ಶ್ರೀನಿವಾಸಪುರ ಎಪಿಎಂಸಿಯಲ್ಲಿ ಮಾವು ವಹಿವಾಟು ಬೇಡ ರೈತರ ತೋಟಗಳಲ್ಲೇ ಖರೀದಿಗೆ ಕ್ರಮವಹಿಸಿ – ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್.

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

 

 

ಶ್ರೀನಿವಾಸಪುರ ಎಪಿಎಂಸಿಯಲ್ಲಿ ಮಾವು ವಹಿವಾಟು ಬೇಡ ರೈತರ ತೋಟಗಳಲ್ಲೇ ಖರೀದಿಗೆ ಕ್ರಮವಹಿಸಿ – ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್.

 

 

ಕೋಲಾರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮಾವು ವಹಿವಾಟನ್ನು ಎ ಪಿ ಎಂ ಸಿಯಲ್ಲಿ ನಡೆಸದೇ ನೇರವಾಗಿ ರೈತರ ತೋಟಗಳಲ್ಲೇ ನಡೆಸುವ ಮೂಲಕ ಕೊರೋನಾ ಸೋಂಕಿನ ಆತಂಕ ಕೊನೆಗಾಣಿಸುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ ಕೆ.ಎನ್ ವೇಣುಗೋಪಾಲ್ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ . ನಾಗೇಶ್ ಅವರಿಗೆ ಮನವಿ ಸಲ್ಲಿಸಿದರು.
ಹಣ್ಣಿನ ರಾಜ ವಾಹನ ಚಾಲಕರು – ಸಹಾ ಯಕರು , ವ್ಯಾಪಾರಸರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ , ಅಲ್ಲದೆ ಆಂಧ್ರ , ತಮಿಳುನಾಡು , ಕರ್ನಾಟಕ ಸೇರಿದಂತೆ ಸಾವಿರಾರು ಕಾರ್ಮಿಕರು ಸೇರಿ ಬರುತ್ತಾರೆ , ಈ ಜನಕ್ಕೆ ತಾತ್ಕಾಲಿಕ ಶೌಚಾಲಯಗಳು ಅಲ್ಲಿಯೇ ಸ್ಥಾಪಿಸುವ ಹೋಟೆಲ * ಗಳು ಅಲ್ಲಿಯೇ ಉಗಿದು ಗಲೀಜು ಮಾಡುವ ಅಭ್ಯಾಸಗಳು ಮಾಮೂಲಿಯಾಗಿರುತ್ತವೆ .ಈ ಸಾಲಿನ ಮಾವಿನ ಕಾಯಿಯನ್ನು ಎ . ಪಿ . ಎಂ . ಸಿ ಯಾರ್ಡಿನಲ್ಲಿ ಯಾವುದೇ ವಹಿವಾಟು ನಡೆಸದೇ ನೇರವಾಗಿ ರೈತರ ತೋಟಗಳಲ್ಲೇ ಮಾವಿನ ವಹಿವಾಟು ನಡೆಸಬೇಕು ಮಾವಿನ ಪಸಲಿನಲ್ಲಿ ಶೇಕಡ 80 % ತೊತಾ ಮರಿ ಬೆಳೆ ಇದ್ದು , ಇದು ನೇರವಾಗಿ ಮಾವಿನ ತಿರಳು ಘಟಕಗಳಿಗೆ ರವಾನಿಸಲಾಗುತ್ತದೆ . ಇದನ್ನು ನೇರವಾಗಿ ಮಾವಿನ ತೋಟಗ ಳಿಂದ ಸರಬರಾಜು ಮಾಡಬಹುದು ಎಂದರು . ಉಳಿದ ಶೇಕಡ 20 % ತಿನ್ನಲು ಉಪಯೋಗಿಸುವ ಮಾವನ್ನು ತೋಟಗಳಲ್ಲಿ ವಿಂಗಡಿಸಿ ವಿವಿಧ ಮಾರುಕಟ್ಟೆಗಳಿಗೆ ನೇರವಾಗಿ ತೋಟಗಳಿಂದ ರವಾನಿಸಬಹುದು – ದಯವಿಟ್ಟು ಈ ವಿಷಯಗಳ ಬಗ್ಗೆ ಸೂಕ್ತವಾಗಿ ಗಮನಹರಿಸಿ ಈ ಬಾರಿ ಎ . ಪಿ . ಎಂ. ಸಿ . ಯಾರ್ಡಿನಲ್ಲಿ ಮಾವಿನ ವಹಿವಾಟು ಮಾಡದೇ ನೇರವಾಗಿ ತೋಟಗಳಿಂದ ವಿಲೇ ವಾರಿ ಮಾಡಲು ಕ್ರಮ ತೆಗೆದುಕೊ ಳ್ಳಬೇಕಾಗಿ ಮನವಿ ಮಾಡಿದರು . ಹಣ್ಣು ರಾಜ ಮಾವಿನ ಋತುಮಾನ ಸಮೀಪಿಸಿದ್ದು ಏಷ್ಯಾದಲ್ಲೇ ಅತಿ ದೊಡ್ಡ ಮಾವಿನ ಮಾರುಕಟ್ಟೆ ಶ್ರೀನಿವಾಸಪುರದಲ್ಲಿದೆ, ಇಲ್ಲಿನ ಮಾವಿನ ಹಣ್ಣು ರುಚಿಗೆ ಸಹಾ ಹೆಸರುವಾಸಿಯಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವ ಬೆಳೆಯಿದ್ದು ಶ್ರೀನಿವಾಸಪುರ ತಾಲ್ಲೂಕಿನಲ್ಲಿಯೇ ಸುಮಾರು 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುತ್ತದೆ.

