ಶ್ರೀನಿವಾಸಪುರದಲ್ಲಿ ಜಿಲ್ಲಾ ಕನ್ನಡಸಿರಿ ಸಾಹಿತ್ಯ ಪರಿಷತ್ತಿನ  ವರ್ಷದ ಅವಲೋಕನ ಕಾರ್ಯಕ್ರಮ ಪ.ಪೂ. ಕಾ.ಕನ್ನಡ ಉಪನ್ಯಾಸಕರ ವೇದಿಕೆ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್‌ ಉದ್ಘಾಟಿಸಿ ಮಾತನಾಡಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಶ್ರೀನಿವಾಸಪುರದಲ್ಲಿ ಜಿಲ್ಲಾ ಕನ್ನಡಸಿರಿ ಸಾಹಿತ್ಯ ಪರಿಷತ್ತಿನ  ವರ್ಷದ ಅವಲೋಕನ ಕಾರ್ಯಕ್ರಮ ಪ.ಪೂ. ಕಾ.ಕನ್ನಡ ಉಪನ್ಯಾಸಕರ ವೇದಿಕೆ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್‌ ಉದ್ಘಾಟಿಸಿ ಮಾತನಾಡಿದರು.

 

 

ಶ್ರೀನಿವಾಸಪುರ: ಜನರು ನಾಡ ಗೀತೆ ಹಾಗೂ ರಾಷ್ಟ್ರ ಗೀತೆಯ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆಯ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್‌ ಹೇಳಿದರು.

  ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ  ಜಿಲ್ಲಾ ಕನ್ನಡಸಿರಿ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಏರ್ಪಡಿಸಿದ್ದ ಪರಿಷತ್ತಿನ ವರ್ಷದ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡಗೀತೆಯಲ್ಲಿ ಪ್ರತಿ ದಿನ ಸರ್ವ ಜನಾಂಗದ ಸುಂದರ ತೋಟ ಎಂದು ಹಾಡುವ ನಾವು, ಎಲ್ಲರಲ್ಲೂ ಪ್ರೀತಿಯನ್ನು ಕಾಣುತ್ತೇವೆ. ಇದು ಸಮರಸದ ಜೀವನಕ್ಕೆ ಅತ್ಯಗತ್ಯ ಎಂದು ಹೇಳಿದರು.

    ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಶೇ.27 ರಷ್ಟು ಕನ್ನಡಿಗರಿದ್ದಾರೆ. ಸರ್ಕಾರ ಕನ್ನಡ ಶಾಲೆಗಳ ಅಭಿವೃದ್ಧಿಗೆ ಇನ್ನಷ್ಟು ಗಮನ ನೀಡಬೇಕು. ಮಕ್ಕಳು ಸರ್ಕಾರಿ ಶಾಲೆ ಸೇರುವಂಥ ವಾತಾವರಣ ನಿರ್ಮಾಣ ಮಾಡಬೇಕು. ಸರ್ಕಾರ ಹಾಗೂ ಕನ್ನಡ ಪರ ಸಂಘಟನೆಗಳು ನಾಡು ನುಡಿಯ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹೇಳಿದರು.

  ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಕೆ.ನರಸಿಂಹಮೂರ್ತಿ ಆಶಯ ಭಾಷಣ ಮಾಡಿದರು. ವಿಜ್ಞಾನ ಲೇಖಕ ಎಚ್‌.ಎನ್‌.ಪುರುಷೋತ್ತಮರಾವ್‌ ಕನ್ನಡ ಭಾಷೆಯ ಸಮಸ್ಯೆಗಳು ಎಂಬ ವಿಷಯದ ಬಗ್ಗೆ ಮಾತನಾಡಿದರು. ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಖಜಾಂಚಿ ಕೆ.ಎನ್‌.ಪರಮೇಶ್ವರನ್‌ ಕನ್ನಡ ಅಂದು, ಇಂದು, ಮುಂದೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾಧ್ಯಕ್ಷ ಟಿ.ಸುಬ್ಬರಾಮಯ್ಯ ಪರಿಷತ್ತಿನ ಸಾಧನೆ ಕುರಿತು ಮಾತನಾಡಿದರು.

  ಕಾಲೇಜಿನ ಪ್ರಾಂಶುಪಾಲ ಎಂ.ನಾರಾಯಣಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಪರ ಸಂಘಟನೆಗಳು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಬೇಕು. ನಾಡು ನುಡಿ ಸೇವೆಯಲ್ಲಿ ತೊಡಗಬೇಕು. ಸಮಾಜಕ್ಕೆ ನೀಡುವ ಕೊಡುಗೆ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.

  ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಎನ್‌.ಮುನಿವೆಂಕಟೇಗೌಡ, ಭಾರತ ಸೇವಾ ದಳದ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಆರ್‌.ರವಿಕುಮಾರ್‌, ಪ್ರಾಂಶುಪಾಲ ಶ್ರೀನಿವಾಸಯ್ಯ, ಜನಪದ ಗಾಯಕ ದೊಡಮಲದೊಡ್ಡಿ ನಾರಾಯಣಸ್ವಾಮಿ, ದಲಿತ ಮುಖಂಡ ಕೂಸಂದ್ರ ರೆಡ್ಡಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ , ಹರೀಶ್‌, ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಂ.ಚಂದ್ರಶೇಖರ್‌ ಇದ್ದರು.