ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ: ಜನರು ಆರೋಗ್ಯಕರ ಹವ್ಯಾಸಗಳ ಮೂಲಕ ಕೊರೊನಾ ವೈರಸ್ ಹರಡುವುದನ್ನು ತಡೆಯಬೇಕು:ಡಾ. ವೈ.ವಿ.ವೆಂಕಟಾಚಲ
ಶ್ರೀನಿವಾಸಪುರ: ಜನರು ಆರೋಗ್ಯಕರ ಹವ್ಯಾಸಗಳ ಮೂಲಕ ಕೊರೊನಾ ವೈರಸ್ ಹರಡುವುದನ್ನು ತಡೆಯಬೇಕು ಎಂದು ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಹೇಳಿದರು.
ಪಟ್ಟಣದ ಸಂತೆ ಮೈದಾನದಲ್ಲಿ ಎಸ್ವಿ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ಕೊರೊನಾ ವೈರಸ್ ಹರಡದಂತೆ ಕೈತೊಳೆಯುವ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡಿದರು.
ಜನರು ನಿಯಮಿತವಾಗಿ ಕೈತೊಳೆಯುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ಸಾಬೂನು ಬಳಸಿ ಯಾವುದೇ ರೋಗಾಣು ಅಥವಾ ವೈರಸ್ ಕೈ ಮೇಲೆ ಉಳಿಯದ ರೀತಿಯಲ್ಲಿ ಕೈ ತೊಳೆಯಬೇಕು ಎಂದು ಅವರು ಹೇಳಿದರು.
ಮುಖ ಗವಸು ಧರಿಸುವುದು ಒಳ್ಳೆಯದು. ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೈ ಕುಲುಕುವುದನ್ನು ಬಿಡಬೇಕು. ಜನರೊಂದಿಗೆ ಹೆಚ್ಚಾಗಿ ಬೆರೆಯುವುದನ್ನು ಕಡಿಮೆ
ಮಾಡಬೇಕು. ಭಯ ಪಡದೆ ಮುನ್ನೆಚ್ಚರಿಕೆ ವಹಿಸುವುದರ ಮೂಲಕ ರೋಗಾಣು ಹರಡದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಸಾಹಿತಿ ಸ.ರಘುನಾಥ, ಪ್ರಾಂಶುಪಾಲ ಸೀನಪ್ಪ ಇದ್ದರು.