ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ರಾಯಲ್ಪಾಡು 1 : ಶಿಕ್ಷಣದ ವ್ಯವಸ್ಥೆಯಲ್ಲಿ ಶಿಕ್ಷಕನ ಪಾತ್ರ ಮುಖ್ಯ ಹಾಗೂ ಶ್ರೇಷ್ಠವಾದದ್ದು, ಶಿಕ್ಷಕನು ವಿದ್ಯಾರ್ಥಿಯ ಮನಸ್ಸಿನಲ್ಲಿ ಕಲಿಕೆಯ ಉತ್ಸಾಹ, ಜ್ಞಾನದ ಹಸಿವನ್ನು ಮೂಡಿಸಿ , ಸಚ್ಚಾರಿತ್ರ್ಯವಂತರಾಗಿಸಿ , ರಾಷ್ಟ್ರನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅಮೂಲ್ಯವಾದದು ಎಂದು ಪ್ರಾಂಶುಪಾಲ ವಿ.ವೆಂಕಟರಮಣ ತಿಳಿಸಿದರು.
ರಾಯಲ್ಪಾಡಿನ ಸರ್ಕಾರಿ ಪ್ರೌಡಶಾಲೆ , ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆಯ ಸರಳ ಸಮಾರಂಭದಲ್ಲಿ ಮಾತನಾಡಿದರು .
ಮುಖ್ಯ ಶಿಕ್ಷಕ ಪಿ.ಮಾರಣ್ಣ ಮಾತನಾಡಿ ಭವ್ಯ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದುದು. ಶಿಕ್ಷಕನು ಪ್ರತಿ ಮಗುವಿನಲ್ಲಿನ ಅಂದಕಾರವನ್ನು ಹೋಗಲಾಡಿಸಿ ಬೆಳಕಿನಡೆಗೆ ಕರೆದುಯ್ಯುವ ಕೆಲಸವನ್ನು ಮಾಡುತ್ತಿದ್ದು, ಇದರಿಂದಾಗಿ ಆಧುನಿಕ ಪ್ರಪಂಚಕ್ಕೆ ಶಿಕ್ಷಕರ ಕೂಡುಗೆ ಮಹತ್ವ ಪೂರ್ಣವಾಗಿದೆ .
ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಅನೇಕ ಸವಾಲುಗಳನ್ನು ಮೆಟ್ಟುನಿಂತು ನವನವೀನ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳ ಜ್ಞಾನದೀವಿಗೆ ಯಾಗುತ್ತಿರುವ ಶಿಕ್ಷಕರ ಸೇವೆ ಅವಸ್ಮರಣೀಯ ಗ್ರಾ.ಪಂ.ಮಾಜಿ ಸದಸ್ಯ ಸಿಮೆಂಟ್‍ನಾರಾಯಣಸ್ವಾಮಿ ಎಂದರು.
ಉಪನ್ಯಾಸಕರಾದ ಎ.ಎಸ್.ರಾಮಮೂರ್ತಿ, ಎಚ್.ಆಶಾ,ಎನ್.ಶಶಿಕುಮಾರ್,ಎನ್.ರಾಮಮೂರ್ತಿ,ಶಿಕ್ಷಕರಾದ ಟಿ.ಆರ್.ನಾರಾಯಣಸ್ವಾಮಿ,ಶ್ಯಾಮಲಮ್ಮ,ಎಸ್.ಎಂ.ದಿನಕರಪ್ಪ, ಅಶೋಕ್,ಜಿ.ಎಸ್.ನಾರಾಯಣಸ್ವಾಮಿ, ಶ್ರೀಶೈಲಹಲವಾರ್,ವಿರೇಶ್‍ಕೊಮ್ಮನೂರು,ಮಾರಪ್ಪ ಇದ್ದರು.