ವರದಿ: ವಾಲ್ಟರ್ ಮೊಂತೇರೊ
ಮರುಭೂಮಿಯ ಅರಬ್ ನಾಡಿನಲ್ಲಿ ೧೫ ನೇಯ ವಿಶ್ವ ಕನ್ನಡ ಸಮ್ಮೇಳನ
೧೫ ನೆಯ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಯು . ಎ . ಇ . ಯ ರಾಜಧಾನಿ ಅಬುಧಾಬಿಯಲ್ಲಿ ೨೨ ಮತ್ತು ೨೩ ಫೆಬ್ರವರಿ ೨೦೧೯ ರಂದು ಜರುಗಿತು. ಅಬುಧಾಬಿ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವಸುಂಧರಾ ಭೂಪತಿ (ಅಧ್ಯಕ್ಷೆ ಕನ್ನಡ ಪುಸ್ತಕ ಪ್ರಾಧಿಕಾರ ) ವಹಿಸಿದ್ದರು.
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರ ನೇತೃತ್ವದಿಂದ ನಡೆದ ಸಮ್ಮೇಳನದಲ್ಲಿ ಉತ್ತಮ ಕಾರ್ಯಕ್ರಮಗಳು ಮೂಡಿ ಬಂದವು. ಯು . ಎ. ಇ. ಯ. ಕನ್ನಡಿಗರ ಹೆಮ್ಮೆಯ ನಾಯಕ ಮತ್ತು ಅಬುದಾಬಿ ಕರ್ನಾಟಕ ಸಂಘದ ಮಹಾಪೋಷಕರಾದ ಏನ್ . ಎಂ . ಸಿ . ಸಮೂಹ ಸಂಸ್ಥೆಯ ಅಧ್ಯಕ್ಷ ಬಿ. ಆರ್ . ಶೆಟ್ಟಿಯವರು ಎರಡು ದಿನದ ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದು ಶುಭ ಹಾರೈಸಿದರು .
ಮೊದಲ ದಿನ ಸಾಂಪ್ರದಾಯಿಕ ಪೂರ್ಣ ಕುಂಭ , ಚಂಡೆ ನಾದದ ಮೂಲಕ ಅತಿಥಿಗಳನ್ನು ಸ್ವಾಗತಿಸಿ ವೇದಿಕೆಗೆ ಕರೆ ತರಲಾಯಿತು . ನಂತರ ಪ್ರಾರ್ಥನೆ , ದೀಪ ಬೆಳಗಿಸಿ , ಯು . ಎ . ಇ . ಮತ್ತು ಭಾರತದ ರಾಷ್ಟ್ರ ಗೀತೆ ಹಾಡಿ , ಗಣ್ಯರ ಪ್ರಾಸ್ತಾವಿಕ ಭಾಷಣದ ಮೂಲಕ ಸಮಾರಂಭ ಪ್ರಾರಂಭವಾಯಿತು. ಕರ್ನಾಟಕದಿಂದ ಬಂದ ವಿವಿಧ ತಂಡಗಳ ನೃತ್ಯ , ಕಿಕ್ಕೇರಿ ಕೃಷ್ಣ ಮೂರ್ತಿ ತಂಡದವರಿಂದ ರಸಮಂಜರಿ , ಗೋಪಿಯವರಿಂದ ಮಿಮಿಕ್ರಿ , ಅಬು ಧಾಬಿಯ ಕನ್ನಡಿತಿಯರಿಂದ ಜಾನಪದ ನೃತ್ಯ ಸೊಗಸಾಗಿ ಮೂಡಿ ಬಂದವು . ಯು. ಎ . ಇ. ಕನ್ನಡಿಗರ ಕವಿ ಗೋಷ್ಠಿ ಸಭೆಗೆ ಕಳೆ ಹೆಚ್ಚಿಸಿತು . ‘’ಬುದ್ಧನ ನಾಡು ಭೂತಾನ್ ‘’ ಕೃತಿ ಬಿಡುಗಡೆಯಾಯಿತು . ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಯೊಂದರ ಶ್ರವಣ ದೋಷದ ಮಕ್ಕಳು ಮಾಡಿದ ಚಿತ್ರಕಲೆ , ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು .
ಎರಡೆನೆಯ ದಿನ, ಸುಮಧುರ ಗೀತೆ , ನೃತ್ಯ ದಿಂದ ಶುರುವಾದ ಕಾರ್ಯಕ್ರಮ ಮುಂದುವರಿದು , ಎಂ . ಡಿ . ಕೌಶಿಕ್ ರವ ರು ಮ್ಯಾಜಿಕ್ ಜೊತೆಯಲ್ಲಿ ‘ಡಿ.ವಿ.ಜಿ . ಯವರ ಕಗ್ಗ ಮತ್ತು ಜೀವನ ಮೌಲ್ಯ’ ದ ಕುರಿತು ಉತ್ತಮ ವಿವರಣೆ ನೀಡಿದರು. ಮುಖ್ಯ ಮಂತ್ರಿ ಖ್ಯಾತಿಯ ಚಂದ್ರುವರು ಅರ್ಧ ಘಂಟೆ ಸೊಗಸಾಗಿ ಕನ್ನಡತನದ ಬಗ್ಗೆ ಅತ್ಯುತ್ತಮ ಭಾಷಣ ಮಾಡಿದರು . ಅನಂತರ ನಡೆದ ಅನಿವಾಸಿ ಕನ್ನಡಿಗರಿಂದ ಮೂಡಿ ಬಂದ ‘ಹನಿಗವನ ಗೋಷ್ಠಿ’, ಸಭಿಕರನ್ನು ನಗೆ ಗಡಲಿನಲ್ಲಿ ತೇಲಿಸಿತು . ಮದ್ಯಾಹ್ನ ನಂತರ ಮಾಧ್ಯಮ ಗೋಷ್ಠಿಯಲ್ಲಿ ವಿಶ್ವವಾಣಿಯ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ , ಇಂದಿನ ಮಾಧ್ಯಮಗಳು ಎದುರಿಸುವ ಸವಾಲುಗಳನ್ನು ಹಂತ ಹಂತವಾಗಿ ವಿವರಿಸಿದರು . ಜೊತೆಗೆ ಸಭಿಕರೊಂದಿಗೆ ಒಂದಷ್ಟು ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು .
ಸಮಾರೋಪ ಸಮಾರಂಭದಲ್ಲಿ ಸಮಾಜ ಸೇವೆ , ಕನ್ನಡ ಸೇವೆ , ಸಾಹಿತ್ಯ , ಚಿತ್ರರಂಗ, ನೃತ್ಯ , ರಂಗಭೂಮಿ , ಪರಿಸರದ ಕ್ಷೇತ್ರಗಳಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸಿದವರಿಗೆ ವಿಶ್ವಮಾನ್ಯ ಪ್ರಶಸ್ತಿ , ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ ನೀಡಿ ಗೌರವಿಲಾಯಿಸಿತು . ಸಮ್ಮೇಳನಕ್ಕಾಗಿ ಕರುನಾಡಿನಿಂದ ಬಂದ ಗಣ್ಯರನ್ನು , ಬಿ . ಆರ್ . ಶೆಟ್ಟಿ ಯವರನ್ನು, ಸರ್ವೋತ್ತಮ ಶೆಟ್ಟಿಯವರನ್ನು , ದುಡಿದ ಮುಖ್ಯ ಸ್ವಯಂ ಸೇವಕರನ್ನು , ಸಹಕಾರ ನೀಡಿದ ಶ್ರಮಿಕರನ್ನು ಆತ್ಮೀಯವಾಗಿ ಗೌರವಿಸಲಾಯಿತು .
ಎರಡು ದಿನದ ಕಾರ್ಯಕ್ರಮ ಉಡುಪಿಯ ಅವಿನಾಶ್ ಕಾಮತ್ ರವರ ನಿರೋಪಣೆಯೊಂದಿಗೆ ಬಹಳ ಅಚ್ಚುಕಟ್ಟಾಗಿ ಮೂಡಿ ಬಂತು . ಈ ಕಾರ್ಯಕ್ರಮಕ್ಕೆ ವಿವಿಧ ತಂಡಗಳು , ಕಲಾವಿದರು , ಪುಟ್ಟ ಮಕ್ಕಳು , ಅವರ ಹೆತ್ತವರು ಕರುನಾಡಿನ ಬೇರೆ ಬೇರೆ ಭಾಗಗಳಿಂದ ಬಂದದ್ದು ವಿಶೇಷವಾಗಿತ್ತು .
