ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ:ಪಟ್ಟಣದಲ್ಲಿ ನಿತ್ಯಧಾರ ಮಾತೆಯ ದೇವಾಲಯದ 6ನೇ ವಾರ್ಷಿಕೋತ್ಸವದ ಪ್ರಯುಕ್ತ ಮೇರಿ ಮಾತೆಯ ತೇರಿನ ವೈಭವ
ಶ್ರೀನಿವಾಸಪುರ, ಪಟ್ಟಣದಲ್ಲಿ ನಿತ್ಯಧಾರ ಮಾತೆಯ ದೇವಾಲಯದ 6ನೇ ವಾರ್ಷಿಕೋತ್ಸವದ ಪ್ರಯುಕ್ತ ಮೇರಿ ಮಾತೆಯ ತೇರಿನ ಮೆರವಣಿಗೆಯನ್ನು ಕ್ರೀಶ್ಚಿಯನ್ ಸಮುದಾಯದವರು ಅತ್ಯಂತ ವೈಭವಪೂರಿತವಾಗಿ ಶ್ರದ್ಧಾ ಭಕ್ತಿಯಿಂದ ವಿಶೇಷವಾಗಿ ಮಹಿಳೆಯವರು ಮೇಣದ ಬತ್ತಿ ದೀಪಗಳೊಂದಿಗೆ ಮೆರವಣಿಗೆ ಮಾಡಿದರು.
ಪಟ್ಟಣದ ರಾಜಾಜಿ ರಸ್ತೆ ಕೋಲಾರ ವೃತ್ತದಲ್ಲಿ ಮೇರಿ ಮಾತೆಯ ದೇವಾಲಯದಲ್ಲಿ 6ನೇ ವರ್ಷದ ವಾರ್ಷಿಕೋತ್ಸವವನ್ನು ಏರ್ಪಡಿಸಲಾಗಿದ್ದು ನಾಲ್ಕು ದಿನಗಳ ಕಾಲ ಧ್ವಜರೋಹಣ, ಜಪಸರ, ದಿವ್ಯಬಲಿಪೂಜೆ ಹಾಗೂ ಪ್ರಭೋದನೆ, ಹಬ್ಬದ ಆಡಂಬರದ ಗಾಯನ ಬಲಿಪೂಜೆಯನ್ನು ಸಂಭ್ರಮದಿಂದ ಏರ್ಪಡಿಸಿ ಅಂತಿಮವಾಗಿ ನಿತ್ಯಧಾರ ಮಾತೆಯ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ರಾಜಾಜಿ ರಸ್ತೆ ಇಂದ್ರಾಭವನ್ ವೃತ್ತ ಎಂ.ಜಿ.ರಸ್ತೆ, ಬಮ್ಮುಬಜಾರ್ ರಸ್ತೆಗಳಲ್ಲಿ ಮೆರವಣಿಗೆಯನ್ನು ನೆರವೇರಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಆರ್ಚ್ ಬಿಷಪ್ ಅ|ವಂ|ಡಾ| ಪೀಟರ್ ಮಜಾದೊ, ಎಸ್.ಎಫ್.ಎಸ್.ಶಾಲೆಯ ಪ್ರಾಶಂಪಾಲರಾದ ವಂ.ಸ್ವಾಮಿ ಜೋಸೆಫ್ ತೋಪ್ಪಿಲ್, ಬೇತಮಂಗಲ ಗುರುಗಳಾದ ವಂ.ಸ್ವಾಮಿ ದೇವಾನ್ಬು ಜಾನ್ ಎ. ಬೆಂಗಳೂರಿನ ವಂ.ಸ್ವಾಮಿ ದೀಪಕ್ ಜೋಸೆಫ್, ಮೈಕಲ್ ಮಿನೋಜಸ್ ಇವರು ಪೂಜಾ ವಾರ್ಷಿಕೋತ್ಸವದ ಪ್ರಭೋದನೆಗಳನ್ನು ನಡೆಸಿಕೊಟ್ಟಿದ್ದರು ಈ ಸಮಯದಲ್ಲಿ ಕ್ರೀಶ್ಚಿಯನ್ ಸಮಾಜದ ಪ್ರಮುಖರಾದ ಜಯಮೇರಿ, ಎಂ.ಜಿ.ಪ್ರಕಾಶ್, ಕ್ರಿಸ್ಟಿ, ಅಂಥೋನಿ ದಾಸ್, ರವಿಚಂದ್ರ, ಅಂಬೇಡ್ಕರ್ ಪಾಳ್ಯ ಸಿ,ರವಿ, ಜಯಶೀಲ, ರಾಜಾ, ಪುಷ್ಪಾವತಿ, ಮಂಜುಳ, ಶ್ಯಾಮಲಮ್ಮ, ಶಾಂತ, ಸೋನಿ, ಸುನೀತ, ಮೇರಿ ಸೇಲ್ವಿ, ಪರಿಮಳ, ಜಾನ್ಸಿ ಇನ್ನೂ ಅನೇಕರು ಭಾಗವಹಿಸಿದರು.