ವರದಿ:ಶಬ್ಬೀರ್ ಅಹ್ಮದ್
ಶ್ರೀನಿವಾಸಪುರ: ಇಲ್ಲಿನ ಪುರಸಭೆಗೆ ನಡೆದ ಚುನಾವಣೆಯಲ್ಲಿ ಒಟ್ಟು 23 ಸ್ಥಾನಗಳ ಪೈಕಿ ಜೆಡಿಎಸ್ 11 ಸ್ಥಾನ ಗಳಿಸಿದೆ. ಉಳಿದಂತೆ ಕಾಂಗ್ರೆಸ್ 8 ಹಾಗೂ ಪಕ್ಷೇತರರು 4 ವಾರ್ಡ್‌ಗಳಲ್ಲಿ ಜಯಗಳಿಸಿದ್ದಾರೆ. ಪುರಸಭೆ ಆಡಳಿತ ಯಾರ ತೆಕ್ಕೆಗೆ ಬರುತ್ತದೆ ಎಂಬುದು ಪಕ್ಷೇತರರು ನೀಡುವ ಬೆಂಬಲದ ಮೇಲೆ ಆಧಾರಪಟ್ಟಿದೆ.
ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಹಾಗೂ ಅವರ ಪ್ರತಿಸ್ಪರ್ಧಿಗಳು ಪಡೆದ ಮತಗಳ ವಿವರ: ಅಭ್ಯರ್ಥಿಗಳು: ವಾರ್ಡ್ ನಂ 1: ನಾಗೇಶ್ ಕುಮಾರ್, ಪಡೆದ ಮತಗಳು 498(ಕಾಂಗ್ರೆಸ್), ಪ್ರತಿಸ್ಪರ್ಧಿ ಜಿ.ವಿ.ಪ್ರಸನ್ನಕುಮಾರ್, ಪಡೆದ ಮತಗಳು 228 (ಜೆಡಿಎಸ್).
ವಾರ್ಡ್ ನಂ 2: ಬಿ.ವೆಂಕಟರೆಡ್ಡಿ 233 (ಪಕ್ಷೇತರ), ಪ್ರತಿಸ್ಪರ್ಧಿ ಎಸ್,ಶ್ರೀನಿವಾಸಪ್ಪ, 103 (ಜೆಡಿಎಸ್).
ವಾರ್ಡ್ ನಂ.3: ಕೆ.ಜಯಲಕ್ಷ್ಮಿ 351(ಜೆಡಿಎಸ್), ಪ್ರತಿಸ್ಪರ್ಧಿ ಸರಸ್ವತಮ್ಮ 285(ಕಾಂಗ್ರೆಸ್).
ವಾರ್ಡ್ ನಂ.4: ಸಹೀದಾ ನಿಷಾದ್ ಫಾತಿಮಾ, 390 (ಜೆಡಿಎಸ್), ಪ್ರತಿಸ್ಪರ್ಧಿ ನಾಜಿಯಾ ಬೇಗಂ, 77 (ಕಾಂಗ್ರೆಸ್).
ವಾರ್ಡ್ ನಂ 5: ಬಿ.ಆರ್.ಬಾಸ್ಕರ್ 342 (ಪಕ್ಷೇತರ), ಪ್ರತಿಸ್ಪರ್ಧಿ ಬಿ.ಎಂ.ಪ್ರಕಾಶ್ 329 (ಕಾಂಗ್ರೆಸ್).
ವಾರ್ಡ್ ನಂ 6: ವಿ.ಮುನಿರಾಜು 499 (ಕಾಂಗ್ರೆಸ್), ಪ್ರತಿಸ್ಪರ್ಧಿ ಎಸ್.ಆರ್.ಮುನಿಕೃಷ್ಣ 74 (ಜೆಡಿಎಸ್)
ವಾರ್ಡ್ ನಂ 7: ಎಸ್.ರಾಜು 279 (ಜೆಡಿಎಸ್), ಪ್ರತಿಸ್ಪರ್ಧಿ ಎಂ.ನಾರಾಯಣಸ್ವಾಮಿ 135(ಕಾಂಗ್ರೆಸ್).
ವಾರ್ಡ್ ನಂ 8: ಎನ್.ನಾಗರಾಜ್ 413 (ಕಾಂಗ್ರೆಸ್), ಪ್ರತಿಸ್ಪರ್ಧಿ ಸಿ.ರವಿ 385(ಜೆಡಿಎಸ್).
ವಾರ್ಡ್ ನಂ 9: ಸಿ.ಆನಂದ ಬಾಬು 365(ಜೆಡಿಎಸ್), ಪ್ರತಿಸ್ಪರ್ಧಿ ಎಸ್.ಮಂಜುನಾಥ್ 283(ಕಾಂಗ್ರೆಸ್).
ವಾರ್ಡ್ ನಂ 10: ಆಯಿಷಾ ಸಿರ್ದಿಕ್ 556(ಜೆಡಿಎಸ್), ಪ್ರತಿಸ್ಪರ್ಧಿ ಜಬೀನ್ ತಾಜ್ 171 (ಕಾಂಗ್ರೆಸ್).
ವಾರ್ಡ್ ನಂ 11: ಎಂ.ಎಸ್.ಲಲಿತಾ 481(ಜೆಡಿಎಸ್), ಪ್ರತಿಸ್ಪರ್ಧಿ ಕೆ.ಅನಿತಾ 259 (ಕಾಂಗ್ರೆಸ್).
ವಾರ್ಡ್ ನಂ 12: ಕೆ.ಅನೀಸ್ ಅಹ್ಮದ್ 287 (ಕಾಂಗ್ರೆಸ್), ಪ್ರತಿಸ್ಪರ್ಧಿ ಮೆಹಬೂಬ್ ಷರೀಫ್ 245 (ಜೆಡಿಎಸ್).
