ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದ ಪೊಲೀಸರು ಸೀಮೆ ಹಸು ಕಳ್ಳತನ ಮಾಡಿದ ಆರೋಪದ ಮೇಲೆ 4 ಮಂದಿಯನ್ನು ಬಂಧಿಸಿ ಟೆಂಪೋವೊಂದನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀನಿವಾಸಪುರ: ಇಲ್ಲಿನ ಪೊಲೀಸರು ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸೀಮೆ ಹಸುಗಳನ್ನು ಕದಿಯುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿ, ಅವರಿಂದ ಕಳ್ಳತನಕ್ಕೆ ಬಳಸಲಾಗುತ್ತಿದ್ದ ಒಂದು ಬೊಲೆರೋ ವಾಹನ, ಒಂದು ಮೊಫೆಡ್ ಹಾಗೂ ರೂ.2.50 ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಶ್ರೀನಿವಾಸಪುರದ ಯೂಸೂಫ್, ಇರ್ಷಾದ್ ಖಾನ್, ಚಿಂತಾಮಣಿಯ ರಹಮತ್ ಉಲ್ಲಾ ಹಾಗೂ ಶಾಮೀರ್, ತಾಲ್ಲೂಕಿನ ಆಲವಟ್ಟ, ಮೊಗಲಹಳ್ಳಿ, ಕೊಳ್ಳೂರು,ದೊಡಮಲದೊಡ್ಡಿ, ಪಾತಪಲ್ಲಿ, ಪನಸಮಾಕನಹಳ್ಳಿ ಮತ್ತಿತರ ಕೆಲವು ಗ್ರಾಮಗಳಲ್ಲಿ ಸೀಮೆ ಹಸುಗಳನ್ನು ಕದ್ದಿದ್ದರು. ಬುಧವಾರ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಯಿತು. ಪೊಲೀಸರ ಕಾರ್ಯದಕ್ಷತೆಗೆ ಮೆಚ್ಚಿ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ನಗದು ಬಹಮಾನ ಪ್ರಕಟಿಸಿದ್ದಾರೆ ಎಂದು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಎನ್.ಕೆ.ರಾಘವೇಂದ್ರ ಪ್ರಕಾಶ್ ತಿಳಿಸಿದ್ದಾರೆ.
ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಎನ್.ಕೆ.ರಾಘವೇಂದ್ರ ಪ್ರಕಾಶ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ನರಸಿಂಹಮೂರ್ತಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿ ಭೀಮಯ್ಯ, ನಾರಾಯಣಸ್ವಾಮಿ, ಪಿ.ಕಿರಣ್ ಕುಮಾರ್, ಎಸ್.ಮಂಜುನಾಥ್, ಮೆಹಬೂಬ್ ಪಾಷ, ರಾಮಚಂದ್ರ ಆರೋಪಿಗಳನ್ನು ಬಂಧಿಸಿದರು ಎಂದು ಹೇಳಲಾಗಿದೆ.