JANANUDI.COM NETWORK
ರೊಟಾರ್ಯಾಕ್ಟ್ ಕ್ಲಬ್ ಕುಂದಾಪುರ ದಕ್ಷಿಣ ಇವರ ಆಶ್ರಯದಲ್ಲಿ ‘ರೂಟ್ಸ್’ ತರಬೇತಿ ಶಿಬಿರ
ಕುಂದಾಪುರ,ಸೆ. 17:ರೊಟಾರ್ಯಾಕ್ಟ್ ಕ್ಲಬ್ ಕುಂದಾಪುರ ದಕ್ಷಿಣ ಇವರ ಆಶ್ರಯದಲ್ಲಿ ಸೆಪ್ಟಂಬರ 15 ರಂದು ರೋಟರಿ ಡಿಸ್ಟ್ರಿಕ್ಟ್ 3182 ಇದರ ವರ್ಷದ ರೂಟ್ಸ್ ತರಬೇತಿ ಶಿಬಿರವು ರೊಟಾರ್ಯಾಕ್ಟ್ ಯುವ ಜನರಿಗಾಗಿ ರೊಟ್ಯಾರ್ಯಾಕ್ಟ್ ಕ್ಲಬ್ ಕುಂದಾಪುರ ದಕ್ಷಿಣ ಇದರ ಸಭಾ ಭವನದಲ್ಲಿ ನಏಎಯಿತು. ವಿವಿಧ ಭಾಗಗಳಿಂದ 13 ರೊಟಾರ್ಯಾಕ್ಟ್ ಸಂಸ್ಥೆಗಳು ಸದಸ್ಯರು ಈ ಶಿಬಿರದಲ್ಲಿ ಭಾಗಿಯಾದವು.
ಕಾರ್ಯಕ್ರಮದ ಉದ್ಘಾಟನೆಯನ್ನು ರೊ||ಅಭಿನಂದನ್ ಶೆಟ್ಟಿ ನೆರವೇರಿಸಿದರು. ರೊಟಾರ್ಯಕ್ಟ್ ಕ್ಲಬ್ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷ ಆಲ್ಡ್ರಿನ್ ಡಿಸೋಜಾ ಸ್ವಾಗತಿಸಿದರು. ಕರ್ಯಕ್ರಮದಲ್ಲಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಅಶ್ಯಕ್ಷ ರೊ| ದೇವ್‍ರಾಜ್ ಕೆ. ಕಾರ್ಯದರ್ಶಿ ರೊ| ಶೋಭಾ ಭಟ್, ರೊ| ಜಗನ್ನಾಥ್ ಕೋಟೆ, ರೊ| ಉಮೇಶ್ ಕೆ. ರೊ| ಪ್ರಕಾಶ್ ನಾಯಕ್, ರೊ|ಪ್ರವೀಣ್ ಆಚಾರ್ಯ ಭಾಗಿಯಾಗಿದ್ದರು.. ರೊ| ಕೆ.ಕೆ. ಕಾಂಚನ್ ಸಂಸ್ಥೆಯ ಬುಲೆಟಿನ್ ಬಿಡುಗಡೆ ಮಾಡಿದರು. ತರಬೇತುದಾರರಾಗಿ ರೊ|ಶ್ರೀನಾಥ್ ರಾವ್, ರೊ|ಅಶೋಕ್ ಶೆಟ್ಟಿಯವರು ತರಬೇತಿಯ ಜೊತೆ ಸಾಂಸ್ಕ್ರತಿಕ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು.. ರೊ| ಕಾರ್ಯದರ್ಶಿ ವಿನಾಯಕ ಗಾಣಿಗ ವಂದಿಸಿದರು ರೊ|ಸ್ಯಾಮುವೇಲ್ ಲುವಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.