ಶ್ರೀನಿವಾಸಪುರದಲ್ಲಿ ಬುಧವಾರ ಎಪಿಎಂಸಿ ಟೊಮೆಟೊ ವರ್ತಕರ ಸಂಘದಿಂದ ಪೂಜಿಸಲಾಗಿದ್ದ ಗಣಪತಿ ವಿಗ್ರಹವನ್ನು ವಿಸರ್ಜನೆಗೆ ಮೊದಲು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರದಲ್ಲಿ ಬುಧವಾರ ಎಪಿಎಂಸಿ ಟೊಮೆಟೊ ವರ್ತಕರ ಸಂಘದಿಂದ ಪೂಜಿಸಲಾಗಿದ್ದ ಗಣಪತಿ ವಿಗ್ರಹವನ್ನು ವಿಸರ್ಜನೆಗೆ ಮೊದಲು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.

ಶ್ರೀನಿವಾಸಪುರ: ಹಬ್ಬದ ಪ್ರಯುಕ್ತ ಪೂಜಿಸಲಾಗಿದ್ದ ಗಣಪತಿ ವಿಗ್ರಹಗಳನ್ನು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಲಾಯಿತು.
  ಪಟ್ಟಣದ ಎಪಿಎಂಸಿ ಮಾರುಟ್ಟೆ ಪ್ರಾಂಗಣದಲ್ಲಿ ಟೊಮೆಟೊ ವರ್ತಕರ ಸಂಘದ ವತಿಯಿಂದ ಪೂಜಿಸಲಾಗಿದ್ದ ಬೃಹತ್ ಗಣಪತಿ ವಿಗ್ರಹವನ್ನು ಬೆಳ್ಳಿ ರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು. 
  ಟೊಮೆಟೊ ನೌಕರರ ಸಂಘದ ಅಧ್ಯಕ್ಷ ಎಚ್‌.ರವೀಂದ್ರರೆಡ್ಡಿ, ಮುಖಂಡರಅದ ಚಂದ್ರು, ಶಿವಾರೆಡ್ಡಿ, ವೆಂಕಟರಾಮರೆಡ್ಡಿ, ಆರ್‌.ಕೆ.ಶ್ರೀನಿವಾಸರೆಡ್ಡಿ, ದಿವಾಕರ್‌, ಎಂ.ಕೆ.ಆಂಜನೇಯರೆಡ್ಡಿ, ರಾಮಾಂಜಲರೆಡ್ಡಿ ಮೆರವಣಿಗೆ ನೇತೃತ್ವ ವಹಿಸಿದ್ದರು.
  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಸಂಘದ ವತಿಯಿಂದ ಪೂಜಿಸಲಾಗಿದ್ದ ಗಣಪತಿ ವಿಗ್ರಹವನ್ನು ಪಟ್ಟಣದ ಎಂಜಿ ರಸ್ತೆಯಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.
  ಪಟ್ಟಣದ ಹೊರ ವಲಯದಲ್ಲಿ ಗದ್ದೆ ಬಯಲು ಗಣಪತಿ ಸಂಘದ ವತಿಯಿಂದ ಪೂಜಿಸಲಾಗಿದ್ದ ಗಣಪತಿ ವಿಗ್ರಹವನ್ನು ವಿಶೇಷವಾಗಿ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು.