ವಿವೇಕ್ ಇನ್ಫೋಟೆಕ್‍ನಲ್ಲಿ ಯಶಸ್ವಿಯಾಗಿ ನಡೆದ ಮಾದರಿ ಪರೀಕ್ಷೆಗಳು

ವರದಿ: ಶಬ್ಬೀರ್ ಅಹ್ಮದ್

ವಿವೇಕ್ ಇನ್ಫೋಟೆಕ್‍ನಲ್ಲಿ ಯಶಸ್ವಿಯಾಗಿ ನಡೆದ ಮಾದರಿ ಪರೀಕ್ಷೆಗಳು


ಕೋಲಾರ:ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿವೇಕ್ ಇನ್ಫೋಟೆಕ್ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಸಾಕಷ್ಟು ವಿದ್ಯಾರ್ಥಿಗಳು ಮಾದರಿ ಪರೀಕ್ಷೆಯಲ್ಲಿ ಭಾಗವಹಿಸಿ ಅನುಭವ ಪಡೆದುಕೊಂಡರು. 100 ಅಂಕಗಳಿಗೆ ಸಾಮಾನ್ಯ ಜ್ಞಾನ ಪತ್ರಿಕೆ ಮತ್ತು 100 ಅಂಕದ ಸಾಮಾನ್ಯ ಕನ್ನಡ ಪರೀಕ್ಷೆಯನ್ನು ಬರೆದು ನಂತರ ಸ್ಪರ್ಧಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸ್ಪರ್ಧಾರ್ಥಿ ಅರುಣ್ ಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರತಿಯೊಬ್ಬರೂ ತರಬೇತಿ ಪಡೆದುಕೊಳ್ಳುತ್ತಾರೆ. ನನ್ನ ಅನುಭವದ ಪ್ರಕಾರ ಹೇಳುವುದಾದರೆ ತಾನು ತರಬೇತಿ ಪಡೆದ ಸಂಸ್ಥೆಗಳಲ್ಲಿ ಪರೀಕ್ಷೆಗಳನ್ನು ತೆಗೆದುಕೊಂಡರೆ ಅವರು ಯಾವ ವಿಚಾರಗಳನ್ನು ಭೋದಿಸಿರುತ್ತಾರೋ ಅವುಗಳ ಬಗ್ಗೆಯಷ್ಟೇ ಪ್ರಶ್ನೆಗಳನ್ನು ಪರೀಕ್ಷೆಗೆ ನೀಡುತ್ತಾರೆ. ಹಾಗಾಗಿ ಇಂತಹ ಪರೀಕ್ಷೆಗಳನ್ನು ಬೇರೆಬೇರೆ ಸಂಸ್ಥೆಯ ವಿದ್ಯಾರ್ಥಿಗಳು ತೆಗೆದುಕೊಳ್ಳುವುದರಿಂದ ಮುಂದಿನ ಅವರ ಭವಿಷ್ಯಕ್ಕೆ ಅನುಕೂಲವಾಗಲಿದೆ. ತಾನು ಈ ಹಿಂದೆ ಬೆಂಗಳೂರಿನಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದೆ ಆದರೆ ಇದೀಗ ಕೋಲಾರದಲ್ಲೇ ಈ ಅವಕಾಶ ಮಾಡಿಕೊಟ್ಟಿರುವುದು ತನಗೆ ಮಾತ್ರವಲ್ಲದೆ ಸಾಕಷ್ಟು ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಸ್ಪರ್ಧಾರ್ಥಿ ಜಗದೀಶ್ ಮಾತನಾಡಿ, ಪರೀಕ್ಷಾ ಪತ್ರಿಕೆಯು ಹೇಗೆ ಇರುತ್ತದೆ. ಇದಕ್ಕೆ ನಾವು ಹೇಗೆ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಲು ಈ ರೀತಿಯ ಪರೀಕ್ಷೆಗಳು ಅನುಕೂಲವಾಗಿದೆ. ಇದರಿಂದ ಉತ್ತಮ ಅಂಕಗಳನ್ನು ಗಳಿಸಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ಪರೀಕ್ಷಾ ಕೊಠಡಿಯ ಒಳಗೆ ಬ್ಯಾಗ್, ಪುಸ್ತಕಗಳು, ಮೊಬೈಲ್‍ಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಇರಲಿಲ್ಲ. ನೈಜ ಪರೀಕ್ಷೆಯು ಹೇಗೆ ನಡೆಯುತ್ತದೆಯೋ ಅದೇ ರೀತಿ ಪರೀಕ್ಷೆ ನಡೆಸಿದ್ದು ವಿಶೇಷವಾಗಿತ್ತು ಎಂದರು.
