ವಿದ್ಯಾರ್ಥಿ ದೆಸೆಯ ಪ್ರತಿ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳಿ – ಡಾ. ಎಸ್.ಎನ್.ವಿಜಯ್ ಕುಮಾರ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ವಿದ್ಯಾರ್ಥಿ ದೆಸೆಯ ಪ್ರತಿ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳಿ – ಡಾ. ಎಸ್.ಎನ್.ವಿಜಯ್ ಕುಮಾರ್

ಕೋಲಾರ: ವಿದ್ಯಾರ್ಥಿದೆಸೆಯ ಪ್ರತಿ ಕ್ಷಣವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಎಸ್.ಎನ್.ವಿಜಯ್‍ಕುಮಾರ್ ಅವರು ತಿಳಿಸಿದರು.

 ಎಸ್.ಎನ್.ಆರ್ ಇನ್ಸಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸೆಸ್, ಕೋಲಾರ ಇವರ ವತಿಯಿಂದ ಹಮ್ಮಿಕೊಂಡಿದ್ದ “ರಕ್ತದಾನದ ಮಹತ್ವದ ಬಗ್ಗೆ” ಕುರಿತು ಕಾರ್ಯಗಾರ ಹಾಗೂ ನಾಲ್ಕನೇ ತಂಡದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಜಿಲ್ಲಾ ಆಸ್ಪತ್ರೆಯು ದೇವಾಲಯವಿದ್ದಂತೆ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವೆಲ್ಲಾ ದೇವಾಲಯವೆಂದು ಭಾವಿಸಿ ಕಾರ್ಯನಿರ್ವಹಿಸುತ್ತಿದ್ದೇವೆ. ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ನಿಮ್ಮ 2 ವರ್ಷದ ವಿಧ್ಯಾಭ್ಯಾಸದ ಅವಧಿಯನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿ, ರೋಗಿಗಳೊಂದಿಗೆ ನಿಮ್ಮ ಸಮಯವನ್ನು ಕಳೆಯಬೇಕು ಕಾರಣ ಅವರೇ ನಿಮಗೆಲ್ಲಾ ಪುಸ್ತಕಗಳಿದ್ದಂತೆ ಎಂದು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ತಿಳಿಸಿದರು.

 ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ. ರಕ್ತದಾನ ಮಾಡುವುದು ನಿಮ್ಮ ಆರೋಗ್ಯಕ್ಕೊ ಒಳ್ಳೆಯದು ಎಂದ ಅವರು ಪ್ರತಿಯೊಬ್ಬರು ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣರಾಗಿ ಎಂದು ಶುಭ ಹಾರೈಸಿದರು.

 ಜಿಲ್ಲಾಶಸ್ತ್ರ ಚಿಕಿತ್ಸಕರು ಹಾಗೂ ಎಸ್.ಎನ್.ಆರ್ ಇನ್ಸಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸೆಸ್, ಕೋಲಾರದ ಪ್ರಾಂಶುಪಾಲರಾದ ಎಸ್.ಜಿ.ನಾರಾಯಣಸ್ವಾಮಿ ಅವರು ಮಾತನಾಡಿ ನಾವು ಎಷ್ಟೇ ಮುಂದುವರೆದರೂ ಸಹ ಮಾನವೀಯತೆಯಿಂದ ಬಾಳಬೇಕು. ಜನರ ಮನಸ್ಸನ್ನು ಗೆದ್ದವನು ಮಾತ್ರ ಬಾಳಲು ಸಾಧ್ಯ ಎಂದ ಅವರು ಮೂರ್ತಿ ಪೂಜೆಯನ್ನು ಮಾಡುವ ಬದಲು ವ್ಯಕ್ತಿ ಪೂಜೆಯನ್ನು ಮಾಡಿ ಹೃದಯ ಶ್ರೀಮಂತರಾಗಿ ಎಂದು ತಿಳಿಸಿದರು.

 ವಿದ್ಯಾರ್ಥಿಗಳು ಪರೀಕ್ಷೆಯನ್ನು ಸ್ಫರ್ಧಾತ್ಮಕವಾಗಿ ತೆಗೆದುಕೊಳ್ಳಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ ಎಂದು ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಡಿ ಎಂದ ಅವರು ಯಾವುದೇ ಕಾರಣಕ್ಕೂ ದುಷ್ಚಟಗಳಿಗೆ ಬಲಿಯಾಗಬೇಡಿ. ಹೆಚ್ಚು ಹೆಚ್ಚು ಪುಸ್ತಕಗಳನ್ನು  ಓದಿದಾಗ ಮಾತ್ರ ಜ್ಞಾನಿಗಳಾಗಲು ಸಾಧ್ಯ ಎಂದ ಅವರು ಮೊಬೈಲ್‍ನೊಂದಿಗೆ ಹೆಚ್ಚಿನ ಸಮಯವನ್ನು ವ್ಯಯಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

