ಮಾರ್ಚ್ 5ರಂದು ಅಬ್ಬನಡ್ಕದಲ್ಲಿ 13ನೇ ವರ್ಷದ ಸಾರ್ವಜನಿಕ ಮಹಾಶಿವರಾತ್ರಿ ಪೂಜೆ ಮತ್ತು ಭಜನಾ ಮಹೋತ್ಸವ

ಮಾರ್ಚ್ 5ರಂದು ಅಬ್ಬನಡ್ಕದಲ್ಲಿ 13ನೇ ವರ್ಷದ ಸಾರ್ವಜನಿಕ ಮಹಾಶಿವರಾತ್ರಿ ಪೂಜೆ ಮತ್ತು ಭಜನಾ ಮಹೋತ್ಸವ


ನಂದಳಿಕೆ,ಮಾ.೨:ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ವತಿಯಿಂದ 13ನೇ ವರ್ಷದ ಸಾರ್ವಜನಿಕ ಮಹಾಶಿವರಾತ್ರಿ ಪೂಜಾ ಮಹೋತ್ಸವ ಮತ್ತು ಭಜನಾ ಮಹೋತ್ಸವವು ಮಾರ್ಚ್ 5ರಂದು ಮಂಗಳವಾರ ನಂದಳಿಕೆಯ ಕುಂಟಲಗುಂಡಿಯಲ್ಲಿರುವ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸಾರ್ವಜನಿಕ ಶ್ರೀ ಗಣೇಶೋತ್ಸವದ ರಂಗಮಂದಿರದಲ್ಲಿ ಜರಗಲಿದೆ.
ಸಂಜೆ 6 ರಿಂದ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಮತ್ತು ನಂದಳಿಕೆ ಮಾವಿನಕಟ್ಟೆ ಶ್ರೀ ಮಾಹಮ್ಮಾಯಿ ಭಜನಾ ಮಂಡಳಿಯವರಿಂದ ಭಜನಾ ಮಹೋತ್ಸವ ಪ್ರಾರಂಭಗೊಂಡು ನಂದಳಿಕೆ ಪಾರ್ಲ ಸುಬ್ರಹ್ಮಣ್ಯ ಭಟ್‍ರವರ ನೇತೃತ್ವದಲ್ಲಿ ರಾತ್ರಿ 8 ರಿಂದ ಪೂಜೆ ಆರಂಭಗೊಂಡು ರಾತ್ರಿ 8.30ಕ್ಕೆ ಮಹಾಮಂಗಳರಾತಿ ಮಹಾಪೂಜೆ ಜರಗಿ ರಾತ್ರಿ 8.45ರಿಂದ ಪ್ರಸಾದ ವಿತರಣೆ ರಾತ್ರಿ 9 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ ಎಂದು ಸಂಘ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್‍ರವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.