ವರದಿ :ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಭಾರತೀಯರ ಸೇವಾ ಸಮಿತಿ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಡಾ.ಹೆಚ್.ಎಂ.ರಾಮಚಂದ್ರ ( ಹೂಡಿ ಚಿನ್ನಿ ) ಹಾಗೂ ಜೆಡಿಎಸ್ ರಾಜ್ಯ ವಕ್ತಾರರ ಅಮರ್ ಚಿಂತಾಮಣಿ ಹಾಗೂ ರಾಜ್ಯ ಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ಶ್ರೀನಿವಾಸಪು ತಹಶೀಲ್ದಾರ್ ರವರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ . ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಸಂದರ್ಭದಲ್ಲಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಖಂಡನೀಯ . ಈ ಘಟನೆಯಿಂದ ಪೋಷಕರು ಹೆಣ್ಣುಮಕ್ಕಳನ್ನು ಶಾಲಾ , ಕಾಲೇಜಿಗೆ ಕಳುಹಿಸಲು ಹೆದರುವಂತಾಗಿದೆ ಎಂದು ತಹಶೀಲ್ದಾರ್ಗೆ ನೀಡಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ . ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು . ಹಾಗೂ ಗಡಿಪಾರು ಮಾಡಬೇಕು . ಸಂಬಂಧಪಟ್ಟ ಅಧಿಕಾರಿಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಆಯಾ ಪ್ರದೇಶದ ಸಬ್ ಇನ್ಸ್ಪೆಕ್ಟರ್ ರವರು ಶಾಲಾ , ಕಾಲೇಜುಗಳಲ್ಲಿ ಕುಂದುಕೊರತೆ ವಿಚಾರಣಾ ಸಭೆ ನಡೆಸಬೇಕು . ಸಮಸ್ಯೆಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಆಗಿಂದಾಗ್ಗೆ . ಬಗೆಹರಿಸಬೇಕು ಎಂದು ಒತ್ತಾಯಿಸಿ , ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ಗೆ ನೀಡಲಾಯಿತು .
ಈ ಸಂದಭ್ರದಲ್ಲಿ ಪದಾಧಿಕಾರಿಗಳಾದ ಸಂತೋಷ್ ಕುಮಾರ್ , ವಿ.ಶ್ರೀನಿವಾಸ್ , ವೆಂಕಟೇಶಪ್ಪ , ಪೂಜೇಶ್ , ವೆಂಕಟಸ್ವಾಮಿ , ಪ್ರಶಾಂತ್ , ವರದರಾಜ್ , ಮುನಿಯಪ್ಪ , ಪ್ರಭಾಕರ್ , ಶೈಲಜಾ , ಗುರುಮೂರ್ತಿ , ಮುರಳಿ , ನಾರಾಯಣಸ್ವಾಮಿ , ಮಂಜುಳ , ಮುನಿಯಪ್ಪ , ಅಶ್ವಥ್ , ಕೃಷ್ಣಪ್ಪ ಚಿಂತಾಮಣಿ , ಲಕ್ಷ್ಮೀ ಇನ್ನು ಮುಂತಾದವರು ಭಾಗವಹಿಸಿದ್ದರು .