಿ ಬಾಲಕಿಯರ ಪದವಿ ಪೂರ್ವಕಾಲೇಜು, ಶ್ರೀನಿವಾಸಪುರ ಇವರನ್ನು ರೋಟರಿ ಸಂಸ್ಥೆ, ಶ್ರೀನಿವಾಸಪುರ ಇವರ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಚಾರ್ಟಡ್ ಪ್ರೆಸಿಡೆಂಟ್ ಗೋಪಾಲಕೃಷ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಜಿ.ಎಸ್.ಆರ್. ಎಸ್.ವಿ. ಸುಧಾಕರ್, ಕಾರ್ಯದರ್ಶಿ ಹೆಚ್.ಎನ್. ನಾಗೇಶ್, ಮಾಧ್ಯಮ ಕಾರ್ಯದರ್ಶಿ ಎನ್.ಕೃಷ್ಣಮೂರ್ತಿ, ನಿರ್ದೇಶಕರಾದ ಎನ್. ಬೈರೇಗೌಡ, ಶಶಿಕಳ, ಶಿವ, ಶಂಕರ್, ಪ್ರದೀಪ್, ಹರೀಷ, ಮುಖ್ಯೋಪಾದ್ಯಾಯರು, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.