ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮತದಾರರ ಪಟ್ಟಿ ಪರಿಷ್ಕರಣೆ ತರಬೇತಿ ಸಭೆಯಲ್ಲಿ ಸಂಪನ್ನೂಲ ವ್ಯಕ್ತಿ ಜಿ.ಕೆ.ನಾರಾಯಣಸ್ವಾಮಿ ಮಾತನಾಡಿದರು.
ಶ್ರೀನಿವಾಸಪುರ: ಮತದಾರರ ಪಟ್ಟಿ ಪರಿಷ್ಕರಣೆೆಯನ್ನು ಎಚ್ಚರಿಕೆಯಿಂದ ಮಾಡಬೇಕು. ಮತದಾರರ ಪಟ್ಟಿಗೆ ಸೇರಿಸಿಕೊಳ್ಳುವ ಹಾಗೂ ಪಟ್ಟಿಯಿಂದ ತೆಗೆಯಲು ನೀಡಲಾಗಿರುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಜಿ.ಕೆ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಜನವರಿ 1, 2020 ಅರ್ಹತಾ ದಿನಾಂಕಕ್ಕೆ ಒಳಪಟ್ಟಂತೆ ಭಾವ ಚಿತ್ರ ಇರುವ ಮತಾದರರ ಪಟ್ಟಿಯ ವಿಶೇಷ ಸಂಕ್ತಿಪ್ತ ಪರಿಷ್ಕರಣೆ ಕುರಿತು ಬಿಎಲ್ಒಗಳಿಗೆ ಏರ್ಪಡಿಸಿದ್ದ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ಮಾತನಾಡಿ ಇದು ಅತ್ಯಂತ ನಾಜೂಕಿನ ಕೆಲಸ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಪಟ್ಟಿಯಲ್ಲಿ ಅರ್ಹ ಮತಾದಾರ ಹೆಸರು ಬಿಟ್ಟು ಹೋಗಿದ್ದಲ್ಲಿ ಸೇರಿಸಿಕೊಳ್ಳಬೇಕು. ಮೃತ ಮತದಾರರ ಹಾಗೂ ಮದುವೆಯಾಗಿ ಹೋಗಿರುವ ಮಹಿಳೆಯರ ಹಾಗೂ ಊರು ಹೋಗಿರುವ ವ್ಯಕ್ತಿಗಳು ಹೆಸರುಗಳನ್ನು ತೆಗೆಯಬೇಕು. ಆಕಸ್ಮಿಕವಾಗಿ ಮತದಾರರ ಪಟ್ಟಿಯಲ್ಲಿ ಒಬ್ಬ ಮತದಾರನ ಹೆಸರು ಎರಡು ಸಲ ಮುದ್ರಿತವಾಗಿದ್ದಲ್ಲಿ ಒಂದು ಕಡೆ ತೆಗೆಯಬೇಕು ಎಂದು ಹೇಳಿದರು.
ಚುನಾವಣಾಧಿಕಾರಿ ಸುರೇಶ್, ಮುಖ್ಯ ತರಬೇತುದಾರ ಡಾ.ಶೇಷಗಿರಿ, ಸೋಮಶೇಕರ್, ಹರೀಶ್, ಸರಿತ ಇದ್ದರು.