ಮನುಷ್ಯ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾನೋ ಹಾಗೆಯೇ ಮಣ್ಣನ್ನು ಸಹ ಆರೋಗ್ಯವಂತವಾಗಿ ಮಣ್ಣನ್ನು ಕಾಪಾಡಿಕೊಳ್ಳಬೇಕು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

ಮನುಷ್ಯ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾನೋ ಹಾಗೆಯೇ ಮಣ್ಣನ್ನು ಸಹ ಆರೋಗ್ಯವಂತವಾಗಿ ಮಣ್ಣನ್ನು ಕಾಪಾಡಿಕೊಳ್ಳಬೇಕು. 

 

 

ಶ್ರೀನಿವಾಸಪುರ ಮನುಷ್ಯ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾನೋ ಹಾಗೆಯೇ ಮಣ್ಣನ್ನು ಸಹ ಆರೋಗ್ಯವಂತವಾಗಿ ಮಣ್ಣನ್ನು ಕಾಪಾಡಿಕೊಳ್ಳಬೇಕು.  ಫಲವತ್ತಾದ ಮಣ್ಣಿನಿಂದ ಮಾತ್ರ ಆರೋಗ್ಯಕರ ಆಹಾರ ಉತ್ಪಾದಿಸಲು ಸಾಧ್ಯವೆಂದು ಕೃಷಿ ಸಹಾಯಕ ನಿರ್ದೇಶಕ ಧನಂಜಯ್ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆಯ ಕಛೇರಿಯಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಧನಂಜಯ್ ಎಲ್ಲಾ ಜೀವ ರಾಶಿಗಳಿಗೆ ಮಣ್ಣು ಮೂಲ ಆಧಾರ, ಮಣ್ಣು ಕಲುಶಿತವಾದರೆ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ. ರಾಸಾಯನಿಕ ಗೊಬ್ಬರಗಳಿಂದ ಮಣ್ಣು ಕಲುಶಿತಗೊಳ್ಳುತ್ತದೆ. ನಾವು ಹೆಚ್ಚಾಗಿ ಸಾವಯವ ಹಾಗೂ ತಿಪ್ಪೆ ಗೊಬ್ಬರವನ್ನು ಬಳಸಬೇಕು ಇತ್ತೀಚಿನ ದಿನಗಳಲ್ಲಿ ತಿಪ್ಪೆ ಗೊಬ್ಬರದಲ್ಲಿ ಎರೆ ಹುಳುಗಳು ಸಹ ಮಾಯವಾಗಿದೆ ಸೂಕ್ಷ್ಮ ಜೀವಿಗಳು ಕಾಣದಂತಾಗಿದೆ ಎಂದರು.
ನಾವು ಹೆಚ್ಚಾಗಿ ಸಿರಿಧಾನ್ಯಗಳನ್ನು ಬಳಸಬೇಕು ಇದರಿಂದ ಒಳ್ಳೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಸರ್ಕಾರ ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯಲು ಕೃಷಿ ಇಲಾಖೆಯಿಂದ ಸಹಾಯಧನವನ್ನು ನೀಡಲಾಗುವುದು. ರೈತರು ಇಂತಹ ಅವಕಾಶವನ್ನು ಉಪಯೋಗಿಸಿಕೊಂಡು ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಬೇಕು