ರೈತವಿರೋಧಿ ಭೂಸುಧಾರಣಾ,ವಿದ್ಯುತ್, ಕಾರ್ಮಿಕ, ಎಪಿಎಂಸಿ ಕಾಯಿದೆಗಳ ತಿದ್ದುಪಡಿ ಎಪಿಎಂಸಿಯ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಹಂಚುವ ಹುನ್ನಾರ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ :ಸೆ.25, ರೈತವಿರೋಧಿ ಭೂಸುಧಾರಣಾ, ಹಾಗೂ ವಿದ್ಯುತ್, ಕಾರ್ಮಿಕ, ಎಪಿಎಂಸಿ ಕಾಯಿದೆಗಳ ತಿದ್ದುಪಡಿ ಎಪಿಎಂಸಿಯ ಆಸ್ತಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಸ್ಥಳೀಯ ಬಂಡವಾಳಶಾಹಿಗಳಿಗೆ ಹಂಚುವ ಹುನ್ನಾರ ನಡೆಸಲಾಗುತ್ತಿದೆ. ಸುಗ್ರೀವಾಜ್ಞೆಯನ್ನು ವಾಪಸ್ಸು ಪಡೆಯಬೇಕೆಂದು ರೈತ ಸಂಘದಿಂದ ರೋಜರ್‍ನಹಳ್ಳಿ ಗೇಟ್‍ನ ರಸ್ತೆ ತಡೆ ಮಾಡಿ ಸರ್ಕಾರವನ್ನು ಒತ್ತಾಯಿಸಲಾಯಿತು.
ಹೋರಾಟದ ನೇತೃತ್ವವಹಿಸಿದ್ದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಮಾತನಾಡಿ ರಾಜ್ಯಾಂದ್ಯಂತ ವಿರೋದ ವ್ಯಕ್ತವಾಗುತ್ತಿದ್ದರೂ ಯಾವುದನ್ನೂ ಲೆಕ್ಕಿಸದೇ ರೈತ ವಿರೋದಿ ಕಾಯ್ದೆಗಳನ್ನು ಯಾವುದೇ ಚರ್ಚೆಯಿಲ್ಲದೆ ಏಕಾಏಕಿ ಕಾಯಿದೆಗಳನ್ನು ಜಾರಿಗೆ ಮುಂದಾಗಿರುವುದು ಇಡೀ ಸಂಕುಲವನ್ನು ನಾಶ ಮಾಡಿ ಕಾರ್ಪೋರೇಟ್ ಕಂಪನಿಗಳ ಪರವಾಗಿ ಸರ್ಕಾರಗಳಿರುವುದು ಎನ್ನುವುದನ್ನು ಸಾಭೀತುಪಡಿಸುವುದಕ್ಕೆ ಹೊರತು ರೈತರ ಪರವಾಗಿ ಅಲ್ಲ. ಎಪಿಎಂಸಿಯ ಆಸ್ತಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಸ್ಥಳೀಯ ಬಂಡವಾಳಶಾಹಿಗಳಿಗೆ ಹಂಚುವ ಹುನ್ನಾರ ನಡೆಸಲಾಗುತ್ತಿದೆ. ಇನ್ನು ವಿದ್ಯುತ್ ಕಂಪನಿಗಳ ಖಾಸಗಿಕರಣ ಮಾಡಿದಲ್ಲಿ ಇಂದು ರೈತರಿಗೆ ಸಿಗುತ್ತಿರುವ ಉಚಿತ, ಸಬ್ಸಿಡಿ ವಿದ್ಯುತ್ ಸೌಲಭ್ಯ ನಿಲ್ಲುತ್ತದೆ. ಉತ್ಪಾದನಾ ವೆಚ್ಚ ಹೆಚ್ಚಾಗಿ ರೈತರ ಮೇಲೆ ಹೊರೆಯೂ ಬೀಳುತ್ತದೆ. ಸುಗ್ರೀವಾಜ್ಞೆ ಮೂಲಕ ಭೂಸುಧಾರಣಾ ಕಾಯಿದೆ ತಿದ್ದುಪಡಿ ತಂದಿರುವುದನ್ನು ಸಣ್ಣಪುಟ್ಟ ರೈತರ ಬಳಿ ಇರುವ ಭೂಮಿಯು ಉಳಿಯುವ ಲಕ್ಷಣವಿಲ್ಲ. ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯಿಂದಾಗಿ ಕೃಷಿ ಜಮೀನಿನ ಮೇಲೆ ಕಪ್ಪು ಹಣ ಹೂಡಿಕೆಯಾಗಲಿದೆ. ಮತ್ತೆ ಭೂಮಿ ಉಳ್ಳವರ ಪಾಲಾಗುವುದರಲ್ಲಿ ಅನುಮಾನವಿಲ್ಲ, ಜೊತೆಗೆ ಶೇ 80 ರಷ್ಟು ರೈತರು ಬೀದಿಗೆ ಬರಲಿದ್ದಾರೆಂದು ಆರೋಪಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಸರ್ಕಾರಗಳು ರೈತ ಮತ್ತು ಕಾರ್ಮಿಕ ವಿರೋದಿ ಕಾಯ್ದೆಗಳನ್ನು ಜಾರಿ ಮಾಡಿ ರೈತರನ್ನು ಮತ್ತು ಕಾರ್ಮಿಕರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿವೆ. ಈ ಎಲ್ಲಾ ಕಾಯ್ದೆಗಳು ಒಂದು ವೇಳೆ ರೈತಪರವಾಗಿದ್ದರೆ ಈ ಕೋವಿಡ್ ಸಂದರ್ಭದಲ್ಲಿ ತರುವ ಅವಶ್ಯಕತೆ ಏನಿತ್ತು, ಇಷ್ಟು ಆತುರ ನಿರ್ದಾರಗಳೇಕೆ, ಹೋರಾಟಗಾರರಿಗೆ ಸೌಜನ್ಯಕ್ಕೂ ತಿಳುವಳಿಕೆ ಯಾಕೆ ನೀಡಲಿಲ್ಲ, ನಿಜವಾದ ಕರಡನ್ನು ಯಾಕೆ ಜನಭೀಪ್ರಾಯಕ್ಕೆ ಬಿಡಲಿಲ್ಲ ಎಂಬ ಪ್ರಶ್ನೆಗಳು ಕಾಡುತ್ತಿವೆ. ಇವೆಲ್ಲದರ ಜೊತೆಗೆ ಸರ್ಕಾರದ ವಾದ ಯುವ ರೈತರು ಕೃಷಿಗೆ ಆಸಕ್ತಿ ತೋರುತ್ತಿದ್ದಾರೆ ಆಗಾಗಿ ಈ ಕಾಯ್ದೆ ತಿದ್ದುಪಡಿ ಮಾಡಿದ್ದೇವೆ. ರೈತರ ವಾದ ಯುವ ರೈತರು ಕೃಷಿಗೆ ಆಸಕ್ತಿ ತೋರಿದರೆ ಸರ್ಕಾರದಲ್ಲಿ ಪಾಳು ಬಿದ್ದಿರುವ ಭೂಮಿಯನ್ನು ಗುತ್ತಿಗೆ ಮೇಲೆ ಕೊಡಬಹುದಿತ್ತಲ್ವಾ, ಕೃಷಿ ಮಾಡುವ ಒಂದು ಕುಟುಂಬಕ್ಕೆ 216 ಎಕರೆ ಕೃಷಿ ಜಮೀನು ಯಾಕೆ? ಇನ್ನೂ ಭೂಸುದಾರಣೆ ಕಾಯ್ದೆ ತಿದ್ದುಪಡಿಯಿಂದ ಭೂಮಿ ಕಳೆದುಕೊಂಡು ಉಳ್ಳವರ ಬಳಿ ಗೇಣಿದಾರರಾಗುತ್ತಾರೆ ಈ ತೊಂದರೆಗಳಿದ್ದರೂ ಯಾಕೆ ಸರ್ಕಾರ ನಿರ್ಲಕ್ಷ ಮಾಡುತ್ತಿವೆ. ಈ ಕಾಯ್ದೆಗಳಿಂದ ರೈತರಿಗೆ ಯಾವುದೇ ಅನುಕೂಲವಿಲ್ಲ ಸರ್ಕಾರ ಈ ರೈತ ವಿರೋದಿ ಕಾಯ್ದೆಗಳನ್ನು ಕೂಡಲೇ ಕೈಬಿಡಬೇಕು ಇಲ್ಲವಾದಲ್ಲಿ ಸೋಮವಾರ ಬಂದ್ ಜೊತೆಗೆ ಬೃಹತ್ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಕೆ ಕೊಟ್ಟರು
ಮನವಿ ಸ್ವೀಕರಿಸಿ ಮಾತನಾಡಿದ ರಾಜಸ್ವ ನೀರೀಕ್ಷಕರು ನಿಮ್ಮ ಈ ಮನವಿಯನ್ನು ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು
ಹೋರಾಟದಲ್ಲಿ ನಳಿನಿ.ವಿ ಶಪಿ, ಶಿವು, ಲೋಕೆಶ್, ಪ್ರಶಾಂತ್, ನಂದೀಶ್, ಮೋಹನ್, ಅನಿಲ್, ತೆರ್ನಹಳ್ಳಿ ಆಂಜಿನಪ್ಪ ಮುಂತಾದವರಿದ್ದರು