ವಾಸವಿ ಕ್ಲಬ್ ವತಿಯಿಂದ ಹಿರಿಯ ನಾಗರೀಕರ ಹಬ್ಬ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ವಾಸವಿ ಕ್ಲಬ್ ವತಿಯಿಂದ ಹಿರಿಯ ನಾಗರೀಕರ ಹಬ್ಬ

ಕೋಲಾರ : ಭಾರತದಲ್ಲಿ 2496 ವಾಸವಿಯನ್ ಸಂಸ್ಥೆಗಳಿದ್ದು, ಅದರ ಮೂಲಕ ಸಮಾಜ ಸೇವಾ ಕಾರ್ಯದರ್ಶಿ ಕಾರ್ಯ ನಿರ್ವಹಿಸುತ್ತಿದ್ದು ಹಾಗೂ ಅಮೇರಿಕಾ, ಸಿಂಗಪೂರ್, ಸೌದಿ ಅರೇಬಿಯಾ, ಇಂಗ್ಲೇಡ್ ಇವೇ ಮೊದಲಾದ 16 ಕ್ಲಬ್‍ಗಳು ಹೊರ ದೇಶಗಳಲ್ಲಿ ತನ್ನ ಸಮಾಜ ಸೇವೆಯನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಹಾಗೂ 2014ರಲ್ಲಿ ರಾಷ್ಟ್ರಾಧ್ಯಕ್ಷರು ಇವರ ಸೇವೆಯನ್ನು ಗುರ್ತಿಸಿ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಜಿಲ್ಲಾ ರಾಜ್ಯಪಾಲರಾದ ವಾಸವಿಯನ್ ಪಾರ್ವತಿ ಸತೀಶ್ ತಿಳಿಸಿದರು.
ಕೋಲಾರ ನಗರದ ವಾಸವಿ ಕ್ಲಬ್‍ವತಿಯಿಂದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಿರಿಯ ನಾಗರೀಕರ ಹಬ್ಬ ಎಂಬ ಕಾರ್ಯಕ್ರಮದಲ್ಲಿ ವಾಸವಿಯನ್ ಕ್ರೌನ್‍ಸ್ಟಾರ್ ಡಾ.ಎ.ಎಸ್.ರಾಮಲಿಂಗಗುಪ್ತರವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆಯು ಆಸ್ತಿ, ಹಣದ ವ್ಯಾಮೋಹಕ್ಕೆ ಒಳಗಾಗಿ ತಂದೆ-ತಾಯಿರನ್ನು ವೃದ್ಧಾಶ್ರಮ, ಶರಣಾಲಯಗಳಿಗೆ ಕಠೋರ ಮನಸ್ಥಿತಿಗೆ ಒಳಪಟ್ಟು ಕಳುಹಿಸಿಕೊಡುತ್ತಿರುವುದು ಸಾಮಾನ್ಯವಾಗಿದೆ. ವಾಸವಿ ಕಲ್ಬ್ ಇಂಟರ್ ನ್ಯಾಷನಲ್ ರವರು ವೃದ್ಧರ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಈ ಒಂದು ಅಪಾಯಕಾರಿ ಬೆಳವಣಿಗೆಯನ್ನು ಖಂಡಿಸುತ್ತಾ ಆಘಾತಕಾರಿ ಬೆಳವಣಿಗೆಗೆ ಬ್ರೇಕ್ ಹಾಕಲು ಹಾಗೂ ಪರಿಸ್ಥಿತಿಯನ್ನು ಅತೋಟಿಗೆ ತರಲು ಹಿರಿಯ ನಾಗರೀಕರ ಹಬ್ಬ ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
ಸುಮಾರು ಹಿರಿಯ ನಾಗರೀಕರಿಗೆ ಪಾದಪೂಜೆಯನ್ನು ಅವರ ಮಕ್ಕಳು ಹಾಗೂ ಸಂಬಂಧಿಕರ ಮೂಲಕ ಮಂತ್ರ ಘೋಷಣೆಗಳೊಂದಿಗೆ ನೆರವೇರಿಸಿತು.ಹಿರಿಯ ನಾಗರೀಕರಿಗೆ ನೆನಪಿನ ಕಾಣಿಕೆಯಾಗಿ ಹಾರ, ತುರಾಯಿ, ಶಾಲೂ ಹೊದಿಸಿ, ಹಣ್ಣು ಹಂಪಲ ಸಿಹಿ ಪಾಕೇಟ್, ದೇವರ ಭಕ್ತಿಗೀತೆಗಳ ಪುಸ್ತಕಗಳು ಹಾಗೂ ಜಪಮಾಲೆಯನ್ನು ನೀಡುತ್ತಾ ಗೌರವವಾಗಿ ಸತ್ಕರಿಸಲಾಯಿತು. ಅವರಿಂದ ಆರ್ಶೀವಾದವನ್ನು ಪಡೆಯಲಾಯಿತು.
