ರೋಟರಿ ಕ್ಲಬ್ ಬೆಳ್ಮಣ್ : 111 ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿದ ಸೂಡ ನಿವಾಸಿ ನರ್ಸಿ ಮೂಲ್ಯ ಇವರಿಗೆ ಸಮ್ಮಾನ ಗೌರವ

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ರೋಟರಿ ಕ್ಲಬ್ ಬೆಳ್ಮಣ್ ಇಂದು ಹಿರಿಯ ನಾಗರಿಕರಿಗೆ ಗೌರವ ಸಲ್ಲಿಸುವ ಸಲುವಾಗಿ 111ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿ ಇಂದಿಗೂ ತಮ್ಮ ದೈನಂದಿನ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಸೂಡ ನಿವಾಸಿ ನರ್ಸಿ ಮೂಲ್ಯ ಇವರಿಗೆ ಸಮ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ರೋ| ಶುಭಾಷ್ ಕುಮಾರ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ವಲಯ ೫ರ ಮಾಜಿ ಸಾಹಯಕ ಗವರ್ನರ್ ರೋ| ಪಿ ಎಚ್ ಎಫ್ ಸೂರ್ಯಕಾಂತ ಶೆಟ್ಟಿ ಗೌರವಾರ್ಪಣೆ ಕಾಯಕವನ್ನು ನಡೆಸಿಕೊಟ್ಟರು. ಅತಿಥಿಗಳಾಗಿ ವಲಯ ೫ರ ವಲಯ ಸೇನಾನಿ ರೋ| ಸುರೇಶ್ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪೂರ್ವಾಧ್ಯಕ್ಷ ರೋ| ಪಿ ಎಚ್ ಎಫ್ ರನೀಶ್ ಆರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು. ರೋಟರಿ ಸಂಸ್ಥೆಯ ಸದಸ್ಯ ರಾಜೇಶ್ ಸಾಲ್ಯಾನ್ ಹಾಗೂ ನರ್ಸಿ ಮೂಲ್ಯ ಇವರ ಕುಟುಂಬ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.