ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ರವರ 55ನೇ ಹುಟ್ಟುಹಬ್ಬವನ್ನು ಜಿಲ್ಲಾ ಪಂಚಾಯಿತಿ ಸದಸ್ಯರಾದ ರೂಪಶ್ರೀ ಮಂಜುನಾಥ್ ಮನೆಯ ಆವರಣದಲ್ಲಿ ಹಣ್ಣಿನ ಸಸಿ ನೆಡುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಬೆಗ್ಲಿ ಪ್ರಕಾಶ್, ಎಂ.ನಾರಾಯಣಸ್ವಾಮಿ, ಹಾಲಳ್ಳಿ ರಾಮಚಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿ,ಎಸ್.ವೆಂಕಟೇಶ್, ಸದಸ್ಯೆ ರೋಪಶ್ರೀ ಮಂಜು, ನಗರಸಭೆ ಸದಸ್ಯ ಮಂಜುನಾಥ್ ಮಾಜಿ ಸದಸ್ಯರಾದ ಸಿ.ಸೋಮಶೇಖರ್, ವಿ.ಕೆ.ರಾಜೇಶ್, ಮುಖಂಡರಾದ ವಾಲ್ಮೀಕಿ ಮಂಜು, ಚಂದ್ರ ಪ್ರಕಾಶ್, ಮುಳ್ಳಹಳ್ಳಿ ಮಂಜುನಾಥ್, ಸೂಲೂರು ಅಶೋಕ್, ಬೆಳ್ಳೂರು ಸುರೇಶ್, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕಿ ಸರಸ್ವತಿ, ಶಾಂತಮ್ಮ, ಮಹೇಂದ್ರ ಗಾಣಿಗ, ಬಾಬಣ್ಣ, ವರ್ತೂರು ಪ್ರಕಾಶ್ ಮಕ್ಕಳಾದ ತೇಜಸ್, ಭರತ್, ನಿತೀನ್ ಮತ್ತಿತರರು ಹಾಜರಿದ್ದು ಹುಟ್ಟು ಹಬ್ಬಕ್ಕೆ ಶುಭಕೋರಿದರು.