ಮಣ್ಣಿನ ಆರೋಗ್ಯವನ್ನು ಕಾಪಾಡುವ ರೀತಿಯಲ್ಲಿ ಕೃಷಿಗೆ ತಕ್ಕ ಮಟ್ಟಾದರು ನಾವು ಫಲವತ್ತಾದ ಮಣ್ಣನ್ನು ಉಳಿಸಬಹುದು. ಮಣ್ಣು ವಿಷವಾದರೆ ಭೂಮಿ ಸಹ ವಿಷವಾಗುತ್ತದೆ ಆದ್ದರಿಂದ ಮಣ್ಣನ್ನು ಕಾಪಾಡಿಕೊಳ್ಳುವ ಜೊತೆಗೆ ಮುಂದಿನ ಪೀಳಿಗೆಗೆ ಮಣ್ಣನ್ನು ಉಳಿಸುವ ಕಾರ್ಯಕ್ಕೆ ನಾವು ನೀವೆಲ್ಲರೂ ಉಂದಾಗಬೇಕೆಂದು ತಿಳಿಸಿದರು.
ಕಸಬಾ ಸಹಾಯಕ ಕೃಷಿ ಅಧಿಕಾರಿ ಮಂಜುನಾಥ್ ಮಾತನಾಡಿ ಮಣ್ಣಿಗೂ ಸಹ ಜೀವ ಇದೆ ಮಣ್ಣು ಘನ, ದ್ರವ, ಹಾಗೂ ಅನಿಲ ರೂಪದ ಸಾಮಗ್ರಿಯಿಂದ ಮಾಡಿದ ಒಂದು ಸಂಕೀರ್ಣ ವ್ಯವಸ್ಥೆ ಮಣ್ಣಿನಲ್ಲಿರುವ ಘನ ವ್ಯತ್ಯಾಸಹೊಂದುವ ಗಾತ್ರದ ಖನಿಜ ವಸ್ತುಗಳು ಒಳಗೊಂಡಿರುತ್ತದೆ. ಮಣ್ನು ಕೂಡ ಸಸ್ಯಗಳ ಬೆಳವಣಿಗೆಗೆ ಸಾಕಷ್ಟು ನೀರನ್ನು ಸಂಗ್ರಹಿಸಿ ಮಾಡುವುದಲ್ಲದೆ ಸಸ್ಯದ ಬೇರುಗಳಿಗೆ ಸಮಪರ್ಕವಾಗಿ ಗಾಳಿಯಾಡುವುದಕ್ಕೆ ಅವಕಾಶ ನೀಡುತ್ತದೆ. ರೈತರು ತಮ್ಮ ಭೂಮಿಯಲ್ಲಿ ಒಂದೇ ಬೆಳೆಯನ್ನು ಬೆಳೆಯಬಾರದು ಕಾಲಕ್ಕೆ ತಕ್ಕಂತೆ ಬೆಳೆಯನ್ನು ಬೆಳೆಯಬೇಕು ಹೆಚ್ಚಾಗಿ ರೈತರು ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಮಾಡಿ ತಿಪ್ಪೆ ಗೊಬ್ಬರವನ್ನು ಬಳಸಿ ಇದರಿಂದ ಉತ್ತಮ ಬೆಳೆಯನ್ನು ಬೆಳೆಯಬಹುದು ನಮ್ಮ ಇಲಾಖೆಯಲ್ಲಿ ರೈತರಿಗೆ ಅನೇಕ ಸೌಲಭ್ಯಗಳು ಒದಗಿಸಿಕೊಟ್ಟಿದೆ ಇದರ ಪ್ರಯೋಜನವನ್ನು ಪ್ರತಿಯೊಬ್ಬ ರೈತರು ಬಳಸಿಕೊಂಡು ತಮ್ಮ ಜೀವನವನ್ನು ಉತ್ತಪಡಿಸಕೊಳ್ಳಬೇಕೆಂದು ತಿಳಿಸಿದರು.
ಇದೇ ಸಮಯದಲ್ಲಿ ರೈತಸೇನೆಯ ಜಿಲ್ಲಾ ಕಾರ್ಯದರ್ಶಿ ಚಲ್ದಿಗಾನಹಳ್ಳಿ ಪ್ರಭಾಕರ್ ಗೌಡ ಮತ್ತು ಸಾವಯವ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ವಿ.ರೆಡ್ಡಪ್ಪ, ಮಣ್ಣಿನ ವಿಷೇಶತೆ ಹಾಗೂ ಸಿರಿಧಾನ್ಯಗಳ ಮಹತ್ವದ ಬಗ್ಗೆ ಸಂಪೂರ್ಣವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಹೆಬ್ಬಟ ರಮೇಶ್, ಪ್ರಗತಿಪರ ರೈತರು ಹಾಗೂ ಕಛೇರಿಯ ಸಿಬ್ಬಂದಿ ಹಾಜರಿದ್ದರು.