ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ, ಕೊರೊನಾ ಸಮಸ್ಯೆ ಮುಗಿಯುವ ವರೆಗೆ ಬಡವರ ಸೇವೆ ಮುಂದುವರಿಯಬೇಕು:ಜಿಲ್ಲಾ ಪಂಚಾಯಿತಿ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವಿ.ಶ್ರೀನಿವಾಸ್ ಹೇಳಿದರು.
ಶ್ರೀನಿವಾಸಪುರ: ಕೊರೊನಾ ಸಮಸ್ಯೆ ಮುಗಿಯುವ ವರೆಗೆ ಬಡವರ ಸೇವೆ ಮುಂದುವರಿಯಬೇಕು. ಸಮಾಜದ ಎಲ್ಲ ವರ್ಗದ ಜನರು ಬಡವರು ಹಾಗೂ ವಲಸೆ ಕಾರ್ಮಿಕರಿಗೆ ಕೈಲಾದ ನೆರವು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಸಂತೆ ಮೈದಾನ ಹಾಗೂ ಇಂದಿರ ನಗರದ 400 ಬಡ ಕುಟುಂಬಗಳಿಗೆ ಆಹಾರ ಪದಾರ್ಥ ವಿತರಿಸಿ ಮಾತನಾಡಿ, ಕೊರೊನಾ ಮಾರಿ ಹರಡದಂತೆ ಅಂತರ ಪಾಲಿಸಬೇಕು. ಲಾಕ್ ಡೌನ್ ನಿಯಮಗಳನ್ನು ತಪ್ಪದೆ ಅನುಸರಿಸಬೇಕು. ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಸೂಚನೆ ಮೇರೆಗೆ ಆಹಾರ ಪದಾರ್ಥ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಪಟ್ಟಣದಲ್ಲಿ ಕೆಲವು ಸಮಾಜ ಸೇವಾ ಸಂಸ್ಥೆಗಳು ಕಳೆದ ಒಂದು ತಿಂಗಳಿಂದ ಪಟ್ಟಣದ ಬಡ ಕುಟುಂಬಗಳು ಹಾಗೂ ವಲಸೆ ಕಾರ್ಮಿಕರಿಗೆ ಪ್ರತಿ ದಿನ ಊಟ ನೀಡುತ್ತಿರುವುದ ಸ್ತುತ್ಯಾರ್ಹ ಸಂಗತಿಯಾಗಿದೆ ಎಂದು ಹೇಳಿದರು.
ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಎನ್.ಕೆ.ರಾಘವೇಂದ್ರ ಪ್ರಕಾಶ್, ಮುಖಂಡರಾದ ಎಸ್.ಟಿ.ಮಂಜು, ಬುಜ್ಜಿ, ರಾಜು, ರಾಜೆಶ್, ಸುಬ್ರಮಣಿ ಇದ್ದರು.