ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಆಕರ್ಷಿಸಿದ ಕೋಲಾರದ ತರಕಾರಿಗಳು
ಕೋಲಾರ : ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವತಿಯಿಂದ ಫ್ರೆ 5 ರಿಂದ 8 ರವರೆಗೂ ರಾಷ್ಟ್ರೀಯ ತೋಟಗಾರಿಕೆ ಮೇಳ-2020 ವನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಕೋಲಾರದ ತರಕಾರಿಗಳು, ಹಣ್ಣು ಮತ್ತು ಹೂವುಗಳನ್ನು ಪ್ರದರ್ಶಿಸಲಾಯಿತು. ಇವು ಸಾರ್ವಜನಿಕರನ್ನು ಹೆಚ್ಚು ಆಕರ್ಷಿಸಿದವು.
ಮೇಳದಲ್ಲಿ ಕೋಲಾರದ ಕೃಷಿ ವಿಜ್ಞಾನ ಕೇಂದ್ರದ ಸ್ಟಾಲ್ನಲ್ಲಿ ಪಾಲಿಹೌಸ್ ತಾಂತ್ರಿಕತೆಯಲ್ಲಿ ಬೆಳೆದ ಕ್ಯಾಪಿಕ್ಸಂ ತಳಿಗಳಾದ ಇನ್ಸ್ಪಿರೇಶನ್, ಬಚಟ ಮತ್ತು ಇಂದ್ರತಳಿಗಳು, ಸೂಪರ್ ಟಾಕಿಸ್, 999 ತಳಿಯ ಕ್ಯಾರೆಟ್, ಇಂಗ್ಲೀಷ್ ಸೌತೆಕಾಯಿ, ಪಲ್ಲವಿ ತಳಿಯ ಸೌತೆಕಾಯಿ, ದಾವಲ್ ಹೂಕೋಸು, ಸ್ವೀಟ್ ಕಾರ್ನ, ಸೀಬೆಯ ಅಲಹಾಬಾದ್ ಸಫೇದ ತಳಿ, ಕಾರ್ನೆಷನ್, ಜರ್ಬೆರಾ ಮತ್ತು ಗುಲಾಬಿ ಹಾಗೂ ಚೈನೀಸ್ ಎಲೆಕೋಸು (ಪರ್ಪಲ್) ಇವುಗಳನ್ನು ಪ್ರದರ್ಶಿಸಲಾಯಿತು.
ಪ್ರದರ್ಶನವನ್ನು ವೀಕ್ಷಿಸಿದ ಸಾರ್ವಜನಿಕರು, ರೈತರು ವಿಜ್ಞಾನಿಗಳಿಂದ ಬೇಸಾಯದ ಕ್ರಮಗಳು ಹಾಗೂ ಈ ತರಕಾರಿಗಳನ್ನು ಬೆಳೆದ ರೈತರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಬೆಂಗಳೂರಿನ, ಕೃಷಿ ತಂತ್ರಜ್ಞಾನ ಆಳವಡಿಕೆ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಎಂ.ಜೆ ಚಂದ್ರೇಗೌಡ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟಾದ ಡಾ. ಆರ್.ಸಿ ಜಗದೀಶ್, ಡಾ.ವೈ.ಕೆ ಕೋಟಿಕಲ್, ಡಾ. ವಿಷ್ಣುವರ್ಧನ್, ಡಾ.ಜಿ.ಎಸ್.ಕೆ ಸ್ವಾಮಿ, ಡಾ. ಸೀತಾರಾಮ್, ಡಾ.ಮಂಜುನಾಥ್, ಡಾ.ಪ್ರಸಾದ್, ಡಾ. ಶ್ವೇತಾ, ಡಾ.ರಾಜೇಂದ್ರ ಮತ್ತು ನಿವೃತ್ತ ಹೆಚ್ಚುವರಿ ತೋಟಗಾರಿಕೆ ನಿರ್ದೇಶಕರಾದ ಡಾ. ಹಿತ್ತಲ ಮನಿ, ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಕೆ.ತುಳಸಿರಾಮ್ ಹಾಗೂ ತೋಟಗಾರಿಕಾ ವಿಜ್ಞಾನಿಗಳಾದ ಡಾ.ನಾಗರಾಜ್ ಕೆ.ಎಸ್ ಅವರು ಭಾಗವಹಿಸಿದ್ದರು.