ರೋಜರಿ ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿ ಲಿ. ಕುಂದಾಪುರ. 28ನೇ ವಾರ್ಷಿಕ ಸಾಮಾನ್ಯ ಸಭೆ – ಸ್ಥಿರ ಮತ್ತು ಉತ್ತಮ ಪ್ರಗತಿಯತ್ತ ಶೇ. 17.50 ಡಿವಿಡೆಂಡ್ ಘೋಷಣೆ

JANANUDI.COM NETWORK 

ರೋಜರಿ ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿ ಲಿ. ಕುಂದಾಪುರ. 28ನೇ ವಾರ್ಷಿಕ ಸಾಮಾನ್ಯ ಸಭೆ – ಸ್ಥಿರ ಮತ್ತು ಉತ್ತಮ ಪ್ರಗತಿಯತ್ತ ಶೇ. 17.50 ಡಿವಿಡೆಂಡ್ ಘೋಷಣೆ


ಕುಂದಾಪುರ, ಸೆ. 22 : ಭಾನುವಾರದಂದು ಕುಂದಾಪುರದ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಪ್ರತಿಷ್ಟಿತ ರೋಜರಿ ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿ ಲಿ. ಕುಂದಾಪುರ ಇದರ 28 ನೇ ವಾರ್ಷಿಕ ಸಾಮಾನ್ಯಸಭೆ ನಡೆಯಿತು. ‘ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸಂಘವು ಕಳೆದ ಹಣಕಾಸು ವರ್ಷದಲ್ಲಿ ಪ್ರಮುಖ ಕ್ಷೇತ್ರಗಳಲ್ಲಿ ಸ್ಥಿರ ಮತ್ತು ಉತ್ತಮ ಪ್ರಗತಿಯನ್ನು ಹೊಂದಿ ಸೊಸೈಟಿಯು ಕಳೆದ ಸಾಲಿನಲ್ಲಿ 346 ಕೋಟಿ ರೂಪಾಯಿ ವ್ಯವಹಾರ ಮಾಡಿ ಹೊಸ ಮೈಲಿಗಲ್ಲನ್ನು ದಾಟಿದೆ. 72.29 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ ರೂ. 1,14,90,815-12 ನಿವ್ವಳ ಲಾಭ ಪಡೆದಿದೆ’ ಎಂದು ವಾರ್ಷಿಕ ಸಭೆಯಲ್ಲಿ ಸೊಸೈಟಿಯ ಅಧ್ಯಕ್ಷ ಜೋನ್ಸನ್ ಡಿ ಆಲ್ಮೇಡಾ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು ‘ಸೊಸೈಟಿಯನ್ನು ಇನ್ನು ಬಹಳಷ್ಟು ಎತ್ತರಕ್ಕೆ ಬೆಳೆಸುವ ಇರಾದೆ ಮತ್ತು ಸಂಕಲ್ಪ ನಮ್ಮದಾಗಿದೆ, ಸಂಸ್ಥೆ ಈಗಾಗಲೇ ಕುಂದಾಪುರ ತಾಲೂಕು ಗಡಿಯನ್ನು ದಾಟಿ ಉಡುಪಿ ಜಿಲ್ಲೆಗೆ ನಮ್ಮ ಶಾಖೆಗಳನ್ನು ವಿಸ್ತರಿಸಿ ಅಲ್ಲಿ ನಮ್ಮ ಸೊಸೈಟಿಯು ದೊಡ್ಡ ಮೊತ್ತದ ಠೇವಣಿಯನ್ನು ಸಂಗ್ರಹಿಸಿದೆ, ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯಾದಾದ್ಯಂತ ಶಾಖೆಯನ್ನು ತೆರೆಯುವ ಕನಸು ಈ ಆಡಳಿತ ಮಂಡಳಿ ಕಂಡಿದೆ ಎಂದು ಅವರು ಹೇಳುತ್ತಾ ಸದಸ್ಯರಿಗೆ ಶೇ. 17.50 ಡಿವಿಡೆಂಂಡ್ ಘೋಷಣೆ ಮಾಡಿದರು.
