ಯಾಜಕರು ದೇವರ ಮತ್ತು ಮನುಷ್ಯರ ಮಧ್ಯವರ್ತಿಯಾಗಿದ್ದಾನೆ : ಜೊವೆಲ್ ಇವರಿಗೆ ಬಿಶಪರಿಂದ ಕುಂದಾಪುರದಲ್ಲಿ ಧರ್ಮದೀಕ್ಷೆ
ಕುಂದಾಪುರ, ಮೆ. 22: ಕುಂದಾಪುರದ ಸ್ಟ್ಯಾನಿ ಮತ್ತು ಮೊಲಿ ಒಲಿವೇರಾ ಇವರ ಪುತ್ರ ಜೊವೇಲ್ ಒಲಿವೇರಾ ಇವರಿಗೆ ಕಾರ್ಮೆಲಿತ್ ಮೇಳದಲ್ಲಿ ಮಂಗಳೂರು ಮತ್ತು ಇತರೆಡೆ ಯಾಜಕತ್ವದ 13 ವರ್ಷಗಳ ತರಬೇತಿಯನ್ನು ಪಡೆದ ಬಳಿಕ ಕುಂದಾಪುರ ಇಗರ್ಜಿಯಲ್ಲಿ 22 ರಂದು ಬುಧವಾರದಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಧಾರ್ಮಿಕ ವಿಧಿಗಳಿಂದ ಪವಿತ್ರ ಬಲಿದಾನದ ವೇಳೆ ಯಾಜಕ ಧರ್ಮದೀಕ್ಷೆಯನ್ನು ನೀಡಿದರು.
‘ಯಾಜಕರೆಂದರೆ, ದೇವರ ವ್ಯಕ್ತಿಯಾಗಿದ್ದಾರೆ, ಅವರು ದೇವರನ್ನು ಪ್ರೀತಿಸುತ್ತಾರೆ, ದೇವರು ಅವರನ್ನು ಪ್ರೀತಿಸುತ್ತಾರೆ. ಅಂತಯೇ ಯಾಜಕರು ಜನರಿಗೆ ಪ್ರೀತಿಪಾತ್ರರಾದವರು, ಯಾಜಕರು ಜನರ ಪ್ರೀತಿಪಾತ್ರರಾದವರಾಗಿದ್ದಾರೆ. ಯಾಜಕರು ದೇವರ ಮನುಷ್ಯನಾಗಿದ್ದಾನೆ, ಯಾಕೆಂದರೆ, ಅವರು ದೇವರ ನೆರಳಲ್ಲಿ ಇರುತ್ತಾರೆ. ಯಾಜಕರಿಕಿಂತ ಶ್ರೇಷ್ಠ ಮನುಷ್ಯ ಬೇರೆ ಇಲ್ಲಾ. ಯಾಜಕರೆಂದರೆ, ದೇವರು ಮನುಷ್ಯರಿಂದ ಮನುಷ್ಯರಿಗಾಗಿ ಆರಿಸಿಕೊಂಡವನು. ಯಾಜಕರು ಮನುಷ್ಯರ ಪರವಾಗಿ, ದೇವರ ಮುಂದೆ ಸೆವೆ ಮಾಡಲು ಮತ್ತು ಮನುಷ್ಯರ ಪಾಪಗಳ ಪರಿಹಾರ ಮತ್ತು ಪವಿತ್ರ ಬಲಿದಾನಗಳನ್ನು ಅರ್ಪಿಸಲು ನೇಮಿಸಿಕೊಂಡವನು ಯಾಜಕರು ದೇವರ ಮತ್ತು ಮನುಷ್ಯರ ಮಧ್ಯವರ್ತಿಯಾಗಿ ದೇವರ ಕ್ರಪೆಯನ್ನು ನೀಡುವನಾಗಿರುತ್ತಾನೆ’ ಎಂದು ಅವರು ಸಂದೇಶ ನೀಡಿ ‘ನಿಮ್ಮ ಯಾಜಕತ್ವದ ಪಾವಿತ್ರತೆಯನ್ನು ಕಾಪಾಡಿಕೊಂಡು ಪುಣ್ಯವಂತ ಯಾಜಕರಾಗಿ’ ಎಂದು ಅವರು ನೂತನ ಯಾಜಕರಿಗೆ ಭೋದನೆಯನ್ನು ನೀಡಿದರು. ಅಪರೂಪಕ್ಕೆ ನಡೆಯುವಂತ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹಲವೆಡೆಯಿಂದ ಹಲವು ಧರ್ಮಗುರುಗಳು, ಧರ್ಮಭಗಿನಿಯರು ಅಪಾರ ಭಕ್ತಾಧಿಗಳು ಹಾಜರಿದ್ದರು.
