JANANUDI.COM NETWORK
ಮೂಡ್ಲಕಟ್ಟೆ ಎಮ್.ಐ.ಟಿ ಕಾಲೇಜು :ಅರಿವು ಕಾರ್ಯಕ್ರಮ
ಕುಂದಾಪುರ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಯುವ ಸ್ಪಂದನ ಕೇಂದ್ರ,ಉಡುಪಿ ಮತ್ತು ಭ್ರಷ್ಟಾಚಾರ ನಿಗ್ರಹ-ದಳ ಉಡುಪಿ ಇವರ ಸಹಭಾಗಿತ್ವದಲ್ಲಿ “ಭ್ರಷ್ಟಾಚಾರ ನಿರ್ಮೂಲನೆ” ವಿಷಯದ ಮೇಲೆ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಕುಂದಾಪುರದ ಉದ್ಯಮಿ ಕೆ.ಆರ್ ನೈಕ್ ರವರು ಉದ್ಘಾಟಿಸಿ ಭ್ರಷ್ಟಾಚಾರವನ್ನು ಪ್ರತಿಯೊಬ್ಬರು ಸಣ್ಣ ಮಟ್ಟದಿಂದಲೇ ಕಿತ್ತೋಗೆಯಬೇಕು ಮತ್ತು ಇದು ಪ್ರತಿಯೊಬ್ಬರ ಜವಾಬ್ದಾರಿಯೂ ಆಗಿದೆ ಎಂದು ತಿಳಿಸಿದರು.
ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ,ಭ್ರಷ್ಟಾಚಾರ ನಿಗ್ರಹ-ದಳ, ಉಡುಪಿ ವಿಭಾಗದ ಶ್ರೀ ಸತೀಶ್ ಬಿ.ಎಸ್ ರವರು, ಭ್ರಷ್ಟಾಚಾರ ಹೇಗೆ ಪ್ರಾರಂಭವಾಗುತ್ತೆ, ಯಾವ ಇಲಾಖೆಯಲ್ಲಿ ಯಾವ ರೀತಿಯಾಗಿ ನಡೆಯುತ್ತದೆ, ಪ್ರತಿ ಪ್ರಜೆಯಲ್ಲಿ ತವiಗೆ ಅರಿವಿಲ್ಲದೆ ನಡೆಯುವ ಭ್ರಷ್ಟಾಚಾರದ ಬಗ್ಗೆ, ಭ್ರಷ್ಟಾಚಾರ ಕಾಣಿಸಿದ್ದಲ್ಲಿ ನಾಗರಿಕರು ಹೇಗೆ ಇಲಾಖೆಯ ಮಾಹಿತಿಯನ್ನು ನೀಡಬೇಕು ಎಂದು ಸಂಕ್ಷೀಪ್ತವಾಗಿ ವಿವರಿಸಿದರು.ಕಾಂiÀರ್iಕ್ರಮದ ಸಹ ಆಯೋಜಕರಾದ, ಉಡುಪಿಯ ಯುವ ಸ್ಪಂದನ ಕೇಂದ್ರದ ನರಸಿಂಹ ಗಾಣಿಗರವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ, ಪ್ರಾಂಶುಪಾಲರಾದ ಡಾ||.ಕಾಟಯ್ಯ ಜಿ.ಎಸ್ ರವರು, ಅಧ್ಯಕ್ಷಿಯ ಭಾಷಣದಲ್ಲಿ ಪ್ರಮಾಣಿಕತೆ ಮತ್ತು ಕ್ರಮಬದ್ದವಾದ ಜೀವನ ಶೈಲಿಯಿಂದ ಭ್ರಷ್ಟಾಚಾರವನ್ನು ನಿಯಂತ್ರಿಸಬಹುದು ಎಂದು ಹೇಳಿದರು.ಅತಿಥಿಗಳಿಗೆ ಸ್ಮರಣಿಕೆಯ ರೂಪದಲ್ಲಿ ಗಿಡಗಳನ್ನು ನೀಡಿ ಪ್ರಕೃತಿ ಪ್ರೇಮವನ್ನು ತೋರಿಸಿದರು.ವಿದ್ಯಾರ್ಥಿ ಮಂಜುನಾಥ ಕಾರ್ಯಕ್ರಮವನ್ನು ನಿರೂಪಿಸಿ,ಎಲ್ಲರನ್ನು ಸ್ವಾಗತಿಸಿದರು.ಕಾರ್ಯಕ್ರಮದ ಸಂಯೋಜಕರಾದ ಪ್ರೋ.ಮೆಲ್ವಿನ್ ಡೀಸೊಜ ಮತ್ತು ಪ್ರೋ.ಬಾಲನಾಗೇಶ್ವರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
MIT KUNDAPURA: “ANTI-CORRUPTION AWARENESS PROGRAMME”
Moodlakatte institute of TechnolgyKundapura in association with YuvaSpandana Kendra Udupi and Anti-Corruption BureuUdupi organized an awareness programme on “Anti-Corruption” in the college campus. The chief guest, Mr. K R Naik, Industrialist in Kundapura, inaugurated the programme. In his speech he asked all the youngsters to support anti-corruption Bureau in abolishing corruption in the society.
Resource Person of the programme, Mr.Satish B S, Inspector, Anti-corruption bureau Udupi, conducted the programme and he explained what is corruption, How to identify the corruption, how to inform Anti-corruption bureau about the corruption incidents and role of each individuals in stopping corruption.
The principal, Dr.Kataiah G S in his presidential speech said “Honest and dedicated work will not allow anyone to join hands in corruption. Mr.NarasihmaGaniga, YuvaSpandana Kendra, Udupi, was present in the program. Student Manjunath compered the program.