ಸ್ಪರ್ಧಾರ್ಥಿ ಸುರೇಶ್ ಮಾತನಾಡಿ, ವಿವೇಕ್ ಇನ್ಫೋಟೆಕ್ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆಯನ್ನು ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ನಡೆಸಿದ್ದು ಇದರಿಂದ ಬೇರೆ ಬೇರೆ ಕಡೆ ಹೋಗಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಕಷ್ಟ ತಪ್ಪಿದೆ. ಇದರಿಂದ ಪರೀಕ್ಷೆಯನ್ನು ಎದುರಿಸುವ ಆತ್ಮಸ್ಥೈರ್ಯ ಮೂಡುತ್ತದೆ. ಪರೀಕ್ಷೆ ಮುಗಿತ ನಂತರವೇ ಕೀ ಉತ್ತರಗಳನ್ನು ನೀಡಲಾಯಿತು. ಹಾಗಾಗಿ ಮನೆಯಲ್ಲಿ ನಾವು ಪರೀಕ್ಷೆಯಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ಆಗಿದೆ. ಇಂತಹ ಪರೀಕ್ಷೆಗಳನ್ನು ಬರೆಯಲು ಅವಕಾಶ ಮಾಡಿಕೊಟ್ಟ ವಿವೇಕ್ ಸಂಸ್ಥೆಯ ಧನ್ಯವಾದಗಳನ್ನು ತಿಳಿಸಿದರು.
ಈ ಪರೀಕ್ಷೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎ. ಪ್ರಮೋದ್ ಕುಮಾರ್, ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಿ.ಜಿ.ಮುರಳಿ, ಸಂಪನ್ಮೂಲ ವ್ಯಕ್ತಿಗಳಾದ ಎನ್.ಯು.ಸುಜಯ್, ಕೆ.ಎಸ್.ಭಾನುಪ್ರಕಾಶ್, ಎನ್.ಕೆ. ನಾಗೇಶ್ ಹಾಗೂ ಆರ್.ಶಶಿಕುಮಾರ್ ಅವರು ವ್ಯವಸ್ಥೆಗೊಳಿಸಿದ್ದರು.
———-
ಕೋಲಾರ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸ್ಪರ್ಧಾರ್ಥಿಗಳಿಗೆ ಮಾದರಿ ಪರೀಕ್ಷೆಗಳನ್ನು ವಿವೇಕ್ ಇನ್ಫೋಟೆಕ್ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಲ್ಲಿ ಪ್ರತಿ ಭಾನುವಾರ ನಡೆಸಲಾಗುವುದು. ಈ ಪರೀಕ್ಷೆಗಳನ್ನು ಬೇರೆ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವವರು ಹಾಗೂ ಮನೆಯಲ್ಲಿಯೇ ಪರೀಕ್ಷಾ ಸಿದ್ದತೆ ನಡೆಸುತ್ತಿರುವ ವಿದ್ಯಾರ್ಥಿಗಳೂ ಸಹ ತೆಗೆದುಕೊಳ್ಳಬಹುದು. ಈ ಸದಾವಕಾಶವನ್ನು ಎಲ್ಲಾ ಸ್ಪರ್ಧಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬಹುದು.
ಎಸ್.ಆರ್.ರಾಖೇಶ್, ಉಪನ್ಯಾಸಕರು, ವಿವೇಕ್ ಇನ್ಫೋಟೆಕ್