ಮಾಜಿ ರಾಜ್ಯಪಾಲರು ಹಾಗೂ ಉಪಾಧ್ಯಕ್ಷರು ಆಗಿದ್ದ ಡಿ.ಎಸ್.ಗೋವಿಂದರಾಜು ಮಾತನಾಡಿ ವಾಸವಿ ಕ್ಲಬ್ ಮಾಡುತ್ತಿರುವ ವಿವಿಧ ಸಮಾಜೀಕ ಕಾರ್ಯಕ್ರಮಗಳನ್ನು ವಿವರಿಸಿದರು.
ನಗರಸಭೆಯ ಮಾಜಿ ಸದಸ್ಯರಾದ ಮಂಜುನಾಥ್ ಮಾತನಾಡಿ ವಾಸವಿಕ್ಲಬ್‍ರವರು ಆರ್ಯವೈಶ್ಯ ಸಮಾಜಕ್ಕಿಂತ ಇತರೆ ಸಮಾಜದ ಜಾತಿವರ್ಗಗಳನ್ನು ಲೆಕ್ಕಿಸದೆ ದೀನ ದಲಿತರಿಗೆ ಸಹಾಯ ಹಸ್ತವನ್ನು ನೀಡುತ್ತಾ ಬಂದಿದ್ದಾರೆ ಶಾಲೆ, ವೃದ್ಧಾಶ್ರಮ, ಅಂಗವಿಕಲರಿಗೆ ಅನೇಕ ರೀತಿಯಲ್ಲಿ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.
ಜೋನ್ ಛೇರ್ಮನ್‍ರಾಗಿರುವ ವಾ. ಬಿ.ಪಿ.ಓಂ ಪ್ರಕಾಶ್ ಮಾತನಾಡಿ ವಾಸವಿ ಕ್ಲಬ್ 1961ರಿಂದ 2019ರವರೆಗೂ ತನ್ನ ಸಾಮಾಜಿಕ ಸೇವೆ, ಆರ್ಥಿಕ ಹಾಗೂ ಮಾನಸಿಕವಾಗಿ ಮಾಡುತ್ತಿದ್ದು, ಸಮಾಜದ ಮನ್ನಣೆಯನ್ನು ಪಡೆದಿದೆ. ಹಾಗೂ ವಾಸವಿ ಕ್ಲಬ್ 1960ರಿಂದ ಇಂದಿನವರೆಗೂ ಬೆಳೆದ ಬಂದ ರೀತಿಯ ಬಗ್ಗೆ ಸೂಸೂತ್ರವಾಗಿ ವಿವರಣೆಯನ್ನು ನೀಡಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವಾಸವಿ ಕ್ಲಬ್ ಅಧ್ಯಕ್ಷರಾದ ಬಿ.ಆರ್. ಅಮರ್‍ನಾಥ್, ಮಂಜುಳ, ಮುನಿರಾಜು. ಲಕ್ಷ್ಮಿನಾರಾಯಣ ಇನ್ನೂ ಅನೇಕ ಗಣ್ಯರು ಹಿರಿಯ ನಾಗರೀಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಕ್ಲಬ್‍ನ ಅಚ್ಚುಮೆಚ್ಚಿನ ವಾಸವಿ ಕುಟುಂಬ ಸುರಕ್ಷಾ ಪದಕಂ ಅಡಿಯಲ್ಲಿ ದಿವಂಗತ ಕೃಷ್ಣಯ್ಯಶೆಟ್ಟಿ ರವರ ಕುಟುಂಬಕ್ಕೆ 5,17,000/- ರೂಗಳ ಚೆಕ್ ನೀಡಿ ಮೃತ್ಯು ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಿರುತ್ತಾರೆ.