ಶ್ರೀನಿವಾಸಪುರ: ಚುನಾಯಿತ ಶಿಕ್ಷಕರು ಚುನಾವಣೆ ಮರೆತು ಪ್ರತಿಸ್ಪರ್ದಿ ಶಿಕ್ಷರನ್ನು ಜೊತೆಗೂಡಿಸಿಕೊಂಡು ಸ್ನೇಹಜೀವಿಗಳಾಗಿ ಶಿಕ್ಷಕರ ಕೆಲಸ ನಿರ್ವಹಿಸಿ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಚುನಾಯಿತ ಶಿಕ್ಷಕರು ಚುನಾವಣೆ ಮರೆತು ಪ್ರತಿಸ್ಪರ್ದಿ ಶಿಕ್ಷರನ್ನು ಜೊತೆಗೂಡಿಸಿಕೊಂಡು ಸ್ನೇಹಜೀವಿಗಳಾಗಿ ಶಿಕ್ಷಕರ ಕೆಲಸ ನಿರ್ವಹಿಸಿ


ಶ್ರೀನಿವಾಸಪುರ, ಶಿಕ್ಷಕರ ಸಂಘದ ಚುನಾವಣೆ ಬಹಳ ಮಹತ್ವವಾಗಿದ್ದು, ವಿಜೇತರಾದ ಶಿಕ್ಷಕರು ಎಂದಿನಂತೆ ನಡೆದ ಚುನಾವಣೆಯನ್ನು ಮರೆತು ಪರಾಭವಗೊಂಡಿರುವ ಪ್ರತಿಸ್ಪರ್ದಿ ಶಿಕ್ಷರನ್ನು ಜೊತೆಗೂಡಿಸಿಕೊಂಡು ಸ್ನೇಹಜೀವಿಗಳಾಗಿ ಶಿಕ್ಷಕರ ಕೆಲಸ ಸಕ್ರಿಯವಾಗಿ ನಿರ್ವಹಿಸಿಕೊಂಡು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಕಿವಿ ಮಾತು ಹೇಳಿದರು.
ಶಿಕ್ಷಕರ ಸಂಘದ ಚುನಾವಣೆ ಫಲಿತಾಂಶ ಹೊರಬಿದ್ದಂತೆ ಸರ್ಕಾರಿ ನೌಕರ ಭವನ ಮುಂಭಾಗ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೈ.ಎ.ನಾರಾಯಣಸ್ವಾಮಿ ಶಿಕ್ಷಕರಿಗೆ ಸಂಘ ಬಹಳ ಅವಶ್ಯಕವಾಗಿದೆ ಈ ನಿಟ್ಟಿನಲ್ಲಿ ನಡೆದ ಚುನಾವನೆಯು ಮಹತ್ವವಾಗಿದ್ದು ಶಿಕ್ಷಕರ ಸಮಸ್ಯೆಗಳು ಸರ್ಕಾರದಿಂದ ಬಗೆ ಹರಿಸಬೇಕಾದರೆ ಸಂಘಟನೆಯಿಂದ ಮಾತ್ರ ಸಾದ್ಯ ನಿಮ್ಮ ಸಮಸ್ಯೆಗಳಿಗೆ ಸದಾ ನಾನು ಬೆನ್ನುಲುಬಾಗಿ ನಿಲ್ಲುತ್ತೇನೆ ಈಗಾಗಲೇ ನೌಕರ ಭವನ ನಿರ್ಮಾಣಕ್ಕೆ ಹಿಂದೆ ನಮ್ಮ ಅನುದಾನದಿಂದ ಹಣವನ್ನು ಮಂಜೂರು ಮಾಡಿಸಿ ಅಧ್ಯಕ್ಷ ನಾಗರಾಜ್ ಭವನವನ್ನು ಸುಂದರವಾಗಿ ನಿರ್ಮಿಸಿದ್ದಾನೆ. ಯಾವುದೇ ಒಂದು ಸಂಘದಲ್ಲಿ ಮೂರು-ನಾಲ್ಕು ಭಾರಿ ಆಯ್ಕೆಯಾಗಬೇಕಾದರೆ ಸುಲಭವಾದ ಕೆಲಸವಲ್ಲ ಈ ನಿಟ್ಟಿನಲ್ಲಿ ಎಂ.ನಾಗರಾಜ್ 5 ಭಾರಿ ಸಂಘದಿಂದ ಆಯ್ಕೆಯಾಗಿ 3 ನೇ ಭಾರಿಗೆ ತಾಲ್ಲೂಕು ಸರ್ಕಾರಿ ನೌಕರ ಸಂಘದ ಹ್ಯಾಟ್ರಿಕ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವುದು ಶ್ಲಾಘನಿಯವಾಗಿದೆ. ನಾಳೆಯಿಂದ ಎಲ್ಲವನ್ನು ಮರೆತು ಶಿಕ್ಷಕರೆಲ್ಲರು ಒಂದೇ ಸಮನಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಬೇಕೆಂದು ತಿಳಿಸಿದರು.
ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಕೆ.ಕೆ.ಮಂಜುನಾಥ್ ಮಾತನಾಡಿ ಬಂಗವಾದಿ ಎಂ.ನಾಗರಾಜ್ ರವರು ಸೋಲಿಲ್ಲದ ಸರದಾರರಂತೆ 5 ಭಾರಿ ಆಯ್ಕೆಯಾಗಿ ಅಧ್ಯಕ್ಷರಾಗಿ 3 ನೇ ಭಾರಿಗೆ ಎಲ್ಲಾ ಶಿಕ್ಷಕರ ಸಹಕಾರದಿಂದ ಅಧ್ಯಕ್ಷರಾಗುತ್ತಿರುವುದು ಸಂತಸವಾಗಿದೆ. ಸ್ಪೀಕರ್ ರಮೇಶ್ ಕುಮಾರ್ ರವರ ಕನಸಿನಂತೆ ಶಿಕ್ಷಣದಲ್ಲಿ ನಮ್ಮ ತಾಲ್ಲೂಕು ಕ್ರಾಂತಿಯಾಗಬೇಕು ಈ ಭಾರಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನವಾಗಿದ್ದು, ರಾಜ್ಯದಲ್ಲಿ 2 ನೇ ಸ್ಥಾನದಲ್ಲಿದ್ದು, ಹೆಮ್ಮೆಯ ವಿಷಯವಾಗಿದ್ದು ಸರ್ಕಾರಿ ನೌಕರರ ಸಂಘವನ್ನು ಉತ್ತಮ ದಾರಿಯಲ್ಲಿ ನಡೆಸಿಕೊಂಡು ಹೋಗಲಿ ಎಂದು ವಿಜೇತರಾದ ಶಿಕ್ಷಕರಿಗೆ ಶುಭ ಹಾಸಿಸದರು.
ನೌಕರ ಸಂಘದ ಮಾಜಿ ಅಧ್ಯಕ್ಷ ಹಾಲಿ ವಿಜೇತ ಶಿಕ್ಷಕ ಎಂ.ನಾಗರಾಜ್ ಮಾತನಾಡಿ ನಮ್ಮ ಆಯ್ಕೆಗೆ ಸಹಕರಿಸಿದ ಸ್ಪೀಕರ್ ರಮೇಶ್ ಕುಮಾರ್, ದಿಂಬಾಲ ಅಶೋಕ್, ಕೆ.ಕೆ.ಮಂಜುನಥ್ ಅನೇಕ ಮುಖಂಡರು ಹಾಗೂ ತಾಲ್ಲೂಕಿನ ಪ್ರತಿಯೊಬ್ಬ ಶಿಕ್ಷಕರ ಸಹಕಾರದಿಂದ ಮತ್ತೊಮ್ಮೆ ನಮ್ಮನ್ನು ಆರೈಸಿದ್ದಾರೆ. ನನ್ನ ಒಬ್ಬನಲ್ಲದೆ ನಮ್ಮ ತಂಡದ ತಿಪ್ಪಣ್ಣ, ವೆಂಕಟರವಣ, ಫ್ರೌಡಶಾಲಾ ವಿಭಾಗದ ಬೈರೇಗೌಡ, ಕಾಲೇಜು ವಿಭಾಗದ ಕೆ.ಎನ್.ಮಂಜುನಾಥರೆಡ್ಡಿ ಇವರನ್ನು ಹೆಚ್ಚು ಮತಗಳನ್ನು ನೀಡುವುದರ ಮೂಲಕ ಆಶೀರ್ವಾದ ಮಾಡಿದ ತಾಲ್ಲೂಕಿನ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಮತ್ತು ಸಮಸ್ಥ 28 ಇಲಾಖೆಗಳ ತಾಲ್ಲೂಕು ಸರ್ಕಾರಿ ನೌಕರರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ತಾಲ್ಲೂಕಿನ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಬೆನ್ನುಲುಬಾಗಿ ನಿಂತು ನಿಮ್ಮ ಸೇವಕನಂತೆ ಕೆಲಸ ಮಾಡುತ್ತೇನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡ ದಿಂಬಾಲ ಅಶೋಕ್, ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದರೆಡ್ಡಿ, ರೋಟರಿ ಸಂಸ್ಥೆಯ ಶಿವಮೂರ್ತಿ, ಸಿಆರ್.ಸಿ.ಕೃಷ್ಣಮೂರ್ತಿ, ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ವಿ.ಕೃಷ್ಣಪ್ಪ, ಗೌರವಾಧ್ಯಕ್ಷ ಹೊದಲಿ ಶ್ರೀನಿವಾಸಯ್ಯ, ರವೀಂದ್ರ ಸಿಂಗ್, ಕಳಾಶಂಕರ್, ಮುರಳಿಬಾಬು, ಅಶೋಕ್, ಬಿ.ಇ.ಓ.ಕಛೇರಿ ಸಿಬ್ಬಂದಿ ಭಾಷಾ ವಿಜೇತ ಶಿಕ್ಷಕರು ಮತ್ತಿತರರು ಹಾಜರಿದ್ದರು.