ಶ್ರೀನಿವಾಸಪುರದ ಜೆಡಿಎಸ್‌ ಕಚೇರಿಯಲ್ಲಿ  ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿದರು

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ

ಶ್ರೀನಿವಾಸಪುರದ ಜೆಡಿಎಸ್‌ ಕಚೇರಿಯಲ್ಲಿ  ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿದರು.

ಶ್ರೀನಿವಾಸಪುರ: ಸರ್ಕಾರ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಅವರ ಅಧಿಕಾರ ದುರುಪಯೋಗದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಆಗ್ರಹಿಸಿದರು.

  ಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಮಾತನಾಡುವ ಸ್ವಾತಂತ್ರ್ಯ ಕೊಟ್ಟಿದೆ. ಸಾರ್ವಜನಿಕ ಜೀವನದಲ್ಲಿ ಇರುವವರು ಯಾವುದೇ ಆನ್ಯಾಯ ಸಹಿಸಲು ಸಾಧ್ಯವಿಲ್ಲ. ಹಾಗೇನಾದರೂ ಸುಮ್ಮನಿದ್ದರೆ ಅದು ದೇಶ ದ್ರೋಹವಾಗುತ್ತದೆ. ಆದರೆ ರಮೇಶ್‌ ಕುಮಾರ್‌ ತಾವು ಮಾಡಿದ್ದೆಲ್ಲಾ ಸರಿ ಎಂಬ ಧೋರಣೆ ಹೊಂದಿದ್ದಾರೆ ಎಂದು ಟೀಕಿಸಿದರು.

  ಈ ಹಿಂದೆ ವಿಧಾನ ಸೌಧದ ಮಾಜಿ ಮುಖ್ಯ ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದೆ. ರಮೇಶ್‌ ಕುಮಾರ್‌ ಅವರ ವಿರುದ್ಧ ನಾನು ಮಾತನಾಡುವುದಿಲ್ಲ. ದಾಖಲೆಗಳು ಮಾತನಾಡುತ್ತವೆ. ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ಸಿಬಿಐ ತನಿಖೆಗೆ ಒಳಪಡಿಸುವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದೇನೆ ಎಂದು ಹೇಳಿದರು. ರಮೇಶ್‌ ಕುಮಾರ್‌ ಅವರಿಗೆ ಸಂಬಂಧಿಸಿದವೆಂದು ಹೇಳಲಾದ ಕೆಲವು ದಾಖಲೆಗಳನ್ನು ಪ್ರದರ್ಶಿಸಿದರು.

   ರಮೇಶ್‌ ಕುಮಾರ್‌ ಅವರು ಬೆಂಗಳೂರಿನಲ್ಲಿ ತಮ್ಮ ಪುತ್ರನ ಹೆಸರಲ್ಲಿ ಕಾಲು ಎಕರೆ ವಿಸ್ತೀರ್ಣದಲ್ಲಿ ಸುಮಾರು ರೂ. 16 ಕೋಟಿ ವೆಚ್ಚದಲ್ಲಿ ಮನೆ ನಿರ್ಮಿಸಿದ್ದಾರೆ. ಶಾಪಿಂಗ್‌ ಕಾಂಪ್ಲೆಕ್ಸ್‌ ಹೊಂದಿದ್ದಾರೆ. ಅಷ್ಟೊಂದು ಹಣವನ್ನು ವ್ಯವಸಾಯ ಅಥವಾ ಕುರಿ ಸಾಕಿ ಸಂಪಾದಿಸಲು ಸಾಧ್ಯವಿಲ್ಲ. ಅವರು ಆರೋಗ್ಯ ಸಚಿವರಾಗಿದ್ದಾಗ ಅಕ್ರಮ ಎಸಗಿರುವ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಸಮೀಪ ಸುಮಾರು 120 ಎಕರೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಮಾಡಿಕೊಂಡು ಭದ್ರ ಬೇಲಿ ಹಾಕಿದ್ದಾರೆ. ಜಮೀನು ಅಡ ಇಟ್ಟು ಬ್ಯಾಂಕ್ ಸಾಲ ಪಡೆದಿದ್ದಾರೆ ಎಂದು ಆಪಾದಿಸಿದರು.

  ಕಳೆದ ಲೋಕಸಭೆ ಚುನಾವಣೆಯಲ್ಲಿ ಕಪಟ ನಾಟಕವಾಡಿ ಕೋಲಾರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲು ಸಹಾಯ ಮಾಡಿದ್ದಾರೆ. ಅಧಿಕೃತ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಸೋಲಿಗೆ ಕಾರಣರಾಗಿದ್ದಾರೆ ಎಂದು ಆಪಾದಿಸಿದರು.

    ಜಿಲ್ಲಾ ಪಂಚಾಯಿತಿ ಸದಸ್ಯರಾದ ತೂಪಲ್ಲಿ ನಾರಾಯಣಸ್ವಾಮಿ, ಗಣೇಶ್‌, ನಂಜುಂಡಪ್ಪ,ಮಾಜಿ ಪುರಸಭೆ ಅಧ್ಯಕ್ಷ ಮಹಬೂಬ್ ಷರೀಫ್, ಪುರಸಭೆಯ ಕೌನ್ಸಿಲರ್‌ಗಳಾದ ಬಾಬಾ ಜಾನ್, ಶಬ್ಬೀರ್ ಖಾನ್, ಟಿ ಜವಾದ್ ಅಹ್ಮದ್, ಎ ನಿಸಾರ್ ಅಹ್ಮದ್, ಎಜೆಕೆ ಜಬೀರ್, ಕಿಸ್ಸಾನ್ ಅಜಾಜ್

, ಮಾಜಿ ಕೌನ್ಸಿಲರ್ ಅಜಾಜ್ 

 ಮಾಜಿ ಸದಸ್ಯರಾದ ಜಿ.ರಾಜಣ್ಣ, ಸೋಮಶೇಖರರೆಡ್ಡಿ, ಪುರಸಭಾ ಸದಸ್ಯ ಬಿ.ವೆಂಕಟರೆಡ್ಡಿ, ವಕೀಲರಾದ ಕೆ.ಶಿವಪ್ಪ, ಮಾರುತಿ ರೆಡ್ಡಿ, ಮುಖಂಡರಾದ ಪೂಲ ಶಿವಾರೆಡ್ಡಿ, ಸರ್ವೇಶ್‌, ಹೊಗಳಗೆರೆ ಆಂಜಿ, ವೆಂಕಟರಾಮರೆಡ್ಡಿ, ರಾಜು ಇದ್ದರು.