ಅಭಿನಂದನ ಕಾರ್ಯಕ್ರಮ ಇಗರ್ಜಿಯ ಮೈದಾನದಲ್ಲಿ ನೆರವೇರಿತು. ಕಾರ್ಮೆಲ್ ಮೇಳದ ಪ್ರೊವಿನ್ಶಿಯಿಲ್ ಅ|ವಂ|ಚಾಲ್ರ್ಸ್ ಸೆರಾವೊ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ನೂತನ ಯಾಜಕರಿಗೆ ಶುಭ ಕೋರಿದರು. ಹಿಂದಿನ ಪ್ರೊವಿನ್ಶಿಯಿಲ್ ಮಡಗಾಂವ್ ಮೊನಿಸ್ಟ್ರಿ ಸೂಪಿರಿರಿಯರ್ ಅ|ವಂ|ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ನೂತನ ಯಾಜಕರ ಪರಿಚಯ ನೀಡಿ ಶುಭ ನುಡಿಗಳನ್ನಾಡಿದರು. ಮಂಗಳೂರು ಬಿಕರ್ನಕಟ್ಟೆ ಸೂಪಿರಿಯರ್ ವಂ|ವಿಲ್ಫ್ರೆಡ್ ವ್ಯಾಟಿಕನ್‍ನಲ್ಲಿರುವ ಪೋಪ್ ಸ್ವಾಮಿಯವರ ಸಂದೇಶ ಪತ್ರವನ್ನು ವಾಚಿಸಿ ನೂತನ ಧರ್ಮಗುರು ವಂ|ಜೊವೇಲ್‍ಗೆ ಸಮರ್ಪಿಸಿದರು. ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ವಂ| ಸ್ಟ್ಯಾನಿ ತಾವ್ರೊ ಶುಭ ಕೋರಿದರು. ನೂತನ ಯಾಜಕರ ಚಿಕ್ಕಮ್ಮ ಲಖ್ನೊದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಸ್ಟರ್ ಮೆಕ್ಸಿ ಮತ್ತು ಸೈಂಟ್ ಜೋಸೆಫ್ ಕಾನ್ವೆಂಟಿನ ಪ್ರತಿನಿಧಿಯಾಗಿ ಸಿಸ್ಟರ್ ಕೀರ್ತನ, ನೂತನ ಯಾಜಕರ ಹೆತ್ತವರು ಸ್ಟ್ಯಾನಿ ಮತ್ತು ಮೊಲಿ ಒಲಿವೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಂದಾಪುರ ಚರ್ಚಿನ ಹಿಂದಿನ ಪ್ರಧಾನ ಧರ್ಮಗುರು ವಂ|ಅನಿಲ್ ದಿಸೋಜಾ ಭೋಜನದ ಪ್ರಾರ್ಥನೆಯನ್ನು ನೇರವೇರಿಸಿದರು. ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ಹಲವಾರು ಅತಿಥಿ ಧರ್ಮಗುರುಗಳು ಈ ದೀಕ್ಷೆಯ ವಿಧಿವಿಧಾನದಲ್ಲಿ ಭಾಗಿಯಾಗಿ ಪವಿತ್ರ ಬಲಿದಾನವನ್ನು ಅರ್ಪಿಸಿದರು. ಕುಂದಾಪುರ ಸಹಾಯಕ ಧರ್ಮಗುರು ವಂ| ರೋಯ್ ಲೋಬೊ ಗಾಯನ ಮಂಡಳಿಗೆ ನಿರ್ದೇಶನ ನೀಡಿದರು. ನೋವೆಲ್ ಒಲಿವೇರಾ ಸ್ವಾಗತಿಸಿದರು. ನೂತನ ಯಾಜಕ ವಂ|ಫಾ| ಜೋವೆಲ್ ಒಲಿವೇರಾ ತಾನು ಯಾಜಕನಾಗಲು ಕಾರಣಕರ್ತರಾದದವರನ್ನು ಗೌರವಿಸಿ, ತನ್ನ ಅನ್ನಿಸಿಕೆಗಳನ್ನು ವ್ಯಕ್ತಪಡಿಸಿ ಧನ್ಯವಾದಗಳನ್ನು ಸಮರ್ಪಿಸಿದರು. ಕಾರ್ಯಕ್ರಮವನ್ನು ಲೆಸ್ಲಿ ಆರೋಜಾ ನೆಡೆಸಿಕೊಟ್ಟರು.