ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ:ಸದಾ ಬಾಗಿಲು ಮುಚ್ಚಿರುವ ಕೈಗಾರಿಕಾ ವಿಸ್ತರಣಾ ಅಧಿಕಾರಿಗಳು ಜನಪ್ರತಿನಿಧಿಗಳ ಕೈಗೊಂಬೆಯಾಗಿ ಸಾರ್ವಜನಿಕರಿಗೆ ಮಾಹಿತಿ ಇಲ್ಲದೇ ತಮಗೆ ಬೇಕಾದ ಫಲಾನುಭವಿಗಳಿಗೆ ಹೋಲಿಗೆಯಂತ್ರ ಇನ್ನಿತರೆ ಸಲಕರಣೆಗಳು ನೀಡಿರುವುದ ಕ್ಕೆ ಆಕ್ಷೇಪ
ಶ್ರೀನಿವಾಸಪುರ, ಸದಾ ಬಾಗಿಲು ಮುಚ್ಚಿರುವ ಕೈಗಾರಿಕಾ ವಿಸ್ತರಣಾ ಅಧಿಕಾರಿಗಳ ಕಛೇರಿಯ ಅಧಿಕಾರಿಗಳು ಇಂದು ತರಾತುರಿಯಲ್ಲಿ ಜನಪ್ರತಿನಿಧಿಗಳ ಕೈಗೊಂಬೆಯಾಗಿ ಸಾರ್ವಜನಿಕರಿಗೆ ಮಾಹಿತಿ ಇಲ್ಲದೇ ತಮಗೆ ಬೇಕಾದ ಫಲಾನುಭವಿಗಳಿಗೆ ಹೋಲಿಗೆಯಂತ್ರ ಇನ್ನಿತರೆ ಸಲಕರಣೆಗಳು ನೀಡಿರುವುದು ವಿಸ್ತರಣಾ ಅಧಿಕಾರಿ ಪಕ್ಷಪಾತ ಧೋರಣೆ ಆಗಿದೆ ಎಂದು ಭೀಮಾ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕಟ್ಟಡ ಕಾರ್ಮಿಕರ ತಾಲ್ಲೂಕು ಉಪಾಧ್ಯಕ್ಷ ಪೆದ್ದಪಲ್ಲಿ ಈರಪ್ಪ ಆರೋಪಿಸಿದರು.
ಪಟ್ಟಣದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೈಗಾರಿಕಾ ವಿಸ್ತರಣಾ ಅಧಿಕಾರಿಗಳ ಕಛೇರಿಯ ಮುಂಬಾಗ ಇಲಾಖೆಯ ವೈಫಲ್ಯಗಳನ್ನು ಖಂಡಿಸಿ ಮಾತಾನಾಡಿದ ಈರಪ್ಪ ಸುಮಾರು 2-3 ವರ್ಷಗಳಿಂದ ಬಾಗಿಲು ಮುಚ್ಚಿರುವ ಈ ಕಛೇರಿಯ ಅಧಿಕಾರಿಗಳು ಇಂದು ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರನ್ನು ನಾಮಕವ್ಯವಸ್ಥೆಗೆ ಬರಮಾಡಿಕೊಂಡು ತಮಗೆ ಬೇಕಾದ ಫಲಾನುಭವಿಗಳಿಗೆ ಸಲಕರಣೆಗಳನ್ನು ವಿತರಿಸಿದ್ದಾರೆ.
ಇಲಾಖೆಯ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇಲ್ಲ ಸಲಕರಣೆಗಳನ್ನು ವಿತರಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸಮರ್ಪಕವಾಗಿ ಪಡೆದುಕೊಂಡಿರುವುದಿಲ್ಲ ಕಛೇರಿಯ ನಾಮಫಲಕದಲ್ಲಿ ಯಾವುದೇ ಸೂಚನೆ ನೋಟಿಸ್‍ಗಳನ್ನು ಪ್ರಕಟಿಸಿರುವುದಿಲ್ಲ ಅಧಿಕಾರಿ ಲಕ್ಷ್ಮೀಕಾಂತ್ ರವರನ್ನು ಇವುಗಳ ಬಗ್ಗೆ ಪ್ರಶ್ನಿಸಿದಾಗ ತಮ್ಮ ಇಲಾಖೆಯ ಯೋಜನೆಗಳು ಕೇವಲ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಸದಸ್ಯರಿಗೆ ಮಾತ್ರ ಜವಾಬ್ದಾರಿ ಇರುತ್ತದೆ ಅವರ ಶಿಫಾರಸ್ಸಿನ ಮೇರೆಗೆ ನಾವು ಸಲಕರಣೆಗಳನ್ನು ಬೇಕಾದವರಿಗೆ ನೀಡುತ್ತೇವೆ ಎಂದು ಉತ್ತರಿಸುತ್ತಾರೆ ಸಾರ್ವಜನಿಕರಿಂದ ಹಾರಿಸಿ ಬಂದ ಜನಪ್ರತಿನಿಧಿಗಳನ್ನು ಅಲ್ಲದೇ ನಾವು ಯಾರನ್ನು ಕೇಳಬೇಕು, ಇವರು ಇಲ್ಲದೇ ಸಮಯದಲ್ಲಿ ನಾವು ಅಧಿಕಾರಿಗಳನ್ನೇ ಕೇಳುವ ಹಕ್ಕು ನಮಗಿದೆ ಇಂತಹ ಅಧಿಕಾರಿಗಳು ಆಡಳಿತ ಪಕ್ಷದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿ ಸಂಭಂದಿಸಿದ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ಇಲಾಖೆಯಿಂದ ಬರುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ಈ ಸಮಯದಲ್ಲಿ ಮುಖಂಡರಾದ ಚೆನ್ನಯ್ಯಗಾರಿಪಲ್ಲಿ ಗಂಗಿರೆಡ್ಡಿ, ಆರ್.ತಿಮ್ಮಸಂದ್ರ ಗಂಗಾಧರ್ ಮತ್ತಿತರರು ಹಾಜರಿದ್ದರು.