ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ:- ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು. ಇದರ ಘನತೆ ಗೌರವವನ್ನು ಉಳಿಸಿಕೊಂಡು ಹೋದವರು ಸಮಾಜದಲ್ಲಿ ಪೂಜ್ಯನೀಯ ವ್ಯಕ್ತಿಗಳಾಗುತ್ತಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದರು.
ರೋಟರಿ ಕೋಲಾರ ಹಾಗೂ ರೋಟರಿ ಕೋಲಾರ ಟ್ರಸ್ಟ್ ವತಿಯಿಂದ ನಗರದ ರೋಟರಿ ಭವನದಲ್ಲಿ ಆಯೋಜಿಸಿದ್ದ ಗುರುವಂದನೆ ಹಾಗೂ ಹಿರಿಯ ರೋಟೋರಿಯನ್‍ಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುರಾಣ ಪುಣ್ಯ ಕಾಲದಿಂದಲೂ ಗುರುವಿಗೆ ಶ್ರೇಷ್ಠ ಸ್ಥಾನ ಉಳಿಸಿಕೊಂಡು ಬರಲಾಗುತ್ತಿದೆ. ಹಾಗೆಯೇ ಭಾರತದ ಮೊದಲ ಶಿಕ್ಷಕಿಯಾದ ಸಾವಿತ್ರಿಬಾಪುಲೆ ಅವರ ಮೊದಲ ಶಿಕ್ಷಣದ ಪಂಕ್ತಿ ಎಂದು ದೇಶದೆಲ್ಲೆಡೆ ನಂದಾದೀಪವಾಗಿ ಬೆಳಗುವಂತಾಗಿದೆ ಎಂದು ಶ್ಲಾಘಿಸಿದರು.
ಸಮಾಜವನ್ನು ಶಿಕ್ಷಣದ ಮೂಲಕ ತಿದ್ದುವ ಶಕ್ತಿ ಇರುವುದು ಕೇವಲ ಶಿಕ್ಷಕರಿಗೆ ಮಾತ್ರ. ಯಾರು ಕಾಯಾವಾಚಮನಸ್ಸಾ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಾರೋ ಅವರಿಗೆ ಗೌರವಾಧರಗಳು ಹುಡುಕಿಕೊಂಡು ಬರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜನಾಭಿಪ್ರಾಯದಂತೆ ಆಯ್ಕೆ ಮಾಡಲಾದ ಸರ್ಕಾರಿ ಶಾಲಾಕಾಲೇಜುಗಳ ಶಿಕ್ಷಕ-ಶಿಕ್ಷಕಿಯರು ಮತ್ತು ರೋಟರಿ ಸಂಸ್ಥೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ರೋಟೇರಿಯನ್‍ರವರನ್ನು ಸ್ಮರಣಿಕೆ ನೀಡಿ ಗೌರವಾಧರಗಳೊಂದಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್, ರೋಟರಿ ಅಧ್ಯಕ್ಷ ಕೆ.ಆರ್.ಸೋಮಶೇಖರ್, ಕಾರ್ಯದರ್ಶಿ ಎಂ.ಎಸ್.ರವಿ, ಕೋಲಾರ ರೋಟರಿ ಟ್ರಸ್ಟ್‍ನ ಅಧ್ಯಕ್ಷ ಎಸ್.ವಿ.ಸುಧಾಕರ್, ಕಾರ್ಯದರ್ಶಿ ಟಿ.ಎಸ್.ರಾಮಚಂದ್ರೇಗೌಡ, ರೋಟೋರಿಯನ್‍ಗಳಾದ ಶಂಕರ್ ಪ್ರಸಾದ್, ನಾಗೇಂದ್ರ ಪ್ರಸಾದ್, ಜಿ.ಆರ್.ಶಂಕರೇಗೌಡ, ರಾಘವೇಂದ್ರ ಬಾಲಾಜಿ, ಹೆಚ್.ರಾಮಚಂದ್ರಪ್ಪ, ಶಿವಕುಮಾರ್, ಬಿ.ಎಸ್. ಗೋವಿಂದರಾಜು, ಮಲ್ಲಿಕಾರ್ಜುನ, ಚಂದ್ರಪ್ಪ, ಸಿ.ಆರ್.ಅಶೋಕ್, ಎನ್.ನಾಗರಾಜ್, ಕೆ.ಎನ್.ರಮೇಶ್, ಚಂದ್ರಶೇಖರ್, ವಿ.ಪಿ.ಸೋಮಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