 ಎಸ್.ಎನ್.ಆರ್ ಇನ್ಸಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸೆಸ್, ಉಪಪ್ರಾಂಶುಪಾಲರಾದ ಡಾ.ವಿ.ಸುಧಾಮಣಿ ಅವರು ಮಾತನಾಡಿ ರೋಗಿಗಳಿಗೆ ಆರೋಗ್ಯವನ್ನು ನೀಡಲು ಆಸ್ಪತ್ರೆಯಲ್ಲಿ ವೈದ್ಯರೊಂದಿಗೆ ಸಹಾಯಹಸ್ತಕರು ಅವಶ್ಯಕ ಎಂದ ಅವರು ವೈದ್ಯರಿಗೆ ನೆರವಾಗಲು ಆರೋಗ್ಯ ಇಲಾಖೆಯಲ್ಲಿ ವಿವಿಧ ಕೋರ್ಸಗಳನ್ನು ಪ್ರಾರಂಭಿಸಿದೆ. ಈ ಕೋರ್ಸಗಳಲ್ಲಿ ವಿದ್ಯಾಭ್ಯಾಸ ಪಡೆದು ಉದ್ಯೋಗಸ್ಥರಾಗಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ನಾವು ಕಲಿಯುವಂತಹ ವಿದ್ಯೆ ಅತ್ಯಂತ ಮಹತ್ವವಾದದ್ದು ಎಂದ ಅವರು ವಿದ್ಯಾರ್ಥಿಗಳು ಶಿಸ್ತುನ್ನು ರೂಢಿಸಿಕೊಳ್ಳಿ ಎಂದು ತಿಳಿಸಿದರು.

 ಪ್ರಾಂಶುಪಾಲರು, ಕಿ.ಮ.ಅ.ಸ ತರಬೇತಿ ಕೇಂದ್ರ ಹಾಗೂ ಎಸ್.ಎನ್.ಆರ್ ಇನ್ಸಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸೆಸ್ ಸಂಯೋಜಕರಾದ ಡಾ.ಎಸ್ ವಿಜಯಮ್ಮ ಅವರು ಮಾತನಾಡಿ 2016-17ನೇ ಸಾಲಿನಲ್ಲಿ ಮೊದಲ ಬಾರಿಗೆ ಕೋಲಾರ ಜಿಲ್ಲೆಯ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಹಾಗೂ ಕೋಲಾರದಂತಹ ಬರಪೀಡಿತ ಜಿಲ್ಲೆಯಲ್ಲಿ ಉದ್ಯೋಗದ ಕೊರತೆಯನ್ನು ನೀಗಿಸಲು ಕೌಶಲ್ಯ ಭಾರತ, ಅಯ್ಯುಷ್‍ಮಾನ್ ಭಾರತ ಯೋಜನೆಯಡಿಯಲ್ಲಿ ಪ್ಯಾರಾಮೆಡಿಕಲ್ ಕೋರ್ಸ್‍ಗಳನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳನ್ನು ತಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆಯಲು ಸೇರಿಸಿದಂತಹ ಪೋಷಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

 ಪ್ರತಿಯೊಬ್ಬರಿಗೂ ಆರೋಗ್ಯವನ್ನು ನೀಡುವುದು ಸರ್ಕಾರದ ಉದ್ದೇಶ ಆದ್ದರಿಂದ ಜನಸಂಖ್ಯೆ ಬೆಳೆದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಯ ಅಗತ್ಯತೆಯೂ ಹೆಚ್ಚಾಗಿರುತ್ತದೆ ಆದ್ದರಿಂದ ಸರ್ಕಾರವು ವಿದ್ಯಾರ್ಥಿಗÀಳನ್ನು ವೈಜಾÐನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಸಿದ್ದಗೊಳಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ. ಜಿಲ್ಲಾ ಆಸ್ಪತ್ರೆಯು ಅನೇಕ ಮಹಾನ್ ವ್ಯಕ್ತಿಗಳ ಶ್ರಮದ ಫಲ ಆದ್ದರಿಂದ ಅದರ ಗೌರವನ್ನು ಉಳಿಸುವ ಜವಾಬ್ದಾರಿ ವಿದ್ಯಾರ್ಥಿಗಳಾದ ನಮ್ಮ ನಿಮ್ಮೆಲ್ಲರ ಮೇಲೆದೆ ಅದಕ್ಕೆ ಬದ್ದರಾಗಿರೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯ್ನು ಜಿಲ್ಲಾ ಆಸ್ಪತ್ರೆಯ  ಶುಶ್ರೂಷಕ ಅಧೀಕ್ಷಕರಾದ ಎಂ.ಎಸ್ ಜಯಂತಿ ಅವರು ಬೋಧಿಸಿದರು ಹಾಗೂ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಳಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಎನ್.ಆರ್ ಆಸ್ಪತ್ರೆಯ ನಿವಾಸಿ ವೈಧ್ಯಾಧಿಕಾರಿಗಳಾದ ಎಸ್.ವಿ ನಾರಾಯಣಸ್ವಾಮಿ, ಜಿಲ್ಲಾ ಆಸ್ಪತ್ರೆಯ ರಕ್ತನಿಧಿಯ ವೈಧ್ಯಾಧಿಕಾರಿಗಳಾದ ಡಾ.ರೇವತಿ, ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.