ಶ್ರೀನಿವಾಸಪುರ:ಮೊಬೈಲ್ ಫೋನ್‌ನಲ್ಲಿ ವಿಷ ಸೇವಿಸುವ ವಿಡಿಯೋ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ:ಮೊಬೈಲ್ ಫೋನ್‌ನಲ್ಲಿ ವಿಷ ಸೇವಿಸುವ ವಿಡಿಯೋ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ

ಶ್ರೀನಿವಾಸಪುರ: ಪಟ್ಟಣದ ಈದ್ಗಾ ಮೈದಾನದ ಸಮೀಪ ವಿವಾಹಿತ ವ್ಯಕ್ತಿಯೊಬ್ಬರು ಮೊಬೈಲ್ ಫೋನ್‌ನಲ್ಲಿ ವಿಷ ಸೇವಿಸುವ ವಿಡಿಯೋ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಸೋಮವಾರ ನಡೆದಿದೆ.

  ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿ ಸುಲೇಮಾನ್‌ (28) ಎಂದು ಗುರುತಿಸಲಾಗಿದೆ. ಪಟ್ಟಣದ ಜಾಕೀರ್‌ ಹುಸೇನ್‌ ಮೊಹಲ್ಲಾದ ನಿವಾಸಿಯಾದ ಸುಲೇಮಾನ್‌, ಹೈದರಾಲಿ ಮೊಹಲ್ಲಾದಲ್ಲಿ ಮದುವೆಯಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದಾನೆ. ಕಾರು ಚಾಲನೆ ಮಾಡಿ ಜೀವನ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ.

  ಘಟನಾ ಸ್ಥಳದಲ್ಲಿದ್ದ ಕೆಲವರು, ಸುಲೇಮಾನ್ ಕಾರಿನಲ್ಲಿ ಕುಳಿತು ವಿಷ ಸೇವಿಸುತ್ತಿದ್ದುದನ್ನು ಕಂಡು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರು. ಮತ್ತೆ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ  ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಹೇಳಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.