ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ಮತ್ತೊಂದು ಗರಿ – ಶಿರ್ವಾದಲ್ಲಿ 8 ನೇ ಶಾಖೆ ಉದ್ಘಾಟನೆ

 

JANANUDI.COM NETWORK

 

 

 

 ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ಮತ್ತೊಂದು ಗರಿ – ಶಿರ್ವಾದಲ್ಲಿ 8 ನೇ ಶಾಖೆ ಉದ್ಘಾಟನೆ

 

 

 

ಕುಂದಾಪುರ, ಜೂ.7: ಕುಂದಾಪುರದಲ್ಲಿ ಜನ್ಮ ತಾಳಿದ ಸಹಕಾರ ಸಂಸ್ಥೆ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯು ಅಭಿವ್ರದ್ದಿ ಪಥದಲ್ಲಿ ದಾಪುಕಾಲು ಹಾಕುತ್ತ ಕುಂದಾಪುರ ತಾಲೂಕಿನಲ್ಲದೆ ಉಡುಪಿ ತಾಲೂಕಿನಲ್ಲಿ ವಿಸ್ತರಿಸುತ್ತಾ, ಇದೀಗ ಉಡುಪಿ ತಾಲೂಕಿನಲ್ಲಿ ಎರಡನೇ ಶಾಖೆಯಾಗಿ ಒಟ್ಟಾರೆಯಾಗಿಯಾಗಿ ರೋಜರಿ ಕ್ರೆಡಿಟ್ ಸಂಸ್ಥೆ ತನ್ನ 8 ನೇ ಶಾಖೆಯನ್ನು ಶಿರ್ವಾದಲ್ಲಿ ಆರಂಭಗೊಳಿಸುತ್ತಾರೆ.
ಈ ನೂತನ ಶಾಖೆ ಶಿರ್ವಾದ ಮುಖ್ಯ ರಸ್ತೆಯಲ್ಲಿನ ಬಹ್ರೇನ್ ಟವರಿನ ನೆಲ ಅಂತಸ್ತಿನಲ್ಲಿ 2020 ಜೂನ್ 8 ರಂದು ಶಿರ್ವಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಫಾ| ಡೆನಿಸ್ ಡೆಸಾ ಉದ್ಘಾಟಿಸಿ ಆಶಿರ್ವಚನ ಮಾಡಲಿದ್ದಾರೆ.
ರೋಜರಿ ಕ್ರೆಡಿಟ್ ಸಂಸ್ಥೆಯ ಮುಖ್ಯ ಕಚೇರಿಯು ಕುಂದಾಪುರ ಕುಂದೇಶ್ವರ ದೇವಸ್ಥಾನ ರಸ್ತೆಯಲ್ಲಿದ್ದು, ಅದು ಕುಂದಾಪುರ, ಬೈಂದೂರು, ಪಡುಕೋಣೆ, ಬಸ್ರೂರು, ಪಿಯುಸ್ ನಗರ್, ಗಂಗೊಳ್ಳಿ, ಕಲ್ಯಾಣಪುರ ಸಂತೆಕಟ್ಟೆ ಇಲ್ಲಿ ಶಾಖೆಗಳು ಇದ್ದು ಈಗ ಶಿರ್ವಾದಲ್ಲಿ ನೂತನ ಶಾಖೆಯಾಗಿರುತ್ತದೆ.
ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಗಾಗಿ ಕುಂದಾಪುರ ರೋಜರಿ ಕ್ರೆಡಿಟ್ ಕೋ–ಅಪರೇಟಿವ್ ಸೊಸೈಟಿಗೆ ರಾಜ್ಯ ಮಟ್ಟದಲ್ಲಿ 2019 ರ ‘ಉತ್ತಮ ಸಹಕಾರ ಸಂಘ ಪ್ರಶಸ್ತಿ’ ಯನ್ನು ಪಡೆದುಕೊಂಡಿದೆ. ಪಡೆದುಕೊಂಡ ಸಂಸ್ಥೆಯಾಗಿದೆ. ದೇಶದಲ್ಲಿ ಲಾಖ್ ಡೌನ್ ಇರುವ ಕಾರಣ ಉದ್ಘಾಟನ ಕಾರ್ಯಕ್ರಮ ಸರಳವಾಗಿದ್ದು , ಸಭಾ ಕಾರ್ಯಕ್ರಮ ನಡೆಸಲು ಸಾಧ್ಯವಾಗದಿದ್ದಕ್ಕೆ ವಿಷಾದವಿದೆ. ಆದರೂ ಲಾಕ್ ಡೌನ್ ಇದ್ದರೂ ಕೂಡ ಹೊಸ ಶಾಖೆ ಆರಂಭಿಸಿ ರೋಜರಿ ಸಂಸ್ಥೆ ಅಭಿವ್ರದ್ದಿ ಪಥದಲ್ಲಿ ಸಾಗಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ಸಂಸ್ಥೆ ಸೆವೆಗೆ ಉತ್ತಮ ಹೆಸರು ಗಳಿಸಿದ್ದು ಇದರ ಲಾಭವನ್ನು ಶಿರ್ವಾ ಆಸು ಪಾಸಿನ ಜನ ಪಡೆದು ಸಂಸ್ಥೆಗೆ ಸಹಕಾರ ಪೆÇ್ರೀತ್ಸಾಹ ನೀಡಿ ಸಂಸ್ಥೆ ಇನ್ನೂ ಹೆಚ್ಚಿನ ಯಶಸು ಪಡೆಯಲು ಕಾರಣಾಗಬೇಕು’ ಎಂದು ಸಂಸ್ಥೆಯ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ಮಾಧ್ಯಮಕ್ಕೆ ತಿಳಿಸಿದ್ದಾರೆ.