ರೋಜರಿ ಆಂ. ಮಾ. ಶಾಲೆಯ ವಾರ್ಷಿಕೋತ್ಸವ – ‘ಶಿಕ್ಷಣ ಅಂದರೆ ಶಸ್ತ್ರ. ಜೀವನ ಯಶಸ್ವಿಯಾಗಲು ಅದನ್ನು ಬಳಸಿಕೊಳ್ಳಿ: ಸಬ್ ಇನ್ಸ್ ಪೆಕ್ಟರ್ ಜೊಯ್ಸ್ಲಿನ್ ಫೆರ್ನಾಂಡಿಸ್

JANANUDI.COM NETWORK

 

 ರೋಜರಿ ಆಂ. ಮಾ. ಶಾಲೆಯ ವಾರ್ಷಿಕೋತ್ಸವ – ‘ಶಿಕ್ಷಣ ಅಂದರೆ ಶಸ್ತ್ರ. ಜೀವನ ಯಶಸ್ವಿಯಾಗಲು ಅದನ್ನು ಬಳಸಿಕೊಳ್ಳಿ: ಸಬ್ ಇನ್ಸ್ ಪೆಕ್ಟರ್ ಜೊಯ್ಸ್ಲಿನ್ ಫೆರ್ನಾಂಡಿಸ್

 

 

 

