JANANUDI.COM NETWORK

ರಾಷ್ಠ್ರ ಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿçಯವರ ಜನ್ಮ ದಿನಾಚರಣೆಯನ್ನು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನೆರವೇರಿಸಲಾಯಿತು.
ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸೂಚನೆಯಂತೆ ಈ ದಿನವನ್ನು “ರೈತರು ಮತ್ತು ಕೃಷಿ ಕಾರ್ಮಿಕರನ್ನು ಉಳಿಸಿ” (ಕಿಸಾನ್ ಮಜ್ದೂರ್ ಬಚಾವೋ ದಿವಸ್ ಆಚರಣೆ) ದಿನವಾಗಿ ಆಚರಿಸಲಾಯಿತು.
ಮಹಾತ್ಮ ಗಾಂಧಿಯವರ ಶಾಂತಿಯುತ ಹೋರಾಟವೆ ದೇಶಕ್ಕೆ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರö್ಯ ಪಡೆಯಲು ಸಾಧ್ಯವಾಯಿತು. ಮಾತ್ರವಲ್ಲದೆ ಜಗತ್ತಿಗೆ ಶಾಂತಿ ಮತ್ತು ಸಹನೆಯ ಮಾರ್ಗದರ್ಶನವನ್ನು ನೀಡಿದರು. ಜಗತ್ತಿನ ಇತರ ದೇಶಗಳು ಗಾಂಧೀಜಿಯವರ ಆದರ್ಶಗಳನ್ನು ಹೋರಾಟಕ್ಕೆ ಅಳವಡಿಸಿ ಬ್ರಿಟಿಷ್ ಸಾಮ್ರಾಜ್ಯವನ್ನು ಕೊನೆಗಾಣಿಸಿದರು. ಇಂದು ಜಗತ್ತಿನಾದ್ಯಂತ “ಗಾಂಧಿ ಜಯಂತಿ” ಯನ್ನು ಆಚರಿಸಲಾಗುತ್ತಿದೆ ಎಂದು ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷರು, ಮಾಜಿ ಬ್ಲಾಕ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಾನ್ಮಕ್ಕಿ ಹರಿಪ್ರದಾದ ಶೆಟ್ಟಿಯವರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿçಯವರ ಧ್ಯೇಯವಾಕ್ಯವಾಗಿದ್ದ “ಜೈ ಜವಾನ್, ಜೈ ಕಿಸಾನ್” ಇಂದು ರೈತ ವಿರೋಧಿ ಮತ್ತು ಕಾರ್ಮಿಕ ವಿರೋದಿ ಮಸೂದೆಗಳಿಂದ “ಮರೋ ಜವಾನ್, ಮರೋ ಕಿಸಾನ್” ಎಂಬ ಹಂತಕ್ಕೆ ತಂದು ರೈತ ಮತ್ತು ಕಾರ್ಮಿಕ ವರ್ಗಕ್ಕೆ ಮರಣ ಶಾಸನವಾಗಿಸಿದ್ದಾರೆ ಎಂದರು.
ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಛಿತಾರ್ಥ ಶೆಟ್ಟಿ ಸಂದರ್ಭೋಚಿತವಾಗಿ ಈ ಸಂದರ್ಭದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಐ.ಟಿ ಸೆಲ್‌ನ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ, ಡಿಜಿಟಲ್ ಯುತ್ ಸಂಯೋಜಕ ರೋಶನ್ ಶೆಟ್ಟಿ, ಇಂಟಕ್ ಅಧ್ಯಕ್ಷ ಚಂದ್ರ ಅಮೀನ್, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ ಶೇರಿಗಾರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ ಶೆಟ್ಟಿ, ಸೇವಾದಳ ಅಧ್ಯಕ್ಷ ಕುಮಾರ ಖಾರ್ವಿ, ಯುವ ಮುಖಂಡರಾದ ಕೋಡಿ ಸುನಿಲ್ ಪೂಜಾರಿ, ಐ.ಟಿ. ಸೆಲ್ ಬ್ಲಾಕ್ ಅಧ್ಯಕ್ಷ ಶಿವಕುಮಾರ್, ಶಶಿರಾಜ್ ಪೂಜಾರಿ, ಆಶಾ ಕಾರ್ವಾಲ್ಲೋ, ಹೇಮಾ, ಜ್ಯೋತಿ ಡಿ. ನಾಯ್ಕ, ರಘುರಾಮ್ ನಾಯ್ಕ್, ಅಶೋಕ ಸುವರ್ಣ, ಶಶಿರ್, ವಿರೇಂದ್ರ, ಮಾಜಿ ಪುರಸಭಾ ಸದಸ್ಯ ಕೋಡಿ ಪ್ರಭಾಕರ, ಕೇಶವ ಭಟ್, ದಿನೇಶ್, ಮುನಾಫ್ ಕೋಡಿ, ಪಲ್ಲವಿ ಇನ್ನಿತರರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ, ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ಪ್ರಸ್ತಾವಿಕ ಮಾತುಗಳಿಂದ ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿದರು. ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ನಾರಾಯಣ ಆಚಾರಿ ವಂದಿಸಿದರು.