ಸಂಘದ ಸಲಹೆಗಾರ ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಸ್ಟ್ಯಾನಿ ತಾವ್ರೊ ‘ಸಂಸ್ಥೆಗಳಲ್ಲಿ ಜನರಿಗೆ ವಿಶ್ವಾಸ ಇರಬೇಕು, ಸಂಸ್ಥೆಗೆ ಜನರಲ್ಲಿ ವಿಶ್ವಾಸ ಇರಬೇಕು ಹಾಗಿದ್ದಲ್ಲಿ ವ್ಯವಹಾರ ಉತ್ತಮವಾಗಿ ನಡೆಯುತ್ತದೆ, ಸಂಸ್ಥೆಯಲ್ಲಿ ಚುನಾಯಿತರಾದವರು ಜವಾಬ್ದಾರಿಯಿಂದ ಉತ್ತಮವಾಗಿ ಆಡಳಿತ ನಡೆಸಬೇಕು, ಇಲ್ಲಿನ ಹಿರಿಯರು ದೂರದ್ರಷ್ಟಿ ಇಟ್ಟುಕೊಂಡು ಈ ಸಂಸ್ಥೆಯನ್ನು ಹುಟ್ಟುಹಾಕಿದ್ದರು, ಬ್ಯಾಂಕುಗಳು ಎಷ್ಟ್ಟೇ ಇದ್ದರೂ ಸಹಕಾರಿ ಸಂಘಗಳಿಂದ ಜನರಿಗೆ ಉಪಯೋಗವಿದೆ, ಸಂಸ್ಥೆಯು ರೋಜರಿ ಮಾತೆಯ ಆಶಿರ್ವಾದದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ’ ಎಂದು ಅವರು ಆಶಿರ್ವಚನ ಮಾಡಿದರು.
ಬಸ್ರೂರು ಶಾಖಾ ಸಭಾಪತಿ ಫಿಲಿಪ್ ಡಿ’ ಕೋಸ್ತ ಸ್ವಾಗತಿಸಿದರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾ ವರದಿಯನ್ನು ವಾಚಿಸಿದರು. ವ್ಯವÀಸ್ಥಾಪಕಿ ಮೇಬಲ್ ಡಿ ಆಲ್ಮೇಡಾ, ಉಪಾಧ್ಯಕ್ಷರಾದ ಜೋನ್ ಮಿನೇಜಸ್, ನಿರ್ದೇಶಕಿ ಡಾಯಾನಾ ಡಿ ಆಲ್ಮೇಡಾ ಸಂಘದ ಲೆಕ್ಕ ಪತ್ರಗಳನ್ನು ಹಾಗೂ ಲಾಭಾಂಶ ವಿಂಗಡನೆಯನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ದೊರೆತ ಗೌರವಕ್ಕೆ ಸನ್ಮಾನಿಸಲಾಯಿತು. ಕೆಲವು ಸದಸ್ಯರು ತಮ್ಮ ಸಲಹೆಗಳನ್ನು ಮುಂದಿಟ್ಟರು. ಪಡುಕೋಣೆ ಶಾಖಾ ಸಭಾಪತಿ ಕಿರಣ್ ಲೋಬೋ, ಪಿಯುಸ್ ನಗರÀ ಶಾಖಾ ಸಭಾಪತಿ ಸ್ಟ್ಯಾನಿ ಡಿ ಸೋಜಾ, ಗಂಗೊಳ್ಳಿ ಶಾಖಾ ಸಭಾಪತಿ ಜೆರಾಲ್ಡ್ ಕ್ರಾಸ್ತಾ, ನಿರ್ದೇಶಕರಾದ ಜಾಕೋಬ್ ಡಿ’ ಸೋಜಾ, ಶಾಂತಿ ಕರ್ವಾಲ್ಲೊ, ಸಲಹೆÀದಾರಾದ ಬ್ಯಾಪ್ಟಿಸ್ಟ್ ಡಾಯಸ್ ಉಪಸ್ಥಿತರಿದ್ದರು. ಬೈಂದೂರು ಶಾಖಾ ಸಭಾಪತಿ ಮಾರ್ಟಿನ್ ಡಾಯಸ್ ವಂದಿಸಿದರು, ನಿರ್ದೇಶಕ ವಿನೋದ್ ಕ್ರಾಸ್ತಾ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.