ಶ್ರೀನಿವಾಸಪುರದಲ್ಲಿ  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಎಸ್‌ಎಸ್‌ಎ ಮತ್ತು ಆರ್‌ಎಂಎಸ್‌ಎ ಶಿಕ್ಷಕರಿಗೆ ಬಾಕಿ ಇರುವ ನಾಲ್ಕು ತಿಂಗಳ ಸಂಬಳ ನೀಡುವಂತೆ ಆಗ್ರಹಿಸಿ ಬಿಇಒ ಬಿ.ರೇಣುಕಮ್ಮ ಅವರಿಗೆ ಮನವಿ ಪತ್ರ ನೀಡಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಎಸ್‌ಎಸ್‌ಎ ಮತ್ತು ಆರ್‌ಎಂಎಸ್‌ಎ ಶಿಕ್ಷಕರಿಗೆ ಬಾಕಿ ಇರುವ ನಾಲ್ಕು ತಿಂಗಳ ಸಂಬಳ ನೀಡುವಂತೆ ಆಗ್ರಹಿಸಿ ಬಿಇಒ ಬಿ.ರೇಣುಕಮ್ಮ ಅವರಿಗೆ ಮನವಿ ಪತ್ರ ನೀಡಿದರು.
ಶ್ರೀನಿವಾಸಪುರ: ಪಟ್ಟಣದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಎಸ್‌ಎಸ್‌ಎ ಮತ್ತು ಆರ್‌ಎಂಎಸ್‌ಎ ಶಿಕ್ಷಕರಿಗೆ ಬಾಕಿ ಇರುವ ನಾಲ್ಕು ತಿಂಗಳ ಸಂಬಳ ನೀಡುವಂತೆ ಆಗ್ರಹಿಸಿ ಬಿಇಒ ಬಿ.ರೇಣುಕಮ್ಮ ಅವರಿಗೆ ಮನವಿ ಪತ್ರ ನೀಡಿದರು.
  ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಗೋವಿಂದರೆಡ್ಡಿ ಮಾತನಾಡಿ, ಎಸ್‌ಎಸ್‌ಎ ಮತ್ತು ಆರ್‌ಎಂಎಸ್‌ಎ ಶಿಕ್ಷಕರಿಗೆ ನಾಲ್ಕು ತಿಂಗಳಿಂದ ಸಂಬಳ ನೀಡಿಲ್ಲದ ಪರಿಣಾಮವಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಶಿಕ್ಷಕರ ಆರ್ಥಿಕ ಸಮಸ್ಯೆಯನ್ನು ಮನಗಂಡು ಶೀಘ್ರವಾಗ ಸಂಬಳ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
  ಬಿಇಒ ಬಿ.ರೇಣುಕಮ್ಮ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಶಿಕ್ಷಕರ ಬೇಡಿಕೆಯನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗುವುದು. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
  ಸಂಘದ ಮುಖಂಡರಾದ ಬೇರೇಗೌಡ, ಕಲಾ ಶಂಕರ್‌ ಮಂಜುನಾಥರೆಡ್ಡಿ, ಹರಿ, ಬಿಆರ್‌ಸಿ ಸಮನ್ವಯಾಧಿಕಾರಿ ವಸಂತ ಇದ್ದರು.