ವರದಿ: ವೈ. ಸೀತಾರಾಮ ಶೆಟ್ಟಿ ಕಾರ್ಯದರ್ಶಿ, ಭಾರತೀಯ ರೆಡ್ ಕ್ರಾಸ್ ಸಂಸ್ತೆ, ಕುಂದಾಪುರ.
ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಟಕಕ್ಕೆ ಅತ್ಯುತ್ತಮ ತಾಲೂಕು ಪ್ರಶಸ್ತಿ.
ಕುಂದಾಪುರ, ಫೆ.17 ಕಳೆದ ಒಂದು ದಶಮಾನದಿಂದ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಟಕ ಸಾವಿರಾರು ಸಮಾಜಮುಖೇನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೆಡ್ಕ್ರಾಸ್ ದ್ಯೇಯಗಳನ್ನು ಪಾಲಿಸುತ್ತಾ ಬಂದಿದೆ. ಮುಖ್ಯವಾಗಿ ವಿಕಲ ಚೇತನರನ್ನು ಗುರುತಿಸಿ ಅವರಿಗೆ ಅಗತ್ಯ್ವಿರುವ ಗಾಲಿ ಖುರ್ಚಿ, ಟ್ರಿಸೈಕಲ್, ಹಾಗೂ ಕ್ರತಕ ಅವಯವ ಇತ್ಯಾದಿಗಳನ್ನು ಒದಗಿಸುತ್ತಾ ಬಂದಿದೆ. ವಿಶೇಷ ಮಕ್ಕಳ ಮೂರೂ ಶಾಲೆಗಳಿಗೂ ಸಹಾಯ ಧನಗಳ್ನ್ನು ವಿತರಿಸುತ್ತಾ ಸಹಕರಿಸುತಿದೆ.
ಹಳ್ಳಿಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಭಿರ, ನೇತ್ರ ತಪಾಸಣಾ ಶಿಭಿರ ಮತ್ತು ಉಚಿತ ಕನ್ನಡಕ ವಿತರಣೆ ನಡೆಸಿ ಸಾವಿರಾರು ಜನರಿಗೆ ಸಹಾಯವಾಗುವಂತೆ ಮಾಡಿದೆ.
ಯುವಕ ಯುವತಿಯರನ್ನು ಸಮಾಜಮುಖೇನ ಕಾರ್ಯಕ್ರಮಗಳಲ್ಲಿ ತೊಡಗಿಸುವಂತೆ ಪ್ರೇರಿಪಿಸುತ್ತಿದೆ. ಈ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಯುವ ರೆಡ್ ಕ್ರಾಸ್ ಮತ್ತು ಪ್ರೌಡ ಶಾಲೆಗಳಲ್ಲಿ ಜೂನಿಯರ್ ರೆಡ್ ಕ್ರಾಸ್ ಸ್ಥಾಪನೆ ಮಾಡಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪ್ರಥಮ ಚಿಕಿತ್ಸಾ ಶಿಭಿರ, ಪ್ರಕ್ರತಿವಿಕೋಪ ನಿವಾರಣಾ ಶಿಭಿರ, ಆರೋಗ್ಯದ ಬಗ್ಗೆ, ಊ.I.ಗಿ ಮಾಹಿತಿ ಸಿಭಿರ ಮತ್ತುತಂಬಾಕು ಸೇವನಾ ದುಶ್ಪರಿಣಾಮ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಾ ಬಂದಿದೆ.
ಕುಂದಾಪುರಕ್ಕೆ ಅಗತ್ಯವಿರುವ ಸುಸಜ್ಜಿತವಾದ ರಕ್ತ ನಿಧಿ ಕೇಂದ್ರವನ್ನು ಸುಮಾರು 2.5 ಕೋಟಿ ವೆಚ್ಚದಲ್ಲಿ ಸ್ತಾಪನೆ ಮಾಡಿ ನೂರಾರು ಜೀವಗಳನ್ನು ಉಳಿಸಿದೆ. ಪ್ರತಿ ವರ್ಷ 5000 ದಿಂದ 6000 ಯುನಿಟ್ ರಕ್ತವನ್ನು ಶೇಖರಿಸಿ ಅಗತ್ಯವಿರುವ ರೋಗಿಗಳಿಗೆ ಸರಬರಾಜು ಮಾಡಲಾಗುತ್ತದೆ.
ಉತ್ತಮ ಗುಣಮಟ್ಟದ ಔಷಧಿಗಳನ್ನು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡುವ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರವನ್ನು ಸ್ಥಾಪನೆ ಮಾಡಿದೆ. ಪ್ರತೀ ದಿವಸ 500 ರಿಂದ 600 ರೋಗಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ರೆಡ್ ಕ್ರಾಸ್ ಶಾಖೆಗಳ ವಿವಿದ ಚಟುವಟಿಕೆಗಳನ್ನು ಮತ್ತು ಸದಸ್ಯತ್ತ್ವ ನೊಂದಣಿ ಇತ್ಯಾದಿ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಪ್ರತೀ ವರ್ಷ “ಅತ್ಯುತ್ತಮ ಜಿಲ್ಲಾ ಶಾಖೆ” ಮತ್ತು ಅತ್ಯುತ್ತಮ ತಾಲೂಕು ಶಾಖೆ” ಗಳನ್ನು ಗುರುತಿಸಿ ಕರ್ಣಾಟಕದ ರಾಜ್ಯಪಾಲರು ರಾಜಭವನದಲ್ಲಿ ನಡೆಯುವ ರಾಜ್ಯ ಶಾಖೆಯ ವಾಷಿಕ ಮಹಾ ಸಭೆಯಲ್ಲಿ ನೀಡುತ್ತಾರೆ.
ಈ ಎಲ್ಲಾ ವಿಷಯಗಳನ್ನು ಗಮನದಲ್ಲಿರಿಸಿಕೊಂಡು 2018- 2019 ರ ಸಾಲಿನ “ಃಇSಖಿ ಖಿಂಐUಏ ಃಖಂಓಅಊ ಂWಂಖಆ” ನ್ನು ತಾರೀಕು 15-02-2020 ರ ಶನಿವಾರ ಮಾನ್ಯ ರಾಜ್ಯಪಾಲರು ರಾಜಭವನದಲ್ಲಿ ಪ್ರಧಾನ ಮಾಡಿದರು.
ಇದು ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಟಕಕ್ಕೆ ಸತತವಾಗಿ ಸಂದ ಐದನೇ ಪ್ರಶತ್ಸಿ. ಈ ಪ್ರಶಸ್ಸ್ತಿಯನ್ನು ನಮ್ಮ ರೆಡ್ ಕ್ರಾಸ್ ಘಠಕದ ಸಭಾಪತಿಯವರಾದ ಶ್ರೀ ಎಸ್. ಜಯಕರ ಶೆಟ್ಟಿ, ಖಜಾಂಚಿ ಶ್ರೀ ಶಿವರಾಮ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಗಣೇಶ್ ಆಚಾರ್ಯ ರೆಡ್ ಕ್ರಾಸ್ ಘಟಕದ ಪರವಾಗಿ ಸ್ವೀಕರಿಸಿದರು. ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯ ಘಠಕದ ಸಭಾಪತಿ, ಜಿಲ್ಲಾ ಘಠಕದ ಸಭಾಪತಿಯವರಾದ ಬಸ್ರೂರು ರಾಜೀವ ಶೆಟ್ಟಿ, ಬೈಂದೂರು ಘಠಕದ ಸಭಾಪತಿ ಮತ್ತು ಕಾರ್ಯದರ್ಷಿ ಹಾಜರಿದ್ದರು.