ಶ್ರೀನಿವಾಸಪುರ|ಶಾಲೆಗಳಿಗೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಗುರುತಿಸಿ, ಪಟ್ಟಿ ತಯಾರಿಸಿ ಕೊಡಬೇಕು : ‌ ಅಪ್ಪಿರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ:  ಶಾಲೆಗಳಿಗೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಗುರುತಿಸಿ, ಪಟ್ಟಿ ತಯಾರಿಸಿ ಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪ ವಿಭಾಗದ ಎಂಜಿನಿಯರ್‌ ಅಪ್ಪಿರೆಡ್ಡಿ ಹೇಳಿದರು.
  ತಾಲ್ಲೂಕಿನ ಅಡ್ಡಗಲ್‌ ಗ್ರಾಮದಲ್ಲಿ ಏರ್ಪಡಿಸಿದ್ದ ಜಲ ಜೀವನ್‌ ಮಿಷನ್‌ ತರಬೇತಿ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿ, ಸರ್ಕಾರ, ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಲು ಯೋಜನೆ ರೂಪಿಸಿದೆ. ಪ್ರತಿ ಶಾಲೆಗೂ ಕುಡಿಯವ ನೀರು, ಶೌಚಾಲಯ, ಕಾಂಪೌಂಡ್‌, ಗೋಡೆ ಬರಹದಂಥ ಸೌಲಭ್ಯ ನೀಡಲಾಗುತ್ತಿದೆ. ಈಗ ಅಗತ್ಯ ಇರುವ ಸೌಲಭ್ಯಗಳ ಪಟ್ಟಿ ನೀಡಬೇಕು ಎಂದು ಹೇಳಿದರು.  ಈ ಸಂದರ್ಭದಲ್ಲಿ ಜಲ ಜೀವನ್‌ ಮಿಷನ್‌ ಹಾಗೂ  ಗ್ರಾಮ ಶಿಕ್ಷಣ ಪಡೆಗೆ ಸಮಿತಿಗಳನ್ನು ರಚಿಸಲಾಯಿತು.   ಅಡ್ಡಗಲ್‌ ಪಿಡಿಒ ಚಂದ್ರಶೇಖರ್‌, ಕೂರಿಗೆಪಲ್ಲಿ ಪಿಡಿಒ ರಮೇಶ್‌, ಸಿಆರ್‌ಪಿ ಕಲಾ ಶಂಕರ್‌, ಬಿಆರ್‌ಸಿ ಸುಧಾಕರರೆಡ್ಡಿ, ಮುಖಂಡರಾದ ವಿ.ಕಿಟ್ಟಣ್ಣ, ರಾಮಸುಬ್ಬು, ನಾಗರಾಜು, ವೇಣುಗೋಪಾಲ್‌, ಮುಖ್ಯ ಶಿಕ್ಷಕಿ ಪ್ರಮೀಳಮ್ಮ ಇದ್ದರು.