ಒಟ್ಟಿನಲ್ಲಿ ಎರಡು ದಿನದ ಕಾರ್ಯಕ್ರಮ ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಪ್ರೀಯರಿಗೆ ರಸದೌತಣ, ಸೇವಾ ನಿರತವರಿಗೆ ಸನ್ಮಾನ ,ಕಲಾವಿದರಿಗೆ ಪ್ರೋತ್ಸಾಹ ನೀಡಿತು . ಇಂದಿನ ನಾಗಾಲೋಟದ ತಂತ್ರಜ್ಞಾನದ ಯುಗದಲ್ಲಿ , ಇಂತಹ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುದು ಬಹಳ ಮುಖ್ಯ ವಾಗಿದೆ.
ಆದರೆ , ಈ ಸಮ್ಮೇಳನಕ್ಕೆ ಸಭಿಕರು ಕಡಿಮೆ ಬಂದದ್ದು ಎಲ್ಲೋ ಒಂದು ಕಡೆ ವಿಷಾದನೀಯ ಭಾವ ಮೂಡಿಸಿತು. ಕನ್ನಡ ಸಾಹಿತ್ಯ -ಕಲಾ ಸೇವೆ ನಿರಂತರವಾಗಿ ನಡೆದು , ಕನ್ನಡದ ಹಿರಿಮೆ ಹೆಚ್ಚುವಂತಹ ಕಾರ್ಯಕ್ರಮಗಳಲ್ಲಿ ಕನ್ನಡಿಗರ ಹೆಚ್ಚು ಹೆಚ್ಚು ಪಾಲ್ಗೊಳ್ಳುವಿಕೆ ಬಹಳ ಅತ್ಯವಶ್ಯವಾಗಿದೆ .
ಇತೀ ನಿಮ್ಮೆಲ್ಲರ ಪ್ರೀತಿಯ , ಅಬು ದಾಬಿ ಕರ್ನಾಟಕ ಸಂಘ
ಮರುಭೂಮಿಯ ಅರಬ್ ನಾಡಲ್ಲಿ ೧೫ನೆಯ ವಿಶ್ವ ಕನ್ನಡ ಸಮ್ಮೇಳನ
೧೫ ನೆಯ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಯು . ಎ . ಇ . ಯ ರಾಜಧಾನಿ ಅಬುಧಾಬಿಯಲ್ಲಿ ೨೨ ಮತ್ತು ೨೩ ಫೆಬ್ರವರಿ ೨೦೧೯ ರಂದು ಜರುಗಿತು. ಅಬುಧಾಬಿ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವಸುಂಧರಾ ಭೂಪತಿ (ಅಧ್ಯಕ್ಷೆ ಕನ್ನಡ ಪುಸ್ತಕ ಪ್ರಾಧಿಕಾರ ) ವಹಿಸಿದ್ದರು.
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರ ನೇತೃತ್ವದಿಂದ ನಡೆದ ಸಮ್ಮೇಳನದಲ್ಲಿ ಉತ್ತಮ ಕಾರ್ಯಕ್ರಮಗಳು ಮೂಡಿ ಬಂದವು. ಯು . ಎ. ಇ. ಯ. ಕನ್ನಡಿಗರ ಹೆಮ್ಮೆಯ ನಾಯಕ ಮತ್ತು ಅಬುದಾಬಿ ಕರ್ನಾಟಕ ಸಂಘದ ಮಹಾಪೋಷಕರಾದ ಏನ್ . ಎಂ . ಸಿ . ಸಮೂಹ ಸಂಸ್ಥೆಯ ಅಧ್ಯಕ್ಷ ಬಿ. ಆರ್ . ಶೆಟ್ಟಿಯವರು ಎರಡು ದಿನದ ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದು ಶುಭ ಹಾರೈಸಿದರು .
