JANANUDI.COM NETWORK
ರಾಜ್ಯದ ಅಭಿವೃದ್ಧಿಗೆ ಮಾರಕವಾದ ಬಜೆಟ್:ವಿನೋದ್ ಕ್ರಾಸ್ಟೊ
ಈ ಬಜೆಟ್ ನಲ್ಲಿ ಮುಖ್ಯ ಮಂತ್ರಿಗಳು ಕ್ರಷಿ, ಸೇವಾವಲಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಕಡಿಮೆ ಆದ್ಯತೆಯನ್ನು ಕೊಟ್ಟಿರುವುದರ ಪರಿಣಾಮವಾಗಿ ರಾಜ್ಯದ ಅಭಿವೃದ್ಧಿಗೆ ಮಾರಕವಾಗುವುದು ಖಚಿತವಾಗಿದೆ. ಬಜೆಟ್ ನ ಗಾತ್ರದಲ್ಲಿ ಕೇವಲ ೨% ಹೆಚ್ಚುವರಿಯನ್ನು ತೋರಿಸಿದ್ದು , ಕೇಂದ್ರ ಸರ್ಕಾರದ “GST “ಪರಿಹಾರ ಮೊತ್ತ ಕಡಿಮೆಯಾಗಿರುವುದು ಕಾರಣವೆಂದು ಸ್ವತಃ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ತೇರಿಗೆಯನ್ನು ಹೆಚ್ಚುವರಿ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿಯನ್ನು ಹಾಕಿದ್ದು ರಾಜ್ಯ ಜನತೆಗೆ ಮಾಡಿದ ದ್ರೋಹ ವಾಗಿದೆ..
— ವಿನೋದ್ ಕ್ರಾಸ್ಟೊ, ಪ್ರಧಾನ ಕಾರ್ಯದರ್ಶಿ
ಬ್ಲಾಕ್ ಕಾಂಗ್ರೆಸ್,ಕುಂದಾಪುರ.