ವಾರ್ಡ್ ನಂ 13: ಎಂ.ಬಿ.ಸರ್ದಾರ್ 365 (ಕಾಂಗ್ರೆಸ್), ಪ್ರತಿಸ್ಪರ್ಧಿ ನಸೀರ್ ಅಹ್ಮದ್ ಖಾನ್‌್ 297 (ಜೆಡಿಎಸ್).
ವಾರ್ಡ್ ನಂ 14: ರಸೂಲ್ ಖಾನ್ 439(ಜೆಡಿಎಸ್‌್), ಪ್ರತಿಸ್ಪರ್ಧಿ ಮುಕ್ತಿಯಾರ್ ಅಹ್ಮದ್ 262 (ಕಾಂಗ್ರೆಸ್).
ವಾರ್ಡ್ ನಂ15: ಜಬೀನ್ ತಾಜ್ 451 ( ಜೆಡಿಎಸ್), ಪ್ರತಿಸ್ಪರ್ಧಿ ಸಹೇರಾ ಬಾನು 230 (ಕಾಂಗ್ರೆಸ್).
ವಾರ್ಡ್ ನಂ 16: ಶಬ್ಬೀರ್ ಖಾನ್ 455 (ಜೆಡಿಎಸ್), ಪ್ರತಿಸ್ಪರ್ಧಿ ಸೈಯದ್ ಉಮ್ಮರ್ 269 (ಕಾಂಗ್ರೆಸ್).
ವಾರ್ಡ್ ನಂ 17: ಇಪ್ತಕಾರ್ ಅಹ್ಮದ್ 421(ಪಕ್ಷೇತರ), ಪ್ರತಿಸ್ಪರ್ಧಿ ಕೆ.ವಿ.ಮಂಜುನಾಥ್ 161 (ಕಾಂಗ್ರೆಸ್).
ವಾರ್ಡ್ ನಂ 18: ಆರ್.ಸಂಜಯ್ ಸಿಂಗ್ 354 (ಪಕ್ಷೇತರ), ಪ್ರತಿಸ್ಪರ್ಧಿ ಎನ್.ಜಗದೀಶ್ ಬಾಬು 296.
ವಾರ್ಡ್ ನಂ 19: ಎನ್.ಶಾಂತಮ್ಮ 310 (ಕಾಂಗ್ರೆಸ್), ಪ್ರತಿಸ್ಪರ್ಧಿ ಚೈತನ್ಯ.ಎಂ ಕಾರ್ ಬಾಬು 291 (ಜೆಡಿಎಸ್).
ವಾರ್ಡ್ ನಂ 20: ನೀಲಾವತಿ 584 (ಕಾಂಗ್ರೆಸ್), ಪ್ರತಿಸ್ಪರ್ಧಿ ರೆಡ್ಡಮ್ಮ 191 (ಜೆಡಿಎಸ್).
ವಾರ್ಡ್ ನಂ 21: ವಹೀದಾ ಬೇಗಂ 488 (ಜೆಡಿಎಸ್), ಪ್ರತಿಸ್ಪರ್ಧಿ ಸಬೀಹಾ ಅಂಜುಂ 327(ಕಾಂಗ್ರೆಸ್).
ವಾರ್ಡ್ ನಂ 22: ಫಿರ್‌ದೋಸ್ ಉನ್ನೀಸಾ 448 (ಕಾಂಗ್ರೆಸ್ ), ಪ್ರತಿಸ್ಪರ್ಧಿ ರಿಹಾನಾ ಖಾನಂ 407 (ಜೆಡಿಎಸ್).
ವಾರ್ಡ್ ನಂ 23: ಕೆ.ಎಸ್.ಸುನಿತಾ 642 (ಜೆಡಿಎಸ್), ಪ್ರತಿಸ್ಪರ್ಧಿ ಆರ್.ಪುಷ್ಪಾವತಿ 119 (ಕಾಂಗ್ರೆಸ್).
24
ಶ್ರೀನಿವಾಸಪುರದಲ್ಲಿ ಪುರಸಭಾ ಚುನಾಣೆ ಮತ ಎಣಿಕೆ ಕೇಂದ್ರದ ಹೊರಗೆ ವಿಜೇತ ಕಾಂಗ್ರೆಸ್ ಅಭ್ಯರ್ಥಿ ನಾಗೇಶ್ ಕುಮಾರ್ ಕಾರ್ಯಕರ್ತರೊಡಣೆ ವಿಜಯೋತ್ಸವ ಆಚರಿಸಿದರು.
25
ವಾರ್ಡ್ ನಂ 17 ರ ಪಕ್ಷೇತರ ಅಭ್ಯರ್ಥಿ ಎಟಿಎಸ್ ಇಪ್ತಿಕಾರ್ ಅಹ್ಮದ್ ಗೆದ್ದು ಮತದಾನ ಕೇಂದ್ರದಿಂದ ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳು ಹೆಗಲ ಮೇಲೆ ಹೊತ್ತು ಸಾಂಭ್ರಮಾಚರಣೆ ಮಾಡಿದರು.
26
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿ.ವೆಂಕಟರೆಡ್ಡಿ, ಕೆ.ಜಯಲಕ್ಷ್ಮಿ , ಸಿ.ಆನಂದ್ ಬಾಬು ಕಾರ್ಯಕರ್ತರೊಂದಿಗೆ ಎಂಜಿ ರಸ್ತೆಯಲ್ಲಿ ವಿಜಯೋತ್ಸವ ಆಚರಿಸಿದರು.