ರೋಜರಿ ಕ್ರೆಡೀಟ್ ಕೋ.ಒ. ಸೊಸೈಟಿ ಲಿ. ನ ಮಾಜಿ ಅಧ್ಯಕ್ಷ ಮಾರ್ಟಿನ್ ಡಾಯಸ್ ನಿಧನಕ್ಕೆ ಸೊಸೈಟಿಯಿಂದ ಶ್ರದ್ದಾಂಜಲಿ

JANANUDI.COM NETWORK

 

 

ರೋಜರಿ ಕ್ರೆಡೀಟ್ ಕೋ.ಒ. ಸೊಸೈಟಿ ಲಿ. ನ ಮಾಜಿ ಅಧ್ಯಕ್ಷ ಮಾರ್ಟಿನ್ ಡಾಯಸ್ ನಿಧನಕ್ಕೆ ಸೊಸೈಟಿಯಿಂದ ಶ್ರದ್ದಾಂಜಲಿ 

 

 

 

ಕುಂದಾಪುರ, ಡಿ.4: ಪ್ರಸಿದ್ದ ರೋಜರಿ ಕ್ರೆಡೀಟ್ ಕೋ-ಆಫ್ ಸೊಸೈಟಿಯ ಮಾಜಿ ಅಧ್ಯಕ್ಷ, ಪ್ರಸ್ತುತ ಸಾಲಿನ ನಿರ್ದೇಶಕ, ಮಾಜಿ ಬೈಂದೂರು ಇಗರ್ಜಿಯ ಪಾಲನ ಮಂಡಳಿ ಉಪಾಧ್ಯಕ್ಷ, ಖ್ಯಾತ ಎಲ್.ಐ.ಸಿ. ಎಜೆಂಟ್ ಆಗಿದ್ದ ಬೈಂದೂರಿನ ಮಾರ್ಟಿನ್ ಡಯಾಸ್ ಅಲ್ಪಕಾಲಿಕ ಅನಾರೋಗ್ಯದಿಂದ ತಮ್ಮ 59 ಪ್ರಾಯದಲ್ಲಿ ಇಹಲೋಕ ತ್ಯಜಿಸಿದ ಪ್ರಯುಕ್ತ ರೋಜರಿ ಸೊಸೈಟಿ ಆಡಳಿತ ಮಂಡಳಿ ಮತ್ತು ಸಿಬಂದಿ ವರ್ಗ ತಮ್ಮ ಸೊಸೈಟಿಯಲ್ಲಿ ಶ್ರದ್ದಾಂಜಲಿಯನ್ನು ಅರ್ಪಿಸಿದರು.
ರೋಜರಿ ಕ್ರೆಡೀಟ್ ಕೋ-ಆಫ್ ಸೊಸೈಟಿಯ ಪ್ರಸ್ತುತ ಸಾಲಿನ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ‘ರೋಜರಿ ಸೊಸೈಟಿನ ಏಳಿಗೆಗಾಗಿ ಅವರು ಬಹಳಷ್ಟು ಶ್ರಮಿಸಿದ್ದರು,ನಾವು ಒರ್ವ ಮುಂದಾಳುವನ್ನು ಕಳೆದುಕೊಂಡಿದ್ದೆವೆ’ ಎಂದು ಶಾಂತಿ ಕೋರಿದರು. ಪ್ರಸ್ತುತ ಸಾಲಿನ ನಿರ್ದೇಶಕರಾದ ಜೇಕಬ್ ಡಿಸೋಜಾ ‘ಮಾರ್ಟಿನ್ ಒರ್ವ ಒಳ್ಳೆಯ ಸಂಘಟಿಕ ಚತುರರಾಗಿದ್ದರು, ರೋಜರಿ ಸೊಸೈಟಿಯ ಪ್ರಗತಿಗಾಗಿ ತುಂಬ ಸೇವೆ ನೀಡಿದ್ದಾರೆ. ಅವರೊಬ್ಬ ನೇರ ನುಡಿಯ ನಾಯಕರಾಗಿದ್ದರು’ ಎಂದು ಅವರಿಗೆ ನುಡಿ ನಮನಗಳನ್ನು ಸಲ್ಲಿಸಿದರು. ಸಭೆಯಲ್ಲಿ ನಿರ್ದೇಶಕರಾದ ಸ್ಟ್ಯಾನಿ ಡಿಸೋಜಾ, ಜೆರಾಲ್ಡ್ ಕ್ರಾಸ್ತಾ, ಶಾಂತಿ ಕರ್ವಾಲ್ಲೊ, ಡಯನಾ ಡಿಆಲ್ಮೇಡಾ, ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ಪಾಸ್ಕಲ್ ಡಿಸೋಜಾ, ಕುಂದಾಪುರ ಶಾಖೆಯ ಕಾರ್ಯ ನಿರ್ವಹಣ ಅಧಿಕಾರಿ ಮೇಬಲ್ ಪುಟಾರ್ಡೊ ಮತ್ತು ಸಿಬಂದಿ ವರ್ಗದವರು ಉಪಸ್ಥಿತರಿದ್ದರು