ಕುಂದಾಪುರ, ಡಿ 14: ’ಶಿಕ್ಷಣವೆಂಬುದು ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತವಲ್ಲಾ, ನೀಜ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಮಕ್ಕಳು ಪಠ್ಯ ಪುಸ್ತಕವಲ್ಲದೆ ಇತರ ಚಟುವಟಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಹಾಗೇ ‘ಶಿಕ್ಷಣ ಅಂದರೆ ಅದೊಂದು ಶಸ್ತ್ರ. ಅದನ್ನು ನಿಮ್ಮ ಜೀವನ ಯಶಸ್ವಿಯಾಗಲು ಅದನ್ನು ಬಳಸಿಕೊಳ್ಳಿ.’ ಎಂದು ಉಡುಪಿ ಅಬಕಾರಿ ಇಲಾಖೆಯ ಸಬ್ ಇನ್ಸ್‍ಪೆಕ್ಟರ್ ಜೊಯ್ಸ್ಲಿನ್ ಫೆರ್ನಾಂಡಿಸ್ ಹೇಳಿದರು
ಅವರು ಡಿ. 13 ರಂದು ನಡೆದ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಮುಖ್ಯ ಅತ್ತಿಥಿಯಾಗಿ ಭಾಗವಹಿಸಿ ಮಾತನಾಡಿದರು ಜೀವನದಲ್ಲಿ ಗುರಿಯಿರಬೇಕು, ಗುರಿ ಅಂದರೆ ಡಾಕ್ಟರ್, ಇಂಜಿನಿಯರ್ ಮಾತ್ರವಲ್ಲಾ, ನೀವು ಎನಾಗಬೇಕೆಂದು ನಿರ್ಧರಿಸುವುದು ತಪ್ಪು. ಹೆತ್ತವರು ಎನಾಗಬೇಕೆಂದು ಬಯಸುತ್ತಾನೊ ಅದಕ್ಕೆ ಪೆÇ್ರೀತ್ಸಾಹ ನೀಡಿ. ಹಾಗೆ ಮಕ್ಕಳು ಒದಲಿಕ್ಕೆ, ಪರೀಕ್ಷೆ ಉಂಟ್ಟೆಂದು ಅವರಿಗೆ ಏನೂ ಕೆಲಸ ಕೊಡದೆ ಇರಬೇಡಿ, ಅವರಿಗೆ ಮನೆಯಲ್ಲಿ ಕೆಲಸ ಕೋಡಿ ಜೀವನದಲ್ಲಿ ಅದೇ ಪ್ರಯೋಜನಕ್ಕೆ ಬರುತ್ತದೆ. ಹಾಗೇ ಮಕ್ಕಳು ಕೂಡ ಇವತ್ತು ತಂತ್ರಜ್ಞಾನ ನಮಗೆ ಗೊತ್ತಿದೆ, ತಂದೆ ತಾಯಿಗೆ ಎನೂ ಗೊತ್ತಿಲ್ಲಾ ಎಂದು ಹೆತ್ತವರನ್ನು ಸಣ್ಣಾದಾಗಿ ಕಾಣಬೇಡಿ, ಇದಕ್ಕಾಗಿ ನಿಮ್ಮ ಹೆತ್ತವರು ಮಾಡುವ ತ್ಯಾಗವನ್ನು ಮರೆಯಬೇಡಿ’ ಎಂದು ಅವರು ಸಂದೇಶ ನೀಡಿದರು.
ಗೌರವ ಅತಿಥಿಯಾದ ಪೆÇರ್ಟ್‍ಕೇಟ್ ಎಜ್ಯುಕೇಷನ್ ಟ್ರಷ್ಟ್ ಛೇಯರ್‍ಮೇನ್ ಅಭಿನಂದನ್ ಶೆಟ್ಟಿ ಶುಭ ನುಡಿಗಳನ್ನಾಡಿದರು. ಅಧ್ಯಕ್ಷತೆ ವಹಿಸಿಕೊಂಡ ಕಥೋಲಿಕ್ ಶಿಕ್ಷಣ ಮಂಡಳಿಯ ಜಂಟಿ ಕಾರ್ಯದರ್ಶಿ ಅ|ವಂ|ಫಾ|ಸ್ಟ್ಯಾನಿ ತಾವ್ರೊ ‘ಗುಣಮಟ್ಟದ ಶಿಕ್ಷಣದ ಜೊತೆ, ಗುಣ ನಡೆತೆ ಶಿಸ್ತಿನ ಪಾತ್ರ ಮುಖ್ಯವಾದದ್ದು. ಸಮಾಜದಲ್ಲಿ ನಿಮ್ಮ ಮಕ್ಕಳಿಗೆ ಒಂದು ಉತ್ತಮ ಸ್ಥಾನ ದೊರಕಬೇಕೆಂದರೆ, ಹೆತ್ತವರ್ ಪಾತ್ರ ಮುಖ್ಯವಾಗಿದೆ. ಹಾಗೇ ಶಿಕ್ಷಕರು ಹೇಳಿದ್ದೆ ಸತ್ಯ ಅಂತಾ ವಿದ್ಯಾರ್ಥಿಗಳು ನಂಬುತ್ತಾರೆ ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷರ ಪಾತ್ರವೂ ಮಹತ್ವದದ್ದು ಹಾಗಾಗಿ ಶಿಕ್ಷಕರು ತಮ್ಮ ಪಾತ್ರವನ್ನು ಸರಿಯಾಗಿ ನಿಭಾಯಿಸಬೇಕು’ ಎಂದು ಸಂದೇಶ ನೀಡಿದರು.
ವೇದಿಕೆಯಲ್ಲಿ ಕುಂದಾಪುರ ರೋಜರಿ ಇಗರ್ಜಿಯ ಶಿಕ್ಷಣ ಸಂಸ್ಥ್ರೆಗಳ ಎಲ್ಲಾ ಮುಖ್ಯೊಪಾಧ್ಯರು, ಹಾಗೇ ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ವಾಯ್ಲೆಟ್ ತಾವ್ರೊ ಹಾಜರಿದ್ದು ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿದರು. ಶಾಲಾ ಮುಖ್ಯೊಪಾಧ್ಯಯಿನಿ ಸಿಸ್ಟರ್ ಶಾಂತಿ ತೆರೆಜ್ ವರದಿಯನ್ನು ಮುಂದಿಟ್ಟರು. ಆಟ ಪಾಠಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಧ್ಯಾರ್ಥಿಗಳು ಗಾಯನ, ನ್ರತ್ಯ, ಮತ್ತು ನಾಟಕಗಳನ್ನು ಪ್ರದರ್ಶಿಸಿದರು ಹಲವಾರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕಿ ಸಿಸ್ಟರ್ ವೀಣಾ ಸ್ವಾಗತಿಸಿದರು ಶಿಕ್ಷಕಿ ರೇಣುಕಾ ವಂದಿಸಿದರು.