ಶ್ರೀನಿವಾಸಪುರ, ಆರೋಗ್ಯ ಕಾರ್ಯಕರ್ತರು ಹಾಗೂ ವಿದ್ಯಾವಂತ ಸಮುದಾಯ ಜನರಲ್ಲಿ ಆರೋಗ್ಯ ಜಾಗೃತಿ ಉಂಟು ಮಾಡಬೇಕು: ಆಡಳಿತಾಧಿಕಾರಿ ಡಾ. ಜಿ.ಶ್ರೀನಿವಾಸ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ, ಆರೋಗ್ಯ ಕಾರ್ಯಕರ್ತರು ಹಾಗೂ ವಿದ್ಯಾವಂತ ಸಮುದಾಯ ಜನರಲ್ಲಿ ಆರೋಗ್ಯ ಜಾಗೃತಿ ಉಂಟು ಮಾಡಬೇಕು: ಆಡಳಿತಾಧಿಕಾರಿ ಡಾ. ಜಿ.ಶ್ರೀನಿವಾಸ್
ಶ್ರೀನಿವಾಸಪುರ: ಆರೋಗ್ಯ ಕಾರ್ಯಕರ್ತರು ಹಾಗೂ ವಿದ್ಯಾವಂತ ಸಮುದಾಯ ಜನರಲ್ಲಿ ಆರೋಗ್ಯ ಜಾಗೃತಿ ಉಂಟು ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸಬೇಕು ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಜಿ.ಶ್ರೀನಿವಾಸ್ ಹೇಳಿದರು.
  ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ  ರಾಷ್ಟ್ರೀಯ ಡೆಂಗೆ ನಿವಾರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡೆಂಗೆ, ಚಿಕುನ್‌ ಗುನ್ಯಾದಂಥ ರೋಗಗಳನ್ನು ತಡೆಯಲು ಸೊಳ್ಳೆಗಳನ್ನು ನಾಶಪಡಿಸಬೇಕು. ಅದಕ್ಕೆ ಪೂರಕವಾಗಿ ಮನೆ ಪರಿಸರವನ್ನು ಸ್ವಚ್ಚವಾಗಿಡಬೇಕು ಎಂದು ಹೇಳಿದರು.
  ಕ್ಷೇತ್ರ ಆರೊಗ್ಯ ಶಿಕ್ಷಣಾಧಿಕಾರಿ ಎಂ.ಆಂಜಿಲಮ್ಮ, , ಹಿರಿಯ ಪುರುಷ ಆರೋಗ್ಯ ಸಹಾಯಕ ಸುಬ್ರಮಣಿ ಇದ್ದರು.