ಶ್ರೀನಿವಾಸಪುರ ಮಾವು ಮಾರುಕಟ್ಟೆಯಲ್ಲಿ ಪ್ರತಿದಿನ ಸುಮಾರು ನಾಲ್ಕು ಸಾವಿರದಿಂದ ಐದು ಸಾವಿರ ಟನ್ ವಹಿವಾಟು ನಡೆದು ಪ್ರತಿದಿನಕ್ಕೆ ಸರಾಸರಿ 8 ರಿಂದ 10 ಕೋಟಿ ರೂಪಾಯಿಯಂತೆ 45 ದಿನ ವಹಿವಾಟು ನಡೆಯಲಿದೆ ಎಂದರು.
ಜಿಲ್ಲಾಧಿಕಾರಿಗಳು, ಶಾಸಕರು, ವರ್ತಕರು ಹಾಗೂ ಕೆಲವೇ ರೈತರ ನ್ನೊಳಗೊಂಡ ಸಭೆಯಲ್ಲಿ ಸೇರಿ ಕೆಲವು ನಿಯಮಗಳನ್ನು ಪಾಲಿಸಿಕೊಂಡು ಮಾವು ವಹಿವಾಟು ಪ್ರಾರಂಭಿಸಬೇಕೆಂದು ಶಾಸಕರು ಡಿ ಸಿ . ಯವರಿಗೂ ಹಾಗೂ ಎಪಿಎಂಸಿ ಅಧ್ಯಕ್ಷರಿಗೂ ಸೂಚಿಸಿದ್ದಾರೆ.

ಪ್ರಪಂಚದಾದ್ಯಂತ ನರಬಲಿ ಪಡೆಯುತ್ತಿರುವ ಕೊರೋನಾ ಇರುವ ಸಂದರ್ಭದಲ್ಲಿ ದೇಶದ ವಿವಿಧ ರಾಜ್ಯಗಳ ಸಾವಿರಾರು ಮಂದಿ ವ್ಯಾಪಾರಸ್ತರು , ಲಾರಿ ಚಾಲಕರು ಹಾಗೂ ಕಾರ್ಮಿಕರು ಇಲ್ಲಿಗೆ ಬರುವುದರಿಂದ ಎಚ್ಚರಿಕೆ ಅಗತ್ಯವಾಗಿದೆ ಎಂದು ತಿಳಿಸಿದರು.
ಮಾರುಕಟ್ಟೆ ಪ್ರಾರಂಭವಾದಲ್ಲಿ ರಾಷ್ಟ್ರದ ಎಲ್ಲಾ ರಾಜ್ಯಗಳಿಂದಲೂ ವಾಹನ ಚಾಲಕರು ಸಹಾಯಕರು , ವ್ಯಾಪಾರಸರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ, ಅಲ್ಲದೆ ಆಂಧ್ರಪ್ರದೇಶದ , ತಮಿಳುನಾಡು, ಕರ್ನಾಟಕ ಸೇರಿದಂತೆ ಸಾವಿರಾರು ಕಾರ್ಮಿಕರು ಸೇರಿ ಬರುತ್ತಾರೆ , ಈ ಜನಕ್ಕೆ ತಾತ್ಕಾಲಿಕ ಶೌಚಾಲಯಗಳು ಅಲ್ಲಿಯೇ ಸ್ಥಾಪಿಸುವ ಹೋಟೆಲುಗಳು ಅಲ್ಲಿಯೇ ಉಗಿದು ಗಲೀಜು ಮಾಡುವ ಅಭ್ಯಾಸಗಳು ಮಾಮೂಲಿಯಾಗಿರುತ್ತವೆ.ಈ ಸಾಲಿನ ಮಾವಿನ ಕಾಯಿಯನ್ನು ಎಪಿಎಂಸಿ ಯಾರ್ಡಿನಲ್ಲಿ ಯಾವುದೇ ವಹಿವಾಟು ನಡೆಸದೇ ನೇರವಾಗಿ ರೈತರ ತೋಟಗಳಲ್ಲೇ ಮಾವಿನ ವಹಿವಾಟು ನಡೆಸಬೇಕು ಮಾವಿನ ಪಸಲಿನಲ್ಲಿ ಶೇಕಡ 80% ತೊತಾಪುರಿ ಬೆಳೆ ಇದ್ದು , ಇದು ನೇರವಾಗಿ ಮಾವಿನ ತಿರಳು ಘಟಕಗಳಿಗೆ ರವಾನಿಸಲಾಗುತ್ತದೆ. ಇದನ್ನು ನೇರವಾಗಿ ಮಾವಿನ ತೋಟಗಳಿಂದ ಸರಬರಾಜು ಮಾಡಬಹುದು ಎಂದರು. ಉಳಿದ ಶೇಕಡ 20% ತಿನ್ನಲು ಉಪಯೋಗಿಸುವ ಮಾವನ್ನು ತೋಟಗಳಲ್ಲಿ ವಿಂಗಡಿಸಿ ವಿವಿಧ ಮಾರುಕಟ್ಟೆಗಳಿಗೆ ನೇರವಾಗಿ ತೋಟಗಳಿಂದ ರವಾನಿಸಬಹದು ದಯವಿಟ್ಟು ಈ ವಿಷಯಗಳ ಬಗ್ಗೆ ಸೂಕ್ತವಾಗಿ ಗಮನಹರಿಸಿ ಈ ಬಾರಿ ಎ ಪಿ ಎಂ ಸಿ ಯಾರ್ಡಿನಲ್ಲಿ ಮಾವಿನ ವಹಿವಾಟು ಮಾಡದೇ ನೇರವಾಗಿ ತೋಟಗಳಿಂದ ವಿಲೇ ವಾರಿ ಮಾಡಲು ಕ್ರಮ ತೆಗೆದುಕೊಳ್ಳಬೇಕಾಗಿ ಮನವಿ ಮಾಡಿದರು.