ಮೊದಲ ದಿನ ಸಾಂಪ್ರದಾಯಿಕ ಪೂರ್ಣ ಕುಂಭ , ಚಂಡೆ ನಾದದ ಮೂಲಕ ಅತಿಥಿಗಳನ್ನು ಸ್ವಾಗತಿಸಿ ವೇದಿಕೆಗೆ ಕರೆ ತರಲಾಯಿತು . ನಂತರ ಪ್ರಾರ್ಥನೆ , ದೀಪ ಬೆಳಗಿಸಿ , ಯು . ಎ . ಇ . ಮತ್ತು ಭಾರತದ ರಾಷ್ಟ್ರ ಗೀತೆ ಹಾಡಿ , ಗಣ್ಯರ ಪ್ರಾಸ್ತಾವಿಕ ಭಾಷಣದ ಮೂಲಕ ಸಮಾರಂಭ ಪ್ರಾರಂಭವಾಯಿತು. ಕರ್ನಾಟಕದಿಂದ ಬಂದ ವಿವಿಧ ತಂಡಗಳ ನೃತ್ಯ , ಕಿಕ್ಕೇರಿ ಕೃಷ್ಣ ಮೂರ್ತಿ ತಂಡದವರಿಂದ ರಸಮಂಜರಿ , ಗೋಪಿಯವರಿಂದ ಮಿಮಿಕ್ರಿ , ಅಬು ಧಾಬಿಯ ಕನ್ನಡಿತಿಯರಿಂದ ಜಾನಪದ ನೃತ್ಯ ಸೊಗಸಾಗಿ ಮೂಡಿ ಬಂದವು . ಯು. ಎ . ಇ. ಕನ್ನಡಿಗರ ಕವಿ ಗೋಷ್ಠಿ ಸಭೆಗೆ ಕಳೆ ಹೆಚ್ಚಿಸಿತು . ‘’ಬುದ್ಧನ ನಾಡು ಭೂತಾನ್ ‘’ ಕೃತಿ ಬಿಡುಗಡೆಯಾಯಿತು . ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಯೊಂದರ ಶ್ರವಣ ದೋಷದ ಮಕ್ಕಳು ಮಾಡಿದ ಚಿತ್ರಕಲೆ , ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು .
ಎರಡೆನೆಯ ದಿನ, ಸುಮಧುರ ಗೀತೆ , ನೃತ್ಯ ದಿಂದ ಶುರುವಾದ ಕಾರ್ಯಕ್ರಮ ಮುಂದುವರಿದು , ಎಂ . ಡಿ . ಕೌಶಿಕ್ ರವ ರು ಮ್ಯಾಜಿಕ್ ಜೊತೆಯಲ್ಲಿ ‘ಡಿ.ವಿ.ಜಿ . ಯವರ ಕಗ್ಗ ಮತ್ತು ಜೀವನ ಮೌಲ್ಯ’ ದ ಕುರಿತು ಉತ್ತಮ ವಿವರಣೆ ನೀಡಿದರು. ಮುಖ್ಯ ಮಂತ್ರಿ ಚಂದ್ರುರವರು ಅರ್ಧ ಘಂಟೆ ಸೊಗಸಾಗಿ ಕನ್ನಡತನದ ಬಗ್ಗೆ ಅತ್ಯುತ್ತಮ ಭಾಷಣ ಮಾಡಿದರು . ಅನಂತರ ನಡೆದ ಅನಿವಾಸಿ ಕನ್ನಡಿಗರಿಂದ ಮೂಡಿ ಬಂದ ‘ಹನಿಗವನ ಗೋಷ್ಠಿ’, ಸಭಿಕರನ್ನು ನಗೆ ಗಡಲಿನಲ್ಲಿ ತೇಲಿಸಿತು . ಮದ್ಯಾಹ್ನ ನಂತರ ಮಾಧ್ಯಮ ಗೋಷ್ಠಿಯಲ್ಲಿ ವಿಶ್ವವಾಣಿಯ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ , ಇಂದಿನ ಮಾಧ್ಯಮಗಳು ಎದುರಿಸುವ ಸವಾಲುಗಳನ್ನು ಹಂತ ಹಂತವಾಗಿ ವಿವರಿಸಿದರು . ಜೊತೆಗೆ ಸಭಿಕರೊಂದಿಗೆ ಒಂದಷ್ಟು ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು .