ಶ್ರೀನಿವಾಸಪುರದ ವ್ಯಾಪಾರಿ ಕುಟುಂಬಕ್ಕೂ ಸೋಂಕು

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

ಶ್ರೀನಿವಾಸಪುರದ ವ್ಯಾಪಾರಿ ಕುಟುಂಬಕ್ಕೂ ಸೋಂಕು 

 

 

ಶ್ರೀನಿವಾಸಪುರ : ವ್ಯಾಪಾರ ನಿಮಿತ್ತ ಚೆನ್ನೈಗೆ ಹೋಗಿಬಂದಿದ್ದ ಪಟ್ಟಣದ ಸುಭಾಷ್ ರಸ್ತೆಯ ನಿವಾಸಿ ಸ್ಟೀಲ್ ಪಾತ್ರೆಗಳ ವ್ಯಾಪಾರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು . ನಂತರ ಆತನ ಕುಟುಂಬದ ಸದಸ್ಯರಿಗೆ ದ್ರವ ಪರೀಕ್ಷೆಗೆ ಒಳಪಡಿಸಲಾಗಿದ್ದು , ಇಂದು ಕುಟುಂಬಸ್ಥರ ಪರೀಕ್ಷೆ ವರದಿ ಬಂದಿದ್ದು ವ್ಯಾಪಾರಿಯ ತಂದೆ ( 70 ) ತಂದೆಯ ಸಹೋದರಿ ( 65 ) , ಮತ್ತು ವ್ಯಾಪರಿಯ ಮಗಳು ( 17 ) ಳಿಗೂ ಕೊರೋನಾ ಪಾಸಿಟಿವ್ ವರದಿ ಬಂದಿದೆ . ಈ ಮೂವರನ್ನು ಕೋಲಾರದ ಕೋವಿಡ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ . ಶ್ರೀನಿವಾಸಪುರ ಪಟ್ಟಣದಲ್ಲಿ ಒಟ್ಟು ಐದು ಮಂದಿಗೆ ಸೋಂಕು ಇದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ ತಿಳಿಸಿರುತ್ತಾರೆ .