JANANUDI.COM NETWORK

ಕುಂದಾಪುರ, ಸಾಸ್ತನದಲ್ಲಿ ಸಣ್ಣ ಬೇಕರಿಯೊಂದನ್ನು ಆರಂಭಿಸಿ ನಂತರ ಬಹು ದೊಡ್ಡ ಮಟ್ಟದ ರುಚಿ ಫುಡ್ ಪ್ರಾಡೆಕ್ಟ್, ಎಂಬ ಫ್ಯಾಕ್ಟರಿ ಆರಂಭಿಸಿ ಯಶಸ್ಸು ಗಳಿಸಿದ್ದ ಉದ್ಯಮಿ ರೊಬರ್ಟ್ ಪುಟಾರ್ಡೊ ಫ್ಯಾಕ್ಟರಿಯಲ್ಲಿ ನಡೆದ ಗ್ಯಾಸ್ ಒಲೆ ಸ್ಫೋಟದಿಂದ ಅಕಾಲಿಕ (ಇವತ್ತು ಮುಂಜಾನೆ ಅಗೋಸ್ತ್ 10) ಮರಣಕ್ಕೆ ಗುರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ರೊಬರ್ಟ್ ಪುಟಾರ್ಡೊ ತಮ್ಮ ತಾರುಣ್ಯದಲ್ಲಿ ಕ್ರೈಸ್ತ ಯುವ ಜನ ನಾಯಕರಾಗಿದ್ದರು. ಅವರು ಕುಂದಾಪುರ ವಲಯದ ಕಥೊಲಿಕ್ ಸಭಾ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಮ್ಚೊ ಯುವಕ್ ಪತ್ರದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದ ಅವರು ಬರಹಗಾರರಾಗಿ ಕೊಂಕಣಿಯಲ್ಲಿ ಹಲವು ನಾಟಕಗಳನ್ನು ರಚಿಸಿದ್ದರು . ಹಾಗೇ ಅವರು ಉಡುಪಿ ಪ್ರಾಂತೀಯ ಕಥೊಲಿಕ್ ಸಭಾ ಸಂಘಟನೇಯ ಕಾರ್ಯದರ್ಶಿಯಾಗಿದ್ದು ಸಮಾಜದಲ್ಲಿ ಗುರುತಿಸಲ್ಪಟ್ಟವರಾಗಿದ್ದರು.
ಅವರು ಪತ್ನಿ ಪ್ರಮೀಳಾ ಮತ್ತು ರಶ್ಮಿ,ಡಾ|ರೋಶನಿ ರವೀನಾ, ಹೀಗೆ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

