ಶ್ರೀನಿವಾಸಪುರ: ಎಂಜಿನಿಯರ್‌ಗಳು ವೃತ್ತಿಪರತೆ ಹೆಚ್ಚಿಸಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕು: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌.

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಎಂಜಿನಿಯರ್‌ಗಳು  ವೃತ್ತಿಪರತೆ ಹೆಚ್ಚಿಸಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಹೇಳಿದರು.
  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸ್ನೇಹ ಬಳಗ ಟ್ರಸ್ಟ್‌ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರನೆ ಸಮಾರಂಭದಲ್ಲಿ ಸ್ಥಳೀಯ ಎಂಜಿನಿಯರ್‌ಗಳನ್ನು ಸನ್ಮಾನಿಸಿ ಮಾತನಾಡಿ, ಸರ್‌. ಎಂ.ವೇಶ್ವಶ್ವರಯ್ಯ ಅವರು ನಿರ್ಮಿಸಿರುವ ಕೆಆರ್‌ಎಸ್‌ ಅಣೆಕಟ್ಟು ವಿಶ್ವ ಪ್ರಸಿದ್ಧಿ ಪಡೆದಿದೆ. ಅದಕ್ಕೆ ನಿರ್ಮಾಣದ ಹಿಂದಿನ ವೃತ್ತಿಪರತೆ ಕಾರಣ ಎಂದು ಹೇಳಿದರು.  ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶ್ರೀನಿವಾಸಮೂರ್ತಿ ಮಾತನಾಡಿ, ಪ್ರತಿ ವರ್ಷ ಸಾವಿರಾರು ಎಂಜಿಯರ್‌ ಪದವೀಧರರು ಹೊರಬರುತ್ತಿದ್ದಾರೆ. ಆದರೆ ಅವರ ಪೈಕಿ ಕೆಲವರಷ್ಟೇ ವೃತ್ತಿಯಲ್ಲಿ ಯಶಸ್ವಿಯಾಗುತ್ತಿದ್ದಾರೆ. ಖ್ಯಾತ ಎಂಜಿನಿಯರ್ ವಿಶ್ವೇಶ್ವರಯ್ಯ ಅವರ ಮಾದರಿ ನಡೆ ನಮ್ಮ ಯುವ ಎಂಜಿನಿಯರ್‌ಗಳಿಗೆ ಮಾರ್ಗದರ್ಶನವಾಗಬೇಕು ಎಂದು ಹೇಳಿದರು.  ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌, ಸ್ನೇಹ ಬಳಗ ಟ್ರಸ್ಟ್‌ ಅಧ್ಯಕ್ಷೆ ನಾಗವೇಣಿ ರೆಡ್ಡಿ, ಎಂಜಿನಿಯರ್‌ಗಳಾದ ಅಪ್ಪಿರೆಡ್ಡಿ, ನಾಗರಾಜ್‌, ಎಲ್‌.ಎಂ.ನಾಗರಾಜ್‌, ಸಂತೋಷ್ ರಾಮಚಂದ್ರಪ್ಪ, ನಾಗರಾಜು ಇದ್ದರು.