ರಾಷ್ಟ್ರೀಯ ಪೌಷ್ಟಿಕತೆಯ ಮಾಹಿತಿ ಶಿಬಿರ – ಪೌಷ್ಟಿಕ ಆಹಾರ ಸೇವಿಸಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು – ನ್ಯಾಯಧೀಶ ರಂಗೇ ಗೌಡ

JANANUDI.COM NETWORK

 

ರಾಷ್ಟ್ರೀಯ ಪೌಷ್ಟಿಕತೆಯ ಮಾಹಿತಿ ಶಿಬಿರ – ಪೌಷ್ಟಿಕ ಆಹಾರ ಸೇವಿಸಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು – ನ್ಯಾಯಧೀಶ ರಂಗೇ ಗೌಡ

ಕುಂದಾಪುರ, ಸೆ.11:’ ಪೌಷ್ಟಿಕತೆಯ ಆಹಾರ ಸೇವಿಸಿದರೆ ಮಗು ಹುಟ್ಟುತ್ತಾರೆ ಈ ರೀತಿಯಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು, ಮಗು ತಾಯಿಯ ಭ್ರೂಣದಲ್ಲಿರುವಾಗಲೇ ತಾಯಿ ಮಗುವಿಗಾಗಿ ಪೌಷ್ಟಿಕತೆಯ ಆಹಾರ ಸೇವಿಸಬೇಕು. ದೇವರು 90 ಶೇಕಡ ಮಗುವನ್ನು ಚೆನ್ನಾಗಿಯೆ ರಚಿಸುತ್ತಾನೆ, ಆದರೆ ಮಗುವಿನ ಬೆಳವಣಿಗೆಗಾಗಿ ತಾಯಿ ಉತ್ತಮ ಪೌಷ್ಟಿಕತೆಯ ಆಹಾರ ಸೇವಿಸ ಬೇಕು’ ಎಂದು ಹಿರಿಯ ನ್ಯಾಯಧೀಶ ಮತ್ತು ಅಧ್ಯಕ್ಷರು ತಾ.ಕಾ.ಸೇ. ಸಮಿತಿ ಗೌರವಾನ್ವಿತ ರಂಗೇ ಗೌಡ ಸಿ. ಅವರು ಹೇಳಿದರು.
ಅವರು ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ ರಿ. ಅಭಿಯೋಗ ಇಲಾಖೆ ಕುಂದಾಪುರ ಮತ್ತು ರೋಟರಿ ಕ್ಲಬ್ ಕುಂದಾಪುರ ಸನ್‍ರೈಸ್ ಇವರ ಸಂಯುಕ್ತ ಆಶ್ರಯದಲ್ಲಿ ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕತೆಯ ಬಗ್ಗೆ ಮಾಹಿತಿ ಶಿಬಿರ ಮತ್ತು ಮಕ್ಕಳ ಹಕ್ಕುಗಳ ಶಿಬಿರ ಉದ್ಘಾಟಿಸಿ ಮಾತನಾಡುತಿದ್ದರು. ‘ಮಗುವಿಗೆ ತಾಯಿ ಹಾಲು ಉತ್ತಮ ಅದನ್ನು ಕಡ್ಡಾಯವಾಗಿ ತಾಯಿ ನೀಡಬೇಕು, ಅದು ಮಕ್ಕಳ ಹಕ್ಕು ಕೂಡ’ ಎಂದು ಅವರು ತಿಳಿಸಿದರು. ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಸಂಚಾಲಕ ಹೋಲಿ ರೋಜರಿ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ಇವತ್ತು ಮಕ್ಕಳು ಜಂಕ್ಸ್ ಫುಡ್ ತಿಂದು ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ, ಮಕ್ಕಳು ಸಮತೂಕದ ಆಹಾರ ಸೇವಿಸಿ ಆರೋಗ್ಯವಂತರಾಬೇಕು, ಹಾಗೇ ಮಕ್ಕಳ ಸುರಕ್ಷತೆ ಬಗ್ಗೆ ಅರಿವು ಕಾರ್ಯಕ್ರಮ ಬಹಳ ಉಪಯುಕ್ತ ಅದನ್ನು ಸದುಪಯೋಗವನ್ನು ಪಡೆದುಕೊಳ್ಳ ಬೇಕು’ ಎಂದು ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷ, ವಕೀಲರ ಸಂಘದ ಅಧ್ಯಕ್ಷರಾದ ಸಳ್ವಾಡಿ ನಿರಂಜನ ಹೆಗ್ಡೆ ‘ನಮ್ಮ ದೇಶದಲ್ಲಿ 46 ಶೇಕಡ ಮಕ್ಕಳಿಗೆ ಪೌಷ್ಟಿಕತೆಯಿಂದ ಅನ್ಯಾವಾಗುತ್ತ ಇದೆ, ನಾವು ವಿದೇಶಿಯ ವೇಷ ಭೂಷಣಕ್ಕೆ ಮಾರು ಹೋಗುತ್ತಿದ್ದೆವೆ, ವಿದೇಶಿಯರು ಪೌಷ್ಟಿಕತೆಯ ಆಹಾರ ಸೇವಿಸುತ್ತಾರೆ ಆದರೆ ನಾವು ಇಂತಹ ಅವರ ಒಳ್ಳೆಯ ಕಾರ್ಯಕ್ರಮಗಳ ಅನುಕರಣೆ ಮಾಡುವುದಿಲ್ಲಾ,’ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೈಂದೂರು ಆರೋಗ್ಯಾಧಿಕಾರಿ ಡಾ|ಪ್ರೇಮಾನಂದ ಮಕ್ಕಳ, ತಾಯಿಯ ಅಗತ್ಯತೆಯ ಪೌಷ್ಟಿಕತೆಯ ಆಹಾರದ ಬಗ್ಗೆ, ತಾಯಿ ಮಗುವಿಗೆ 2 ವರ್ಷದ ವರೆಗೆ ಎದೆ ಹಾಲು ನೀಡಬೇಕು ಮತ್ತು ಮಾನವನಿಗೆ ಬೇಕಾದ ಕಾರ್ಬೊನೈಟ್, ಪೆÇ್ರೀಟಿನ್ಸ್, ವೀಟಾಮೀನ್, ಕ್ಯಾಲ್ಸಿಯಮ್‍ವುಳ್ಳ ಬೇಕಾದ ಸಮತೂಕದ ಆಹಾರದ ಬಗ್ಗೆ ವಿವರ ನೀಡಿದರು. ಇನ್ನೊರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಕೀಲರಾದ ಶ್ರೀಧರ ಪಿ.ಎಸ್. ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪ್ರಧಾನ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಧೀಶರು ಹಾಗೂ ಕಾರ್ಯದರ್ಶಿಯಾದ ಗೌರವಾನ್ವಿತ ಪ್ರವೀಣ್ ನಾಯ್ಕ್, ರೊ|ಹಾಜಿ ಅಬ್ದುಶೇಖ್ ಸಾಹೇಬ್ ಶುಭ ಕೊರೀದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಹಂದೆ ಪ್ರಸ್ತಾವಿಕ ಮಾತುಗಳನ್ನಾಡಿದರು, ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಧೀಶರು ಗೌರವಾನ್ವಿತ ನಾಗರತ್ನಮ್ಮ ಉಪಸ್ಥಿತರಿದ್ದರು. ಭಾಸ್ಕರ ಸೇರೆಗಾರ್ ಕಾರ್ಯಕ್ರಮವನ್ನು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಉಪಸ್ಥಿತರಿದ್ದರು. ರೋಜರಿ ಕಿಂಡರ್ ಗಾರ್ಟನ್ ಮುಖ್ಯೋಪಧ್ಯಾಯಿನಿ ಶೈಲಾ ಲುವಿಸ್ ಸ್ವಾಗತಿಸಿದರು. ಶಿಕ್ಷಕಿ ವಿನೀತಾ ಡಿಸೋಜಾ, ವಂದಿಸಿದರು. ಶಿಕ್ಷಕಿ ವೀಣಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು,